ಶುಕ್ರವಾರ , ನವೆಂಬರ್ 22 2024
kn
Breaking News

Yearly Archives: 2022

ಪರಿಸರವು ಪ್ರತಿಯೊಂದು ಜೀವರಾಶಿಗೆ ಅತ್ಯಂತ ಅಮೂಲ್ಯ ಕೊಡುಗೆ: ಜ್ಯೋತಿ ಪಾಟೀಲ

ಮೂಡಲಗಿ : ಪರಿಸರವು ಪ್ರತಿಯೊಂದು ಜೀವರಾಶಿಗೆ ಅತ್ಯಂತ ಅಮೂಲ್ಯ ಕೊಡುಗೆಯಾಗಿದೆ. ವಿಶ್ವ ಪರಿಸರ ದಿನವನ್ನು ಪರಿಸರದ ಕಾಳಜಿ ಜೊತೆಗೆ ಜನರಿಗೆ ಪರಿಸರದ ಮಹತ್ವ ಸಾರುವ ಉದ್ದೇಶದಿಂದ ವಿಶ್ವಸಂಸ್ಥೆಯು ಇದನ್ನು ಸ್ಥಾಪಿಸಿತು ಎಂದು ನ್ಯಾಯಾಧೀಶೆ ಜ್ಯೋತಿ ಪಾಟೀಲ ಹೇಳಿದರು. ಅವರು ದಿವಾಣಿ ಹಾಗೂ ಜೆ.ಎಮ್.ಎಪ್.ಸಿ. ನ್ಯಾಯಾಲಯದ ನೂತನ ಕಟ್ಟಡದ ಆವರಣದಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಿ ಮಾತನಾಡುತ್ತಾ, ಪ್ರಕೃತಿಮಾತೆ ಈ ಸುಂದರವಾದ ವಾತಾವರಣವನ್ನು ನಮಗೆ ನೀಡಿದ್ದು ಇದು ನಮ್ಮ …

Read More »

ಮಾನವನ ಮನುಕುಲದ ಉಳುವಿಗೆ ಸ್ವಚ್ಚ ಪರಿಸರ ಅತಿ ಅವಶ್ಯಕ : ಸಿದ್ದಣ್ಣ ದುರದುಂಡಿ

ಮೂಡಲಗಿ: ಮಾನವನ ಮನುಕುಲದ ಉಳುವಿಗೆ ಸ್ವಚ್ಚ ಪರಿಸರ ಅತಿ ಅವಶ್ಯಕವಾಗಿದೆ ಎಂದು ರಾಜ್ಯ ಯುವ ಪ್ರಶಸ್ತಿ ವಿಜೇತ ಹಾಗೂ ಪರಿಸರ ಪ್ರೇಮಿ ಸಿದ್ದಣ್ಣ ದುರದುಂಡಿ ಹೇಳಿದರು. ಅವರು ಹಳ್ಳೂರ ಗ್ರಾಮದ ಡಿ ದೇವರಾಜ ಅರಸು ವಸತಿ ನಿಲಯದಲ್ಲಿ ನೆಹರು ಯುವ ಕೇಂದ್ರ ಬೆಳಗಾವಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಹಾಗೂ ಜೈ ಕರ್ನಾಟಕ ಅಂಗವಿಕಲರ ಗ್ರಾಮೀಣ ಅಭಿವೃದ್ಧಿ ಸಂಘ ಹಳ್ಳೂರ ಇವುಗಳ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮನ್ನು …

Read More »

ಕಲರವ ಶಿಕ್ಷಕರ ಸೇವಾ ಬಳಗ ಕಾರ್ಯಕ್ಕೆ ಕೈಜೋಡಿಸಿದ: ಡಿಸಿ ಹಾಗೂ ಸಿ.ಇ.ಓ.

ಕೊಪ್ಪಳ: ಕಲರವ ಶಿಕ್ಷಕರ ಸೇವಾ ಬಳಗದ ಸರಕಾರಿ ಶಾಲೆಗಳಿಗೆ ತಮ್ಮ ಸ್ವಂತ ಹಣದ ಮೂಲಕ‌ ಸರಕಾರಿ ಶಾಲೆಗೆ ಸುಣ್ಣ- ಬಣ್ಣ ಅಚ್ಚುವ ಕಾರ್ಯಕ್ಕೆ ಕೈಜೋಡಿಸುವುದರೊಂದಿಗೆ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಕಲರವ ಶಿಕ್ಷಕರ ಸೇವಾ ಬಳಗವು ೧೦ ಜನ ಸಮಾನ ಮನಸ್ಕರ ಶಿಕ್ಷಕರು ಸೇರಿಕೊಂಡು ತಿಂಗಳ‌ ಕೊನೆಯ ಭಾನುವಾರ ತಾಲ್ಲೂಕಿನ ಒಂದು ಸರಕಾರಿ ಶಾಲೆಯನ್ನು ಆಯ್ಕೆ ಮಾಡಿಕೊಂಡು ಆ ಶಾಲೆಗೆ ಸುಣ್ಣ ಹಾಗೂ ಬಣ್ಣ ಅಚ್ಚುವುದರೊಂದಿಗೆ ಶಾಲೆಯ ಅಂದ …

Read More »

ಕಲ್ಲೋಳಿಯ ಶ್ರೀ ಮಹಾಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವ ನಿಮಿತ್ಯ ಸಂಸದ ಈರಣ್ಣ ಕಡಾಡಿ ದೇವಸ್ಥಾನಕ್ಕೆ ಭೇಟಿ

ಮೂಡಲಗಿ: ತಾಲೂಕಿನ ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವದ ನಿಮಿತ್ಯ ಸಂಸದ ಈರಣ್ಣ ಕಡಾಡಿ ಅವರು ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ರಾವಸಾಹೇಬ ಬೆಳಕೂಡ, ಮಹಾದೇವ ಮದಭಾಂವಿ, ಬಸವರಾಜ ಕಡಾಡಿ, ಶಂಕರ ಗೋರೋಶಿ, ಹಣಮಂತ ಸಂಗಟಿ, ಈರಣ್ಣ ಮುನ್ನೋಳಿಮಠ, ಅಡಿವೆಪ್ಪ ಕುರಬೇಟ, ತುಕಾರಮ ಪಾಲ್ಕಿ, ಗಿರಿಮಲ್ಲ್ಪ ಸಂಸುದ್ದಿ, ಶಿವಪ್ಪ ಬಿ.ಪಾಟೀಲ, ಶ್ರೀಶೈಲ ತುಪ್ಪದ, ಮಲ್ಲಪ್ಪ ಖಾನಗೌಡ್ರ, ಶಿವಗೊಂಡ ವ್ಯಾಪಾರಿ, ಸಿದ್ದಪ್ಪ ಹೆಬ್ಬಾಳ, ಶಿವಲಿಂಗ ಕುಂಬಾರ, …

Read More »

ಶಹಾಪೂರ, ನಿರಾಣಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಜೂನ್ ೧೩ ರಂದು ನಡೆಯುವ ವಿಧಾನ ಪರಿಷತ್ ವಾಯವ್ಯ ಶಿಕ್ಷಕರ ಮತ್ತು ಪದವೀಧರ ಮತಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಅರುಣ ಶಹಾಪೂರ ಮತ್ತು ಹನಮಂತ ನಿರಾಣಿ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತಗಳನ್ನು ನೀಡುವ ಮೂಲಕ ಮತ್ತೊಮ್ಮೆ ಅವರಿಗೆ ಆಶೀರ್ವಾದ ಮಾಡುವಂತೆ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮನವಿ ಮಾಡಿಕೊಂಡರು. ತಾಲೂಕಿನ ತುಕ್ಕಾನಟ್ಟಿ ಗ್ರಾಮದ ಲಕ್ಷ್ಮೀದೇವಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಸಂಜೆ ಜರುಗಿದ ಅರಭಾವಿ …

Read More »

ಅರವಿಂದ ದಳವಾಯಿಯವರಿಗೆ ಸೇವಾ ಸರ್ವೋತ್ತಮ ಪ್ರಶಸ್ತಿ

ಮೂಡಲಗಿ: ಬೆಂಗಳೂರಿನ ಪ್ರತಿಷ್ಠಿತ ಸ್ಪೇಸ್ ಮೀಡಿಯಾ ಸಂಸ್ಥೆಯವರು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರಿಗೆ ಕೊಡಮಾಡುವ “ಸೇವಾ ಸರ್ವೋತ್ತಮ” ಪ್ರಶಸ್ತಿಯನ್ನು ಅರಭಾಂವಿ ಮತಕ್ಷೇತ್ರದ ಕಾಂಗ್ರೆಸ್ ಮುಖಂಡ ಕೌಜಲಗಿಯ ಅರವಿಂದ ದಳವಾಯಿಯವರಿಗೆ ಲಭಿಸಿದೆ. ಜೂನ್ ೪ ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.ಅರವಿಂದ ದಳವಾಯಿಯವರು ಸಾಮಾಜಿಕ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಅನುಮಪ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಶಸ್ತಿಗೆ ಭಾಜನರಾಗಿರುವ ದಳವಾಯಿಯವರನ್ನು …

Read More »

ರೈತರ ಉತ್ಪನ್ನಗಳಿಗೆ ಸಂಸ್ಕರಣೆ ಮತ್ತು ಮೌಲ್ಯವರ್ಧನೆಗೆ ನೇರ ಮಾರುಕಟ್ಟೆ ಸೌಲಭ್ಯ ಒದಗಿಸುವದು ಸಂಸ್ಥೆಯ ಪ್ರಮುಖ ಧ್ಯೇಯವಾಗಿದೆ : ಸಿದ್ದಾರೋಡ ಪಡೆಪ್ಪಗೋಳ

ಮೂಡಲಗಿ : ರೈತಾಪಿ ವರ್ಗದ ಸದಸ್ಯರುಗಳ ಖರ್ಚು ಕಡಿಮೆ ಮಾಡಿ ಆದಾಯ ಮೂಲಗಳನ್ನು ಹೆಚ್ಚಿಸಲು ಪ್ರೋತ್ಸಾಹಕ ಯೋಜನೆಗಳನ್ನು ಸಮರ್ಪಕವಾಗಿ ನೀಡುವದು. ರೈತರ ಉತ್ಪನ್ನಗಳನ್ನು ಸಂಸ್ಕರಣೆ ಮತ್ತು ಮೌಲ್ಯವರ್ಧನೆಗೆ ನೇರ ಮಾರುಕಟ್ಟೆ ಸೌಲಭ್ಯ ಒದಗಿಸುವದು ರಾಯಣ್ಣ ಕುರಿ ಮತ್ತು ಆಡು ಉತ್ಪಾದಕರ ಸಂಸ್ಥೆಯ ಪ್ರಮುಖ ಧ್ಯೇಯವಾಗಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿದ್ದಾರೋಡ ಪಡೆಪ್ಪಗೋಳ ತರಭೇತಿಯಲ್ಲಿ ಹೇಳಿದರು. ಅವರು ತಾಲೂಕಿನ ಭೈರನಟ್ಟಿ ಗ್ರಾಮದಲ್ಲಿ ವಿವಿದೆಡೆ ಕುರಿಗಾಹಿಗಳಿಗೆ ತರಭೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡಿದರು. …

Read More »

ತಂಬಾಕು ಹಲ್ಲುಗಳ ಆರೋಗ್ಯ ಹಾಳು ಮಾಡುತ್ತದೆ : ದಂತ ವೈದ್ಯ ಡಾ. ಸಂಜಯ ಶಿಂಧಿಹಟ್ಟಿ

ಮೂಡಲಗಿ: ‘ಸಿಗರೇಟು ಮತ್ತು ತಂಬಾಕು ಸೇವನೆಯು ಹಲ್ಲುಗಳ ಆರೋಗ್ಯವನ್ನು ಹಾಳು ಮಾಡುತ್ತದೆ. ಹಲ್ಲುಗಳ ಆಯುಷ್ಯ ವೃದ್ಧಿಗಾಗಿ ತಂಬಾಕು ಸೇವಿಸಬಾರದು’ ಎಂದು ದಂತ ವೈದ್ಯ ಡಾ. ಸಂಜಯ ಶಿಂಧಿಹಟ್ಟಿ ಹೇಳಿದರು. ಲಯನ್ಸ್ ಕ್ಲಬ್ ಮೂಡಲಗಿ ಪರಿವಾರವು ಶ್ರೀರಂಗ ದಂತ ಆಸ್ಪತ್ರೆಯ ಸಹಯೋಗದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಉಚಿತ ದಂತ ತಪಾಸಣೆ ಶಿಬಿರದಲ್ಲಿ ಮಾತನಾಡಿದ ಅವರು ತಂಬಾಕು ಸೇವನೆಯು ವಸಡು ಕ್ಯಾನ್ಸರ್ ಕಾಯಿಲೆಗೂ ದಾರಿಮಾಡಿಕೊಡುತ್ತದೆ. ತಂಬಾಕು, ಧೂಮಪಾನದಿಂದ ದೂರವಿದ್ದು …

Read More »

೭೫ ಗಂಟೆಗಳಲ್ಲಿ ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳೊಂದಿಗೆ ಸಂಪರ್ಕ ಸಾಧಿಸಲು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಕರೆ

ಮೂಡಲಗಿ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ೭೫ ವರ್ಷ ಗತಿಸಿದ ಹಿನ್ನಲೆಯಲ್ಲಿ ರಾಜ್ಯ ಬಿಜೆಪಿ ರೈತ ಮೋರ್ಚಾದ ಕಾರ್ಯಕರ್ತರು ೭೫ ಗಂಟೆಗಳ ಕಾಲ ಸರ್ಕಾರದ ಯೋಜನೆಯ ಫಲಾನುಭವಿಗಳೊಂದಿಗೆ ಸಂಪರ್ಕ ಸಾಧಿಸಲು ರಾಜ್ಯಸಭಾ ಸಂಸದ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ಈರಣ್ಣ ಕಡಾಡಿ ಕರೆ ನೀಡಿದರು. ಮೇ ೩೧ ರಂದು ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದ ರಾಜ್ಯಸಭಾ ಸಂಸದರ ಜನಸಂಪರ್ಕ ಕಾರ್ಯಾಲಯದಲ್ಲಿ ಪ್ರಧಾನ ಮಂತ್ರಿಗಳು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ …

Read More »

ಶಹಾಪೂರ ಮತ್ತು ನಿರಾಣಿ ಗೆಲುವಿಗೆ ಶ್ರಮಿಸಿ : ಸುಭಾಸ ಪಾಟೀಲ

ಗೋಕಾಕ : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆಗಳನ್ನು ಮುಂದಿಟ್ಟುಕೊಂಡು ಜೂನ್ ೧೩ ರಂದು ನಡೆಯುವ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕಾರ್ಯಕರ್ತರು ಶ್ರಮಿಸುವಂತೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ ಹೇಳಿದರು. ಇಲ್ಲಿಯ ಎನ್‌ಎಸ್‌ಎಫ್ ಅತಿಥಿ ಗೃಹದಲ್ಲಿ ಸೋಮವಾರದಂದು ಜರುಗಿದ ಅರಭಾವಿ ಮಂಡಲ ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ವಾಯುವ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿರುವ ಅರುಣ ಶಹಾಪೂರ ಮತ್ತು …

Read More »

You cannot copy content of this page