ಭಾನುವಾರ , ಮೇ 28 2023
kn
Breaking News

ಅನಗತ್ಯವಾಗಿ ತಿರಗಾಡಬೇಡಿ, ಕೊವೀಡ್ – 19 ನಿಯಮಾನುಸಾರ ದಂಡ : ಪಿಎಸ್ಐ ಬಾಲದಂಡಿ

Spread the love

ಮೂಡಲಗಿ: ಕೊರೋನಾ ಮಹಾಮಾರಿ ಹಿಮ್ಮೆಟ್ಟಿಸಲು ಸಾಮಾಜಿಕ ಅಂತರ ಮಾಸ್ಕ್ ಉಪಯೋಗಿಸಿ ಅಗತ್ಯವಿದ್ದಲ್ಲಿ ಮಾತ್ರ ಹೋರ ಬರಬೇಕು. ಅನಗತ್ಯವಾಗಿ ತಿರಗಾಡ ಬೇಡಿ, ವಾಹನ ಸವಾರರು ಅನವಶ್ಯಕವಾಗಿ ತಿರುಗುವವರ ಮೇಲೆ ಕೊವೀಡ-19 ನಿಯಮಾನುಸಾರ ದಂಡವನ್ನು ವಿಧಿಸಲಾಗುತ್ತಿದೆ ಎಂದು ಮೂಡಲಗಿ ಪೊಲೀಸ್ ಠಾಣೆಯ ಪಿಎಸ್‍ಐ ಹಾಲಪ್ಪ ಬಾಲದಂಡಿ ಹೇಳಿದರು.
ಅವರು ನಗರದಲ್ಲಿ ವಾರಾಂತ್ಯದ ಕೊರೋನಾ ಕರ್ಫೋ ಹಿನ್ನೆಲೆ ಎರಡನೇಯ ದಿನದಂದು ಅನವಶ್ಯಕವಾಗಿ ತಿರುಗುವವರಿಗೆ ದಂಡ ವಿಧಿಸಿ, ಸರಕಾರ ಜಾರಿಗೋಳಿಸುವ ನಿಯಮಗಳನ್ನು ಚಾಚು ತಪ್ಪದೆ ಪಾಲಿಸಬೇಕು. ಆರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯರ ಸಲಹೆ ಪಡೆದು ಮನೆಯಲ್ಲಿಯೇ ಇದ್ದು ಆರೋಗ್ಯ ಕಾಪಾಡಿಕೊಳ್ಳ ಬೇಕು. ಮೂಡಲಗಿ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಬವಿಸಿರುವದಿಲ್ಲ. ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಸಿಬ್ಬಂದಿಯವರಿಂದ ಅಗತ್ಯ ಮುನ್ನೆಚ್ಚರಿಕೆ ಜಾಗೃತತೆ ಕಾಪಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಎಸ್‍ಐ ಸಿ.ಎಲ್ ಗಸ್ತಿ, ಡಿ.ಜಿ ಕೊಣ್ಣೂರ, ಶಂಕರ ಹಂಚ್ಯಾನಟ್ಟಿ, ಸದಾಶಿವ ತಳವಾರ, ಮಹಾಂತೇಶ ಕಾಂಬಳೆ ಠಾಣಾ ಸಿಬ್ಬಂದಿ ಉಪಸ್ಥಿತರಿದ್ದರು.


Spread the love

About gcsteam

Check Also

ಮೀಸಲಾತಿ ಸಂಬoಧ ನಡೆಸುತ್ತಿರುವ ಹೋರಾಟಗಾರರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು : ಶಾಸಕ ಬಾಲಚಂದ್ರ ಜಾರಕಿಹೊಳಿ ಕಿವಿಮಾತು

Spread the loveಮೂಡಲಗಿ: ಈಗಾಗಲೇ ಸರ್ಕಾರದ ಮೀಸಲಾತಿ ಸಂಬoಧ ಪಂಚಮಸಾಲಿ, ಕುರುಬ, ಉಪ್ಪಾರ ಹಾಗೂ ಮಾದಿಗ ಸಮುದಾಯದವರು ಹೋರಾಟಕ್ಕೆ ಇಳಿದಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page