ರಾಮದುರ್ಗ: ತಾಲೂಕಿನ ಹಲಗತ್ತಿ ಗ್ರಾಮ ಪಂಚಾಯಯಿತಿ ವ್ಯಾಪ್ತಿಯ ಹಲಗತ್ತಿ ಗ್ರಾಮದ ವಾರ್ಡ್ ನಂಬರ್.3 ರಲ್ಲಿ ಮಳೆಯಾದ ನೀರು ಹೋಗಲು ಸರಿಯಾದ ಮಾರ್ಗ ಇಲ್ಲದೆ ಇರುದರಿಂದ ಇಲ್ಲಿನ ನಿವಾಸಿಗಳು ನಿಂತ ನೀರಿನಲ್ಲಿಯೇ ನಡೆದಾಡುವಂತಹ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ.
ಅಲ್ಲದೆ ಮಳೆಯಾದ ನೀರು ಒಮ್ಮೊಮ್ಮೆ ಮನೆಯೊಳಗೆ ನುಗ್ಗುತ್ತದೆ ಎಂದು ಇಲ್ಲಿನ ನಿವಾಸಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಅಲ್ಲದೆ ಇಲ್ಲಿನ ನಿವಾಸಿಗಳು ತಮ್ಮ ಕೆಲಸ ಕಾರ್ಯಗಳಿಗೆ ಹೋಗಬೇಕಾದರೆ ಚಿಕ್ಕ ಮಕ್ಕಳು, ವೃದ್ಧರು ಹಲವಾರು ಬಾರಿ ಬಿದ್ದು ಏಳುವ ಪರಿಸ್ಥಿತಿ ಅನುಭವಿಸಿದ್ದೇವೆ ಅಷ್ಟೆ ಅಲ್ಲದೆ ನಿಂತ ನೀರು ನಿಂತಲ್ಲೆ ಇರುದರಿಂದ ಸೊಳ್ಳೆಗಳ ಕಾಟವನ್ನು ಅನುಭವಿಸಬೇಕಾಗಿದೆ.

ಇದನ್ನು ಸರಿಪಡಿಸಲು ಸಂಭಂದಪಟ್ಟ ಅಧಿಕಾರಿಗಳ ಗಮನಕ್ಕೆ ಹಲವಾರು ಬಾರಿ ತಂದರೂ ಸಹಿತ ಕೇವಲ ಆಶ್ವಾಸನೆ ಕೊಡುತ್ತಾರೆಯೇ ಹೊರತು ಯಾವುದೇ ಪ್ರಯೋಜನವಾಗಿಲ್ಲ. ಎರಡು ಮೂರು ವರ್ಷಗಳಿಂದ ಇದೇ ನರಕ ಯಾತನೆಯನ್ನು ಕಾಣುವದಾಗಿದೆ ಎಂದು ಇಲ್ಲಿನ ನಿವಾಸಿಗಳು ತಮ್ಮ ಸಮಸ್ಯೆಯನ್ನು ತೋಡಿಕೊಂಡಿದ್ದಾರೆ. ಇನ್ನಾದರೂ ಸಂಭಂದಪಟ್ಟ ಮೇಲಾಧಿಕಾರಿಗಳು ಇತ್ತ ಗಮನ ಹರಿಸಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕಾಗಿದೆ.
ವರದಿ. ಶ್ರೀಕಾಂತ್ ಪೂಜಾರಿ ರಾಮದುರ್ಗ
Sarvavani Latest Kannada News