ದೀಪ ಬೆಳಗಿ ಬೆಂಬಲ ಸೂಚಿಸಿದ ಪುಟ್ಟ ಕಂದಮ್ಮ
ಮುಗಳಖೋಡ: ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿದ ಕೊರೋನಾ ವೈರಸ್ ಹೊಡೆದೊಡಿಸುವ ಹಿನ್ನಲೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕರೆ ನೀಡಿರುವ ದೀಪ ಬೆಳಗುವ ಅಭಿಯಾನಕ್ಕೆ ಮುಗಳಖೋಡ ಪಟ್ಟಣದಲ್ಲಿ ಪುಟ್ಟ ಕಂದಮ್ಮ ದೀಪ ಬೆಳಗುವ ಮೂಲಕ ಬೆಂಬಲ ಸೂಚಿಸಿದ್ದಾರೆ.
ಹೌದು..ಮುಗಳಖೋಡದ ವಿವಿಧ ಸ್ಥಳಗಳಲ್ಲಿ ತಮ್ಮ ಮನೆಯ ಅಂಗಳದಲ್ಲಿ ಪುಟ್ಟ ಕಂದಮ್ಮಗಳು ಮುಗ್ಧ ಮನಸ್ಸಿನಿಂದ ಮೇನಬೋತ್ತಿಯನ್ನು ಬೆಳಗಿಸಿ ಜ್ಞಾನದ ದೀಪ ಬೆಳಗುವ ಮೂಲಕ ಪ್ರಧಾನಮಂತ್ರಿ ಅವರ ಕರೆಗೆ ಬೆಂಬಲ ಸೂಚಿಸುವ ಮೂಲಕ ಮಾದರಿಯಾಗಿದ್ದಾರೆ.
ಕೊರೋನಾ ವೈರಸ್ ಭೀತಿಯ ಹಿನ್ನಲೆಯಲ್ಲಿ ಲಾಕ್ ಡೌನ್ ಆದೇಶ ಘೋಷಣೆಯಾಗಿದ್ದು,ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೂಡ ವೈದ್ಯರು,ಪೊಲೀಸ ಸಿಬ್ಬಂದಿಗಳು, ಪೌರಕಾರ್ಮಿಕರು ಹಾಗೂ ಮಾಧ್ಯಮದ ಸಿಬ್ಬಂದಿಗಳ ಕೃತಜ್ಞತೆ ಸಲ್ಲಿಸುವ ಹಾಗೂ ಕಿಲ್ಲರ್ ಕೊರೋನಾ ವೈರಸ್ ಹೊಡೆದೊಡಿಸುವ ಸದುದ್ದೇಶದಿಂದ ಪ್ರಧಾನಮಂತ್ರಿ ಕರೆ ನೀಡುವ ಜ್ಞಾನಜ್ಯೋತಿ ಅಭಿಯಾನಕ್ಕೆ ಬೆಂಬಲ ವ್ಯಕ್ತವಾಗುತ್ತಿದ್ದು,ಪುಟ್ಟ ಕಂದಮ್ಮಗಳ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗುತ್ತಿದೆ.
Sarvavani Latest Kannada News