ಬೆಳಗಾವಿ: ಲಾಕ್ಡೌನ್ ಕರ್ತವ್ಯ ನಿರ್ವಹಿಸಲು ಬೆಳಗಾವಿಯ ಪೊಲೀಸ್ ಠಾಣೆಗೆ ಬರುತ್ತಿದ್ದ ಪಿ.ಎಸ್.ಐಯೊಬ್ಬರು ಅಪಘಾತಕ್ಕೀಡಾಗಿ ಸಾವನ್ನಪ್ಪಿದ ದಾರುಣ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಖಡೇಬಝಾರ್ ಠಾಣೆಯ ಪಿಎಸ್ಐ ಗಣಾಚಾರಿ ಸಾವನ್ನಪ್ಪಿದ ವ್ಯಕ್ತಿ.
ಯಳ್ಳೂರ ರಸ್ತೆಯ ನಿವಾಸಿಯಾಗಿದ್ದ ಗಣಾಚಾರಿ ಅವರು ಬೆಳಗಾವಿ ಮಹಾನಗರದಲ್ಲಿ ಲಾಕ್ ಡೌನ್ ಬಿಗಿಗೊಳಿಸಲು, ಬಂದೊಬಸ್ತ್ ಕರ್ತವ್ಯಕ್ಕಾಗಿ ಬರುತ್ತಿದ್ದರು. ಈ ವೇಳೆ ಯಳ್ಳೂರ ರಸ್ತೆಯ ಕೆಎಲ್ಇ ಆಸ್ಪತ್ರೆ ಬಳಿ, ಬೈಕ್ ಸ್ಕಿಡ್ ಆಗಿ ಕೆಳಗೆ ಬಿದ್ದಿದ್ದಾರೆ.
ತಲೆಗೆ ಗಂಭೀರವಾದ ಪೆಟ್ಟು ಬಿದ್ದಿದ್ದರಿಂದ ಗಣಾಚಾರಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
Sarvavani Latest Kannada News