ರಾಮದುರ್ಗ: ತಾಲೂಕಿನಲ್ಲಿ ತುರನೂರ ದಲ್ಲಿರುವ ಡಿ ದೇವರಾಜ ಅರಸು ಹಾಸ್ಟೆಲ್ನಲ್ಲಿ ಇಂದು ದಿನಾಂಕ 30/04 /2021ರಂದು ರಾಮದುರ್ಗದ ಶಾಸಕರಾದ ಮಾಹಾದೇವಪ್ಪ ಯಾದವಾಡ ರಿಬ್ಬನ್ ಕಟ್ ಮಾಡುವ ಮೂಲಕ ಕೋವಿಡ್ ಕೇರ್ ಸೆಂಟರ್ ಗೆ ಚಾಲನೆ ನೀಡಿದರು.
ಹಾಗೂ ಈ ಸಂದರ್ಭದಲ್ಲಿ ಶಾಸಕರಾದ ಮಾಹಾದೇವಪ್ಪ ಯಾದವಾಡ್ ಇವರು ಸೆಂಟರ್ ನಲ್ಲಿ ನೀರಿನ ವ್ಯವಸ್ಥೆ ಹಾಗೂ ಊಟದ ವ್ಯವಸ್ಥೆ ಮತ್ತು ಬೇಡಗಳನ್ನು ಪರಿಶೀಲನೆ ಮಾಡಿದರು.
ಈ ಒಂದು ಕೋವಿಡ್ ಕೇರ್ ಸೆಂಟರ್ ನಲ್ಲಿ 25 ಬೆಡಗಳನ್ನು ವ್ಯವಸ್ಥೆಮಾಡಲಾಗಿದೆ. ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ 12ಜನರು ಕೊರೋನಾ ಚಿಕಿತ್ಸೆ ಪಡೆಯುತ್ತಿದ್ದು ದಿನೇದಿನೇ ಕೋರೋಣಾ ಹೆಚ್ಚಾಗುತ್ತಿರುವುದರಿಂದ ರಾಮದುರ್ಗದ ತುರನೂರು ಡಿ ದೇವರಾಜ ಅರಸು ಹಾಸ್ಟೆಲ್ ನಲ್ಲಿ 25 ಬೆಡ್ ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.
ರಾಮದುರ್ಗ ತಾಲೂಕ ದಂಡಾಧಿಕಾರಿಗಳ ಅಮರವಾದಗಿ ಇವರು ಕೂಡ ಕೋವಿಡ್ ಸೆಂಟರನ್ನು ಪರಿಶೀಲನೆ ಮಾಡಿ ಚಿಕಿತ್ಸೆ ಪಡೆಯುವವರಿಗೆ ಸರಿಯಾಗಿ ಚಿಕಿತ್ಸೆ ಕೊಟ್ಟು ಅವರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಪುರಸಭೆ ಮುಖ್ಯ ಅಧಿಕಾರಿಗಳಾದ ಎಸ್ ಜಿ ಅಂಬಿಗೇರ್ ಇವರು ಮಾತನಾಡಿ ಕೋವಿಡ್ ಬಗ್ಗೆ ಸ್ವಚ್ಛತೆ ವ್ಯವಸ್ಥೆ ಮತ್ತು ನೀರಿನ ವ್ಯವಸ್ಥೆ ಕೊರೋಣಾ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದರು.
ರಾಮದುರ್ಗದ ಸಿಪಿಐ ಶಶಿಕಾಂತ್ ವರ್ಮಾ ಇವರು ಮಾತನಾಡಿ ಕೋವಿಡ್ ಸೆಂಟರ್ ಗೆ ನಮ್ಮಪೊಲೀಸ್ ಠಾಣೆಯ ವತಿಯಿಂದ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ಅಲ್ಲಿದ್ದಂತಹ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ನೇಮಿಸುತ್ತೇವೆ ಎಂದು ಹೇಳಿದರು.
ಈ ಒಂದು ಕೋವಿಡ್ ಕೇರ್ ಸೆಂಟರ್ ಕಾರ್ಯಕ್ರಮಕ್ಕೆ ರಾಮದುರ್ಗದ ಶಾಸಕರಾದ ಮಹಾದೇವಪ್ಪ ಯಾದವಾಡ, ರಾಮದುರ್ಗದ ತಹಶಿಲ್ದಾರ್ ಅಮರವಾದಗಿ ,ಪುರಸಭೆಯ ಮುಖ್ಯಾಧಿಕಾರಿಗಳು ಎಸ್ ಜಿ ಅಂಬಿಗೇರ್ ,ರಾಮದುರ್ಗದ ಪಿಎಸ್ಐ ಶಶಿಕಾಂತ್ ವರ್ಮಾ, ತಾಲೂಕು ಪಂಚಾಯತಿಯ ಇ ಒ ಎಮ್ ಎಚ್ ದೇಶಪಾಂಡೆ , ಕಂದಾಯ ನಿರೀಕ್ಷಕರು ಸುರೇಬಾನ್ ಶಿವು ಗೊರವನಕೊಳ್ಳ, ಗ್ರಾಮಲೆಕ್ಕಾಧಿಕಾರಿಗಳು ಮಹೇಶ್ ಟೆಂಗಿನಕಾಯಿ, ವಿಸ್ತೀರ್ಣ ಅಧಿಕಾರಿಗಳು ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಶ್ರೀಮತಿ ಎಸ್ ಎಸ್ ಮಾದರ್, ವೈದ್ಯಾಧಿಕಾರಿಗಳು ಎಮ್ ಎಚ್ ಶಾಲದಾರ ಉಪಸ್ಥಿತರಿದ್ದರು.
ವರದಿ: ಶ್ರೀಕಾಂತ್ ಪೂಜಾರ್ ರಾಮದುರ್ಗ
Sarvavani Latest Kannada News