ಭಾನುವಾರ , ಡಿಸೆಂಬರ್ 22 2024
kn
Breaking News

ಕೌಜಲಗಿ ಅರ್ಬನ್ ಕೋ.ಆಪ್ ಕ್ರೆಡಿಟ್ ಬ್ಯಾಂಕಿನ ಆಡಳಿತ ಮಂಡಳಿ ನೂತನ ಅಧ್ಯಕ್ಷರಾಗಿ ಡಾ.ರಾಜೇಂದ್ರ ಸಣ್ಣಕ್ಕಿ, ಉಪಾಧ್ಯಕ್ಷೆಯಾಗಿ ಶೋಭಾದೇವಿ ಲೋಕನ್ನವರ ಆಯ್ಕೆ

Spread the love

ಬೆಟಗೇರಿ: ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಂತೆ ಗೋಕಾಕ ತಾಲೂಕಿನ ಕೌಜಲಗಿ ಪಟ್ಟಣದ ಪ್ರತಿಷ್ಠಿತ ಸಹಕಾರ ಸಂಸ್ಥೆಯಾದ ಕೌಜಲಗಿ ಅರ್ಬನ್ ಕೋ.ಆಪ್ ಕ್ರೆಡಿಟ್ ಬ್ಯಾಂಕ ಲಿ. ಕೌಜಲಗಿ ಇದರ ಅಮೃತ ಮಹೋತ್ಸವ ವರ್ಷಾಚರಣೆ ಸಂದರ್ಭದಲ್ಲಿ ಬ್ಯಾಂಕಿನ ಆಡಳಿತ ಮಂಡಳಿ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಏ.12ರಂದು ನಡೆಯಿತು.
ಬ್ಯಾಂಕಿನ ಆಡಳಿತ ಮಂಡಳಿ ನೂತನ ಅಧ್ಯಕ್ಷರಾಗಿ ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಯ. ಸಣ್ಣಕ್ಕಿ, ಉಪಾಧ್ಯಕ್ಷೆಯಾಗಿ ಶೋಭಾದೇವಿ ಗಂಗಾಧರ ಲೋಕನ್ನವರ ಅವಿರೂಧವಾಗಿ ಆಯ್ಕೆಗೊಂಡಿದ್ದಾರೆ. ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಗೋಕಾಕ ಸಹಕಾರಿ ಅಭಿವೃದ್ಧಿ ಅಧಿಕಾರಿ ಬಿ.ಕೆ. ಗೋಖಲೆ ಅವರು ತಿಳಿಸಿದ್ದಾರೆ.
ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಬಳಿಕ ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಮಾತನಾಡಿ, ಪ್ರತಿಯೊಬ್ಬ ಮನುಷ್ಯನಿಗೆ ಅಧಿಕಾರ ಮುಖ್ಯವಲ್ಲ, ಬ್ಯಾಂಕಿನ ಸಮಗ್ರ ಪ್ರಗತಿಗಾಗಿ ಪ್ರಯತ್ನಿಸುತ್ತೇನೆ ಎಂದರು. ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರು ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಹೂ ಮಾಲೆ ಹಾಕಿ, ಶಾಲು ಹೊದಿಸಿ ಸತ್ಕರಿಸಿದರು.
ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರಾದ ಮಹಾಂತಪ್ಪ ಶಿವನಮಾರಿ, ಅಶೋಕ ಪಾಟೀಲ, ಈರಣ್ಣ ಹುದ್ದಾರ, ಅಶೋಕ ಹೊಸಮನಿ, ನೀಲಪ್ಪ ಕೇವಟಿ, ಶಿವಲಿಂಗಪ್ಪ ಮರೆನ್ನವರ ಮುಂಂಡರಾದ ಬಸಪ್ಪ ದಳವಾಯಿ, ರಮಂಜಾನ ಮುಲ್ತಾನಿ, ಶಾಂತಪ್ಪ ಹಿರೆಮೇತ್ರಿ, ಮೈಬೂಬ ಮುಲ್ತಾನಿ, ಎಸ್.ಕೆ.ಗಾಣಗೇರ, ರಾಯಪ್ಪ ಬಲೋದಾರ, ಶಂಕರ ಜೋತನ್ನವರ, ಬಸವರಾಜ ಜೋಗಿ, ಬ್ಯಾಂಕಿನ ವ್ಯವಸ್ಥಾಪಕ ವಿ.ಪಿ.ಗೌಡರ, ರಾಜಕೀಯ ಮುಖಂಡರು, ಗಣ್ಯರು ಇದ್ದರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page