ಭಾನುವಾರ , ಡಿಸೆಂಬರ್ 22 2024
kn
Breaking News

ಅಂತರಾಷ್ಟ್ರೀಯ

ಲಾಕ್ ಡೌನ್ ಇದ್ದರೂ, ಉಪವಾಸ ಧರಣಿ ಕೂತ: ಶಾಸಕ ಆನಂದ ನ್ಯಾಮಗೌಡ

ಜಮಖಂಡಿ: ಸರ್ಕಾರದ ಆಜ್ಞೆಯಿದ್ದರೂ ಕೃಷ್ಣೆಗೆ ನೀರು ಬಿಡದ ಅಧಿಕಾರಿಗಳನ್ನು ಅಮಾನತು ಗೊಳಿಸುವಂತೆ ಶಾಸಕ ಆನಂದ ನ್ಯಾಮಗೌಡರಿಂದ ಆಗ್ರಹ ಹಿಪ್ಪರಗಿ ಬ್ಯಾರೇಜ್ನಿಂದ ಸರ್ಕಾರದ ಆದೇಶದಂತೆ ನಮ್ಮ ಚಿಕ್ಕಪಡಸಲಗಿ ಬ್ಯಾರೇಜ್ ಶ್ರಮಬಿಂದು ಸಾಗರಕ್ಕೆ ಇವತ್ತು ಸರ್ಕಾರ ನೀರು ಹರಿಸಬೇಕಾಗಿತ್ತು ಆದರೆ ರೈತ ವಿರೋಧಿ ಈಗಿನ ಬಿಜೆಪಿ ಸರ್ಕಾರ ಅದನ್ನು ತಡೆಹಿಡಿದಿದೆ ಇದನ್ನು ವಿರೋಧಿಸಿ ಮಾನ್ಯ ಜಮಖಂಡಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಆನಂದ್ ಸಿದ್ದು ನ್ಯಾಮಗೌಡ ಅವರು ಸಾವಿರಾರು ರೈತರೊಂದಿಗೆ ಧರಣಿ ಸತ್ಯಾಗ್ರಹವನ್ನು ಹಿಪ್ಪರಗಿಯಲ್ಲಿ …

Read More »

ಪೌಡರ್‍ಪ್ಲಾಂಟ್‍ನಲ್ಲಿ ದುಡಿಯುತ್ತಿರುವ ಕಾರ್ಮಿಕರು, ಸಿಬ್ಬಂದಿಗಳನ್ನು ಅಭಿನಂದಿಸಿದ: ಬಾಲಚಂದ್ರ ಜಾರಕಿಹೊಳಿ

ರಾಮನಗರ: ಕೊರೊನಾ ಹಿನ್ನಲೆಯಲ್ಲಿ ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ಟ್ರೇಟ್ರಾ/ಪ್ಲೆಕ್ಸಿಪ್ಯಾಕ್ ಮಾದರಿಯ ಹಾಲುಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಇವುಗಳನ್ನೇ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ದೊರೆಯುವಂತೆ ಮಾಡಲು ಮುಂದಿನ ದಿನಗಳಲ್ಲೂ ಸಹ ಸನ್ನದ್ಧರಾಗುವಂತೆ ಕೆಎಮ್‍ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚಿಸಿದರು. ಬುಧವಾರ ಸಂಜೆ ರಾಮನಗರದ ಹಾಲಿನ ಪುಡಿ ಘಟಕಕ್ಕೆ ಭೇಟಿ ನೀಡಿದ ಬಳಿಕ ಕೆಎಮ್‍ಎಫ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗುವಂತೆ ಸೂಚನೆ ನೀಡಿದರು. …

Read More »

ಕೆರೂರ ಗ್ರಾಮಕ್ಕೆ ಮಾಸ್ಕ್ ವಿತರಿಸಿದ: ಅಣ್ಣಾಸಾಹೇಬ ಜೊಲ್ಲೆ

ಕೇರೂರ: ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕೇರೂರ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮ ಪಂಚಾಯತ್ ಆವರಣದಲ್ಲಿ, ವಿವಿಧ ಇಲಾಖೆ ಅಧಿಕಾರಿಗಳು, ಪಂಚಾಯತ್ ಸದಸ್ಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರೊಂದಿಗೆ ಚಿಕ್ಕೋಡಿ ಲೋಕಸಭೆಯ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಕೊರೋನಾ ವೈರಸ್ ತಡೆಗಟ್ಟಲು ತೆಗೆದುಕೊಳ್ಳಲಾದ ಕ್ರಮಗಳ ಕುರಿತು ಚರ್ಚಿಸಿ, ಮುನ್ನೆಚ್ಚರಿಕಾ ಕ್ರಮಗಳ ಕುರಿತು ಸಭೆ ಉದ್ದೇಶಿಸಿ, ಮಾತನಾಡಿದರು. ಈ ಸಂದರ್ಭದಲ್ಲಿ ನಾಗರಿಕರಿಗೆ ಮಾಸ್ಕ್ ವಿತರಿಸಿ, ಗ್ರಾಮದ ಸ್ವಚ್ಚತೆಗೆ ಆದ್ಯತೆ …

Read More »

ಕೋರೊನಾ ಸೊಂಕಿತರ ಬಗ್ಗೆ ಸುಳ್ಳು ಮಾಹಿತಿ ನೀಡುತ್ತಿದೆಯಾ ಸರ್ಕಾರ..!

ಕರ್ನಾಟಕ ರಾಜ್ಯದಲ್ಲಿ ಕೋವಿಡ್-೧೯ ಸೊಂಕಿತರ ಸಂಖ್ಯೆ ೧೮೧ ಕ್ಕೆ ಏರಿಕೆ ಆಗಿದೆ ಇದರಲ್ಲಿ ೨೮ ಜನ ಗುಣಮುಖರಾಗಿದ್ದಾರೆ, ೫ ಜನ ಮರಣ ಹೊಂದಿರುವ ಬಗ್ಗೆ ಇಂದು ಆರೋಗ್ಯ ಇಲಾಖೆ ಸ್ಪಷ್ಟ ಪಡಿಸಿದೆ. ಕೋರೊನಾ ವೈರಸ್ ಹರಡದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ೨೧ ದಿನಗಳ ಕಾಲ ದೇಶವನ್ನ ಲಾಕ್ ಡೌನ್ ಆದೇಶ ಮಾಡಿ, ದೇಶದ ಪ್ರಜೆಗಳ ಆರೋಗ್ಯ ಕಾಪಾಡಲು ಹಗಲಿರುಳು ಸರ್ಕಾರ, ವೈದ್ಯರು, ಆರಕ್ಷಕರು, …

Read More »

ಸರ್ಕಾರಿ ಶಾಲೆಯ ಬಿಸಿಯೂಟದ ಆಹಾಧಾನ್ಯಗಳ ವಿತರಣೆ

ಮೂಡಲಗಿ: ತುಕ್ಕಾನಟ್ಟಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಪಾಲಕರಿಗೆ ಆಹಾರಧಾನ್ಯಗಳನ್ನು ವಿತರಿಸಲಾಯಿತು. ಕೊರೊನಾ ವೈರಸ್ ಸೋಂಕಿನಿಂದಾಗಿ ರಾಜ್ಯದಲ್ಲಿ ಲಾಕಡೌನ ಘೋಷಣೆಯಾದ ಕಾರಣ, ಶಾಲೆಗಳಿಗೆ ಡಿಡೀರ ರಜೆ ಘೋಷಣೆಯಾದ ಸಂದರ್ಭದಲ್ಲಿ ಅಕ್ಷರದಾಸೋಹದ ಮದ್ಯಾಹ್ನದ ಬಿಸಿಯೂಟ ನಂಬಿಕೊಂಡಿದ್ದ ಎಷ್ಟೋ ಬಡವಿದ್ಯಾರ್ಥಿಗಳ ಆರ್ಥಿಕ ಪರಿಸ್ಥಿತಿಯನ್ನು ದೃಷ್ಟಿಯಲ್ಲಿಟ್ಟುಕೊಂಡ ಸರ್ಕಾರ, ಮಾರ್ಚ 14 ರಿಂದ ಎಪ್ರೀಲ್ 10ರ ವರೆಗಿನ 21 ದಿನಗಳ ಕಾಲದ ಆಹಾರ ಧಾನ್ಯಗಳನ್ನು ವಿದ್ಯಾರ್ಥಿಗಳ ಪಾಲಕರಿಗೆ ವಿತರಿಸಲು ಆದೇಶಿಸಿದ ಕಾರಣ, ತುಕ್ಕಾನಟ್ಟಿಯ …

Read More »

ಕೋರೊನಾ ಜಾಗೃತ ಗೀತೆ ಕೇಳಿ: ಉತ್ತರ ಕರ್ನಾಟಕದ ಶೈಲಿಯಲ್ಲಿ

ಖಾನಟ್ಟಿ:  ಮಾಹಾಮಾರಿ ಕೊರೋನಾ ತನ್ನ ರಣಕೇಕೆ ಮೂಲಕ ಅಮಾಯಕ ಮುಗ್ದರ ಬದುಕನ್ನೇ ಅಂತ್ಯಗೊಳಿಸುತ್ತಿದೆ. ದೇಶಕ್ಕೆ ದೇಶವೇ ಸ್ಥಬ್ದವಾದ ಘೋರ ಸನ್ನಿವೇಶದಲ್ಲಿ ಹಳ್ಳಿಯಿಂದ ದಿಲ್ಲಿಯವರೆಗೂ ಜನರ ಬದುಕನ್ನ ಕಿತ್ತು ತಿನ್ನುತ್ತಿದೆ ಎಂದು ಯುವ ಸಾಹಿತಿ ಶಿವಾಲಿಂಗ ದಾನನ್ನವರ ನಮ್ಮ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಅವರು ಇಂಥ ಸಮಯದಲ್ಲಿ ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ಅಧಿಕಾರಿಗಳು, ಮುಖಂಡರುಗಳು ಸ್ವಯಂ ಸೇವಕರು, ಮಾದ್ಯಮದವರು ಎಷ್ಟೋ ಜಾಗೃತಿ ಮೂಡಿಸಿ ಕೋರೊನಾ ಹತ್ತಿಕ್ಕಲು ಹಗಲಿರುಳು ಶ್ರಮಿಸುತ್ತಿದ್ದಾರೆ. …

Read More »

ಹಾಸ್ಯ ನಟ ಬುಲೆಟ್ ಇನ್ನಿಲ್ಲ

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಹಾಸ್ಯ ನಟ ಬುಲೆಟ್ ಪ್ರಕಾಶ ನಿಧನ… ಲಿವರ್, ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಬುಲೆಟ್,ಸುಮಾರು 325 ಕೂ ಹೆಚ್ಚು ಚಿತ್ರದಲ್ಲಿ ನಟಿಸಿ 44 ನೇ ವರ್ಷಕ್ಕೆ ವಿದಾಯ ಹೇಳಿದ ಬುಲೆಟ್…. ಕನ್ನಡದ ಎಲ್ಲ ಸ್ಟಾರ್ ನಟರ ಜೊತೆ ಬುಲೆಟ್ ಅಭಿನಯಿಸಿದರು…. ಜನಮಾನಸದಲ್ಲಿ ಚಿರಸ್ಥಾಯಿ ಆಗಿ ಉಳಿದ ಹಾಸ್ಯ ನಟ ಬುಲೆಟ್.. ಸಂಜೆ 4-45 ಕ್ಕೆ ಸುದ್ದಿ ತಿಳಿದ ಕನ್ನಡ ಚಿತ್ರರಂಗದ ನಟರು ಕಂಬನಿ ಗೈದರು..

Read More »

ಕೊರೋನಾ ಆತಂಕಕ್ಕೆ ಮಿಡಿದ ಯೋಧರ ಮನ

ಒಣ ಪ್ರತಿಷ್ಠೆ ತೋರುವ ಉತ್ತರ ಕುಮಾರರಿಗೆ ಮಾದರಿಯಾದ ಸೋಲ್ಜರ್ಸ್ ಸಂಬರಗಿ: ಮಹಾಮಾರಿ ಕೊರೋನಾ ಎಲ್ಲೇಡೆ ರಣಕೇಕೆ ಹಾಕಿ ಮಾನವ ಸಂಕುಲವನ್ನೇ ಸಂಕಷ್ಟಕ್ಕೆ ತಳ್ಳಿ ಜನಸಾಮಾನ್ಯರ ದಿನ ನಿತ್ಯದ ಬದುಕಿಗೆ ಸಂಚಕಾರ ತಂದೊಡ್ಡಿದೆ. ದಿನಗೂಲಿಯನ್ನೇ ನಂಬಿ ಜೀವನದ ಬಂಡಿ ಎಳೆಯುತ್ತಿರುವ ಕೂಲಿ ಕಾರ್ಮಿಕರು ಸೇರಿದಂತೆ ಬಡ ಜನರ ಬದುಕಿನಲ್ಲಿ ಕೊರೋನಾ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ. ಇಡೀ ದೇಶವೇ ಸಂಪೂರ್ಣ ಲಾಕ್ ಡೌನ್ ಇರುವ ಈ ಸಂದರ್ಭದಲ್ಲಿ ಜನಸಾಮಾನ್ಯರ ಹಾಗೂ …

Read More »

ದೇಶ ಗಂಡಾತರದಲ್ಲಿ ಇದೆ ವೈದ್ಯರ ಸರಕಾರಗಳ ಸೌಲಭ್ಯ ಪಡೆದು ಕೊರೊನಾದಿಂದ ಮುಕ್ತರಾಗೋಣ- ಸಚಿವ ರಮೇಶ್ ಜಾರಕಿಹೊಳಿ

ಮೂಡಲಗಿ :- ಕೊರೊನಾ ಇಡೀ ದೇಶಾದ್ಯಂತ ಮರಣ ಮೃದಂಗ ಭಾರಿಸುತ್ತಿರವ ಹಿನ್ನಲೆ ರಾಜಕೀಯ ನಾಯಕರು ಬರಿ ಭಾಷಣ ಮಾಡಿ ಹೋಗುವುದು ಅಲ್ಲ, ಯಾವುದೇ ಜಾತಿ ಪಕ್ಷ ಅಲ್ಲದೇ ವಿರೋಧ ಪಕ್ಷದ ಮುಖಂಡರು ಸಹ ಸೇರಿ ಮಾಡುವಂತ ಕೆಲಸವಾಗಿದೆ ಎಂದು ಗೋಕಾಕ ಶಾಸಕ ಹಾಗೂ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಅವರು ಮೂಡಲಗಿ ಪಟ್ಟಣದ ಈರಣ್ಣ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾದ ಕೊರೊನಾ ವೈರಸ್ ಬಗ್ಗೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಪರಿಶೀಲನಾ ಸಭೆಯಲ್ಲಿ …

Read More »

ಕುಟುಂಬ ಸದಸ್ಯರೊಂದಿಗೆ ದೀಪ ಬೆಳಗಿಸಿದ: ಮಾರುತಿ ಸವಳೇಕರ

ಮೂಡಲಗಿ: ಪ್ರಧಾನಿ ಮೋದಿಯವರು ಹೇಳಿದ ಹಾಗೆ ದಿ.೫-೪-೩೦೩೦ ರಂದು ರಾತ್ರಿ ೯ಗಂಟೆಯಿಂದ ೯ನಿಮಿಷದ ವರೆಗೆ ದೀಪ ಬೆಳಗಿಸಿ, ಕೋರೊನಾ ಓಡಿಸಿ ಎಂದು ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ದುರ್ಗಾ ದೇವಿಯನ್ನು ಸ್ಮರಿಸುತ್ತಾ, ಕೋರೊನಾ ಮಾಹಾಮಾರಿಯಿಂದ ದೇಶದ ಜನತೆಯನ್ನು ಕಾಪಾಡು ತಾಯಿ ಎಂದು ಸರ್ವವಾಣಿ ನ್ಯೂಸ್ ಸಂಪಾದಕ ಮಾರುತಿ ಸವಳೇಕರ ಮತ್ತು ಅವರ ದರ್ಮಪತ್ನಿ, ಪುತ್ರರು, ಮೊಮ್ಮಕ್ಕಳೊಂದಿಗೆ ೯ನಿಮಿಷಗಳ ಕಾಲ ದೀಪ ಬೆಳಗಿಸುವ ಮೂಲಕ ಬೇಡಿಕೊಂಡರು.

Read More »

You cannot copy content of this page