ಭಾನುವಾರ , ಡಿಸೆಂಬರ್ 22 2024
kn
Breaking News

ಮುಗಳಕೊಡ

ಮೂಡಲಗಿಯಲ್ಲಿ ಕೊರೋನಾ ಸೋಂಕಿತೆ ಪತ್ತೆ: ಖಾಸಗಿ ಆಸ್ಪತ್ರೆ, ಪೆಟ್ರೊಲ್ ಪಂಪ್ ಸೀಲ್-ಡೌನ್…!

ಮೂಡಲಗಿ: ಕೊರೋನಾ ಸೋಂಕಿತರಿಲ್ಲದೆ, ಸುಮಾರು ದಿನಗಳಿಂದ ಸದ್ದಿಲ್ಲದೆ ಶಾಂತವಾಗಿದ್ದ ಮೂಡಲಗಿ ಪಟ್ಟಣವು ಇಂದು ಅಸ್ತವ್ಯಸ್ತವಾಗುವ ಸನ್ನಿವೇಶ ಎದುರಾಗಿದೆ. ಏಕೆಂದರೆ ಮೂಡಲಗಿ ಪಟ್ಟಣದ ತಳವಾರ ಓಣಿಯಲ್ಲಿ ಒಂದು ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದೆಯೆಂದು ಮೂಡಲಗಿ ತಾಲೂಕಿನ ತಹಶಿಲ್ದಾರ ಮಹಾತರವರು ನಮ್ಮ ಪತ್ರಿಕೆಗೆ ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ 38 ವರ್ಷದ ಮಹಿಳೆಯಲ್ಲಿ ಇಂದು ಕೋರೊನಾ ಸೋಂಕು ಇರೋದು ದೃಡವಾಗಿದೆ. ನಿನ್ನೆ ಪಟ್ಟಣದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದ ಮಹಿಳೆಗೆ ರೋಗ …

Read More »

ಲೇಖನ: ಪರಿಸರ ಪ್ರೇಮಿ ಸಾಲು ಮರದ ತಿಮ್ಮಕ್ಕ

ಸಾಲುಮರದ ತಿಮ್ಮಕ್ಕ – ಇವರು ಕರ್ನಾಟಕದಲ್ಲಿ ಜನಿಸಿ ನೆಲೆಸಿರುವ ಒಬ್ಬ ಭಾರತೀಯ ಪರಿಸರವಾದಿ. ತಮಗೆ ಮಕ್ಕಳಿಲ್ಲದ ಕಾರಣಕ್ಕೆ ರಸ್ತೆಯ ಬದಿಯಲ್ಲಿ ಆಲದಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿದ ಈಕೆ ಓರ್ವ ಅನಕ್ಷರಸ್ಥೆಯಾಗಿದ್ದುಕೊಂಡು ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡಿದುದನ್ನು ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಗಮನಿಸಿ ಪುರಸ್ಕರಿಸಿವೆ ಅಲ್ಲದೆ ಈಕೆ ಮುಂದಿನ ಪೀಳಿಗೆಯ ಒಳಿತಿಗಾಗಿ ಮರಗಳಿಗೆ ನೀರುಣಿಸಿ ಬೆಳೆಸಿದದ್ದಾಳೆ.ಅವರ ಈ ಕೆಲಸವನ್ನು ಭಾರತದ ರಾಷ್ಟ್ರೀಯ ಪೌರ ಪ್ರಶಸ್ತಿಯಿತ್ತು …

Read More »

ನೀರಲ್ಲಿ ಕೊಚ್ಚಿ ಹೋದ ಏನು ಅರಿಯದ ಎಳು ವರ್ಷದ ಮುಗ್ದ ಬಾಲಕ

ಮುಗಳಖೋಡ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡದ ಪಟ್ಟಣದ ಲಮಾಣಿ ತಾಂಡಾ ಹತ್ತಿರ ಇರುವ ಘಟಪ್ರಭಾ ಎಡದಂಡೆ ಕಾಲುವೆಯಲ್ಲಿ ಬಸವರಾಜ ಗೌಲೆತ್ತಿನವರ ವಯಸ್ಸು 7 ವರ್ಷ ಇತ ಗೆಳೆಯಯರ ಜೊತೆಗೆ ಈಜಲು ಹೋಗಿ ಅದೆ ಕಾಲುವೆಯಲ್ಲಿ ಕೊಚ್ಚಿ ಹೋದ ಘಟನೆ ಸುಮಾರು 12 ಘಂಟೆಗೆ ನಡೆದಿದೆ. ಬಾಲಕನ ಹುಡುಕಾಟದಲ್ಲಿ ಸ್ಥಳೀಯರು ಬಾಗಿಯಾಗಿದ್ದಾರೆ. ಬಾಲಕನ ತಂದೆ ಹಾಗೂ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ಸುಮಾರು 12 ಘಂಟೆಯಿಂದ ಸ್ಥಳೀಯರ ಸಹಕಾರದಿಂದ ಹುಡುಕಾಟ …

Read More »

ಕೊರೊನಾ ವಾರಿಯರ‍್ಸಗೆ ಅಭಾಜಿ ಪೌಂಡೇಶನ್ ವತಿಯಿಂದ ಸನ್ಮಾನ

ಮುಗಳಖೋಡ: ರಾಯಬಾಗ ತಾಲೂಕಿನ ಸುಕ್ಷೇತ್ರ ಮುಗಳಖೋಡ ಪಟ್ಟಣದಲ್ಲಿ ಡಾ.ಸಿ.ಬಿ.ಕುಲಿಗೋಡ ಅವರ ನಿವಾಸದಲ್ಲಿ ರಾಯಬಾಗದ ಅಭಾಜಿ ಪೌಂಡೇಶನ್ ವತಿಯಿಂದ ಕೊರೊನಾ ವಾರಿರ‍್ಸಗೆ ಹಮ್ಮಿಕೊಂಡ ಸತ್ಕಾರ ಸಮಾರಂಭದ ನೇತೃತ್ವವಹಿಸಿ ಮಾತನಾಡಿದ  ಡಾ.ಸಿ.ಬಿ.ಕುಲಿಗೋಡ ಈಗಾಗಲೇ ಸಾಕಷ್ಟು ಕುಟುಂಬಗಳಿಗೆ ಕಲ್ಲಗಂಡಿ, ಆಹಾರ ಸಾಮಗ್ರಿಗಳನ್ನು ಹಂಚಿ ನಮ್ಮ ಕೈಲಾದ ಸಹಾಯವನ್ನು ಮಾಡಿದ್ದೇವೆ. ಅದರೊಂದಿಗೆ ಇಂದು ಆಶಾ ಕಾರ್ಯಕರ್ತರಿಯರಿಗೆ ಆಹಾರ ಸಾಮಗ್ರಿಗಳ ಕಿಟ್‌ನ್ನು ವಿತರಿಸುತ್ತಿದ್ದೇವೆ ಎಂದು ಹೇಳಿದರು. ಪ್ರಪಂಚವನ್ನೇ ಬೆಚ್ಚಿಳಿಸಿರುವ ಕಿಲ್ಲರ ಕೊರೊನಾ ರೋಗ ದಿನದಿಂದ ದಿನಕ್ಕೆ ದೇಶದಲ್ಲಿ …

Read More »

ಕರೋನಾ ವಾರಿರ‍್ಸ್ಗೆ ಸಿಹಿ ಊಟ: ಅಭಿನಂದನಾ ಪತ್ರ ವಿತರಿಸಿದ ಸಹಕಾರಿ ದುರೀಣ ಮಲ್ಲಿಕಾರ್ಜುನ ತೇಲಿ

ಮುಗಳಖೋಡ: ಕೋವಿಡ್-೧೯ ಮಹಾಮಾರಿ ಕರೋನಾ ವಿರುದ್ಧದ ಹೋರಾಟದಲ್ಲಿ ತಮ್ಮ ಕುಟುಂಬ, ಜೀವದ ಹಂಗು ತೊರೆದು ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಕರೋನಾ ವಾರಿರ‍್ಸ್ ಕಾರ್ಯ ಶ್ಲಾಘನೀಯ. ಹಂದಿಗುಂದದಲ್ಲಿ ಪ್ರಪ್ರಥಮವಾಗಿ ಸಹಾಯವಾಣಿ ಪ್ರಾರಂಭಿಸಿ ಗುರು ಹಿರಿಯರ, ವಿವಿಧ ಮುಖಂಡರ, ದಾನಿಗಳ ಸಹಾಯದಿಂದ ಪ್ರತಿನಿತ್ಯ ಕಡು ಬಡವ, ದೀನ ದಲಿತರ ಮನೆ ಮನೆಗೆ ತರಕಾರಿ ಹಾಲು, ಹಣ್ಣು ಹಾಗೂ ಔಷಧಿಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಸಮುದಾಯದ ಸಹಕಾರ ಅತ್ಯಗತ್ಯ ಎಂದು ಹಂದಿಗುಂದದ ಸಹಕಾರಿ …

Read More »

ಎಣ್ಣೆ ಅಂಗಡಿ ಪ್ರಾರಂಭಕ್ಕೆ ಸಕಲ ಸಜ್ಜು

ಮೂಡಲಗಿ: ಪಟ್ಟಣದಲ್ಲಿ ನಾಲ್ಕು ವೈನ್ಸ್ ಶಾಪ ಸೇರಿ ಒಂದು ಎಮ್.ಎಸ್.ಆಯ್.ಎಲ್ ಪ್ರಾರಂಭಕ್ಕೆ ರವಿವಾರ ಸಂಜೆ ಸಕಲ ಸಿದ್ದತೆಯನ್ನು ಮಾಡಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಕಟ್ಟಿಗೆ ಕಟ್ಟಿ ಹಾಗೂ ಚೌಕ್-ಬಾಕ್ಷಗಳನ್ನು ಮತ್ತು ಬ್ಯಾರಿಕೆಡ್ ಹಾಕಿ ಪೂಜೆ ಸಲ್ಲಿಸಿ ಅಂಗಡಿ ತೆರೆಯಲು ಸಜ್ಜಾಗಿ ನಿಂತಿವೆ. ಮೂಡಲಗಿ ಪಟ್ಟಣದಲ್ಲಿ ದುರ್ಗಾ ವೈನ್ಸ್, ಹೊನ್ನಮ್ಮಾ ವೈನ್ಸ್, ರಾಜೇಶ್ವರಿ ವೈನ್ಸ್, ಎಂಎಸ್‌ಐಎಲ್ ಹಾಗೂ ಚೇತನ ವೈನ್ಸ್  ಸಜ್ಜಾಗಿ ನಿಂತಿರುವ ದೃಶ್ಯ ಕಾಣಿಸಿತು. ಕಳೆದ ಎರಡು ತಿಂಗಳುಗಳಿಂದ ಜಾತಕ …

Read More »

ಲಾಕ್ ಡೌನ್ ಸಡಲಿಸಿ, ಮದ್ಯಪ್ರಿಯರಿಗೆ ಮದ್ಯ ಬಾಗ್ಯ ಕಲ್ಪಿಸಿದ ಸರ್ಕಾರ

ದೇಶದಲ್ಲಿ ಕೋರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಲಾಕ್ ಡೌನ್ ಘೋಷಿಸಿತ್ತು. ಇದರ ಪರಿಣಾಮ ರಾಜ್ಯದಲ್ಲಿ ಮದ್ಯ ಮಾರಾಟ ಸಂಪೂರ್ಣ ಬಂದಾಗಿತ್ತು. ಇದನ್ನ ಅರಿತ ಮದ್ಯಪ್ರಿಯರು ಕಳ್ಳಬಟ್ಟಿ ಸರಾಯಿಗೆ ಮೊರೆ ಹೋಗಿದ್ದರು. ದುಬಾರಿ ದರ ಪಡೆದುಕೊಂಡು ಹಲವೆಡೆಗಳಲ್ಲಿ ಕಳ್ಳತನದಿಂದ ಮದ್ಯ ಮಾರಾಟಗಾವಾಗುತ್ತಿತ್ತು. ಇದನ್ನು ಮನಗಂಡು ರಾಜ್ಯ ಸರ್ಕಾರ ಕೆಲವೊಂದು ಷರತ್ತುಗಳನ್ನ ವಿದಿಸಿ ಮದ್ಯಪ್ರಿಯರಿಗೆ ಮೇ.4 ಬೆಳಿಗ್ಗೆ 9ಘಂಟೆಯಿಂದ  ಮದ್ಯ ಮಾರಾಟಕ್ಕೆ ಆದೇಶ ಹೊರಡಿಸಿದೆ. ಕೇಂದ್ರ/ರಾಜ್ಯ/ಜಿಲ್ಲಾಡಳಿತ …

Read More »

ಸುಕ್ಷೇತ್ರ ಬಂಡಿಗಣಿ ಶ್ರೀಮಠದಿಂದ ಅನ್ನದಾಸೋಹ ಕಾರ್ಯಕ್ರಮ

ಮುಗಳಖೋಡ: ಪ್ರಪಂಚವನ್ನೇ ಬೆಚ್ಚಿಳಿಸಿರುವ ಕಿಲ್ಲರ ಕೊರೊನಾ ರೋಗ ದಿನದಿಂದ ದಿನಕ್ಕೆ ದೇಶದಲ್ಲಿ ತನ್ನ ಅಟ್ಟಹಾಸವನ್ನು ಮುಂದುವೆರೆಸಿದೆ. ಈ ಹಿನ್ನಲೆಯಲ್ಲಿ ದೇಶದಲ್ಲಿ ಲಾಕ್‌ಡೌನ್ ಜಾರಿಯಲ್ಲಿ ಇದ್ದು, ಇದರಿಂದಾಗಿ ಕೂಲಿಕಾರ್ಮಿಕ, ಅಲೇಮಾರಿ ಜನಾಂಗ, ಬಡಕುಟುಂಟುಗಳ ಪರಿಸ್ಥಿತಿ ಅದೋಗತಿಯಾಗಿ ಜೀವಿಸಲು ಒಂದು ಹೊತ್ತು ಆಹಾರಕ್ಕೂ ಹುಡುಕಾಡುವಂತಾಗಿದೆ. ಇಂತಹ ಸಮಯದಲ್ಲಿ ಅನ್ನದಾನ ಮಹಾದಾನ ಪರಮದಾನ ಎಂಬಂತೆ ಯಾವ ಯಾವ ಊರುಗಳಲ್ಲಿ ಬಡಕುಟುಂಬ, ಕೂಲಿಕಾರ್ಮಿಕ ಹಾಗೂ ಅಲೇಮಾರಿ ಜನಾಂಗದವರು ಇರೂವರೋ ಅಲ್ಲಿಗೆ ಹೋಗಿ ಶ್ರೀಮಠದಿಂದ ಅನ್ನಪ್ರಸಾದ ತಯಾರಿಸಿ …

Read More »

ಡಾ. ಸಿ ಬಿ.ಕುಲಿಗೋಡ ಅವರಿಂದ ಕಲ್ಲಂಗಡಿ ಹಣ್ಣು ವಿತರಣೆ

ಮುಗಳಖೋಡ: ಜಗತ್ತಿನಾದ್ಯಂತ ಹಬ್ಬಿರುವ ಮಹಾಮಾರಿ ಕೊರೋನಾ ವಿರುದ್ದ ದೇಶಾದ್ಯಂತ ಎಲ್ಲೇಡೆ ಲಾಕ್ ಡೌನ್ ಘೋಷಣೆಯಾಗಿ ಹಲವಾರು ದಿನಗಳು ಜನಜೀವನ ದುಸ್ತರವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೂ ಸಹ ಸಾರ್ವಜನಿಕರಿಗೆ ಈ ಕೊರೋನಾ ವೈರಾಣುವಿನ ಭೀಕರತೆ ಹಾಗೂ ಅದರಿಂದಾಗುವ ಜೀವಹಾನಿಯ ಬಗ್ಗೆ ನಿರಂತರವಾಗಿ ಮುಂಜಾಗ್ರತಾ ಕ್ರಮ ಹಾಗೂ ಕೊರೋನಾ ವೈರಾಣು ಹರಡದಂತೆ ಪಾಲಿಸಬೇಕಾದ ಕ್ರಮಗಳ ಕುರಿತಾದ ಸಂದೇಶಗಳನ್ನು ನೀಡತ್ತಲೇ ಇವೆ. ಅದರಂತೆ ಗ್ರಾಮೀಣ ಪ್ರದೇಶದ ಜನರ ಆರೋಗ್ಯದ ದೃಷ್ಟಿಯಿಂದ ಗ್ರಾಮ ಮಟ್ಟದಲ್ಲೂ …

Read More »

ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಹೂಗುಚ್ಚ ನೀಡಿ ಗೌರವಿಸಿದ: ಪ್ರಶಾಂತ ಚೌಗಲಾ

ಪರಮಾನಂದವಾಡಿ: ಕೋರೋನಾ ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರಾಮದ ಆರ್ ಎಸ್ ಎಸ್ ಹಾಗೂ ಗ್ರಾಮದ ಜನತೆಯಲ್ಲ ಸೇರಿ ಅವರಿಗೆ ಹೂಗುಚ್ಛ ನೀಡುವುದರ ಮೂಲಕ ಗೌರವಿಸಲಾಯಿತು. ಗ್ರಾಮದ ಪ್ರಮುಖ ಬೀದಿ- ಬೀದಿಗಳಲ್ಲಿ ಸಂಚರಿಸುತ್ತಾ ಕೋರೋನಾ ಬಗ್ಗೆ ವಿವರಿಸಿ ತಿಳಿಸುತ್ತಾ, ಗ್ರಾಮದ ಎಲ್ಲ ಮನೆಯವರು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಹೂ ಹಾರಿಸುವುದರ ಮೂಲಕ ಅವರಿಗೆ ಸ್ವಾಗತವನ್ನು ಮಾಡಲಾಯಿತು. ಈ ವೇಳೆಯಲ್ಲಿ ಮಾತನಾಡಿದ ಆರ್ ಎಸ್ …

Read More »

You cannot copy content of this page