ಹಳ್ಳೂರ: ಲಾಕ್ ಡೌನ್ ಹಿನ್ನೆಲೆಯಲ್ಲಿ ಅರಭಾಂವಿ ಕ್ಷೇತ್ರದ ಪ್ರತಿಯೊಂದು ಕುಟುಂಬಕ್ಕೆ ಉಚಿತ ಆಹಾರಧಾನ್ಯ ದಿನಸಿ ಸಾಮಗ್ರಿ ನೀಡುತ್ತಿರುವ ಜನಪ್ರೀಯ ಶಾಸಕ ಬಾಲಚಂದ್ರ ಜಾರಕಿಹೋಳಿ ಅವರ ಕಾರ್ಯ ಶ್ಘಾಘಣೀಯವೆಂದು ಹಳ್ಳೂರ ಜಿಲ್ಲಾ ಪಂಚಾಯತ ಸದಸ್ಯೆ ವಾಸಂತಿ ಹ. ತೇರದಾಳ ಹೇಳಿSUBSCRIBE YOUTUBE CHANNEL
ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರವಿವಾರರಂದು ನಡೆದ ಆಹಾರ ಧಾನ್ಯ ಕೀಟ್ ಕ್ಷೇತ್ರದ ಜನತೆಗೆ, ಬಡ ಜನ ಕುಟುಂಬಗಳಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ವಿತರಿಸಿ ಮಾತನಾಡಿದರು ಅಲ್ಲದೇ ಶಾಸಕರು ಅರಭಾಂವಿ ಕ್ಷೇತ್ರದಲ್ಲಿ 2.50 ಲಕ್ಷ ಮಾಸ್ಕಗಳನ್ನು ನೀಡಿದ್ದಾರೆ. ಹಸಿದ ಕುಟುಂಬಗಳಿಗೆ ಅನ್ನ ನೀಡುತ್ತಿರುವ ಅನ್ನದಾತ, ನಿರಾಶ್ರೀತರಿಗೆ ಆಶ್ರಯದಾತ ಬಾಲಚಂದ್ರ ಜಾರಕಿಹೋಳಿ ಅವರ ಸೇವೆ ಗಣನೀಯ ಎಂದರು.
ಈ ಸಂದರ್ಭದಲ್ಲಿ ತಾಲೂಕಾ ಪಂಚಾಯತ ಸದಸ್ಯೆ ಸವಿತಾ ಡಬ್ಬನ್ನವರ ಹಾಗೂ ಎನ್‍ಎಸ್‍ಎಫ್ ಅತಿಥಿ ಗೃಹದ ಚನ್ನಮಲ್ಲಿಕಾರ್ಜುನ ಯಕ್ಷಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಕಲಾವತಿ ಮಿರ್ಜಿ, ಮುಖಂಡರಾದ ಹಣಮಂತ ತೇರದಾಳ, ಸುರೇಶ ಕತ್ತಿ, ಭೀಮಶಿ ಮಗದುಮ್ಮ, ಮಾರುತಿ ಮಾವರಕರ, ಸುರೇಶ ಡಬ್ಬನ್ನವರ, ಬಸಪ್ಪ ಸಂತಿ, ಗ್ರಾಪಂ ಅಭೀವೃದ್ದಿ ಅಧಿಕಾರಿ ಹಣಮಂತ ತಾಳಿಕೋಟಿ, ಮೂಡಲಗಿ ಆರಕ್ಷಕ ಠಾಣೆಯ ಹಳ್ಳೂರ ಬೀಟ್ ಪೋಲಿಸ್ ಅಧಿಕಾರಿ ನಾಗಪ್ಪ ಒಡೇಯರ್, ಗ್ರಾಮ ಪಂಚಾಯತ ಸದಸ್ಯರು, ಕಾರ್ಯಕರ್ತರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು, ಗ್ರಾಮ ಪಂಚಾಯತ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದರು.