ಸೋಮವಾರ , ಅಕ್ಟೋಬರ್ 3 2022
kn
Breaking News

ಪರಿಸರವು ಪ್ರತಿಯೊಂದು ಜೀವರಾಶಿಗೆ ಅತ್ಯಂತ ಅಮೂಲ್ಯ ಕೊಡುಗೆ: ಜ್ಯೋತಿ ಪಾಟೀಲ

Spread the love

ಮೂಡಲಗಿ : ಪರಿಸರವು ಪ್ರತಿಯೊಂದು ಜೀವರಾಶಿಗೆ ಅತ್ಯಂತ ಅಮೂಲ್ಯ ಕೊಡುಗೆಯಾಗಿದೆ. ವಿಶ್ವ ಪರಿಸರ ದಿನವನ್ನು ಪರಿಸರದ ಕಾಳಜಿ ಜೊತೆಗೆ ಜನರಿಗೆ ಪರಿಸರದ ಮಹತ್ವ ಸಾರುವ ಉದ್ದೇಶದಿಂದ ವಿಶ್ವಸಂಸ್ಥೆಯು ಇದನ್ನು ಸ್ಥಾಪಿಸಿತು ಎಂದು ನ್ಯಾಯಾಧೀಶೆ ಜ್ಯೋತಿ ಪಾಟೀಲ ಹೇಳಿದರು.
ಅವರು ದಿವಾಣಿ ಹಾಗೂ ಜೆ.ಎಮ್.ಎಪ್.ಸಿ. ನ್ಯಾಯಾಲಯದ ನೂತನ ಕಟ್ಟಡದ ಆವರಣದಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಿ ಮಾತನಾಡುತ್ತಾ, ಪ್ರಕೃತಿಮಾತೆ ಈ ಸುಂದರವಾದ ವಾತಾವರಣವನ್ನು ನಮಗೆ ನೀಡಿದ್ದು ಇದು ನಮ್ಮ ಜೀವನವನ್ನು ಸುರಕ್ಷಿತಗೊಳಿಸಿದೆ. ಪರಿಸರವಿಲ್ಲದೆ ಭೂಮಿಯ ಮೇಲೆ ಬದುಕುವುದು ಅಸಾಧ್ಯ ನಾವು ಅವಲಂಬಿತವಾಗಿರುವ ಈ ಪರಿಸರ ಯುಗಯುಗಗಳ ವರೆಗೂ ಹೀಗೆ ಉಳಿಯಬೇಕಿದೆ. ಆದರೆ ಬೇಸರವೆಂದರೆ ನಾವು ಮಾಡುತ್ತೀರುವ ಅರಣ್ಯ ನಾಶದಿಂದ ಪರಿಸರವು ಹಾಳಾಗುತ್ತಿದೆ. ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಎಲ್.ಬಿ.ವಡೇರ ಮಾತನಾಡಿ, ಮನುಷ್ಯ ಯಾವಾಗಲೂ ತನ್ನ ಚಟುವಟಿಕೆಗಳ ಬಗ್ಗೆ ಜಾಗೃತವಾಗಿರಬೇಕು ಮತ್ತು ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಆರೋಗ್ಯವಾಗಿಡಲು ಪ್ರಯತ್ನಿಸಬೇಕು. ಪ್ಲಾಸ್ಟಿಕ್‌ಅನ್ನು ನಿಷೆದಿಸುವುದು, ನೀರನ್ನು ಉಳಿಸುವುದು, ಮತ್ತು ಹೆಚ್ಚಿನ ಗಿಡಗಳನ್ನು ನೇಡುವುದು ಇವೆಲ್ಲ ಉತ್ತಮ ಪರಿಸರಕ್ಕೆ ಕರೆದೊಯ್ಯುವ ಕೆಲವು ಹಂತಗಳಾಗಿವೆ ಎಂದರು.
ಹಿರಿಯ ನ್ಯಾಯವಾದಿ ಲಕ್ಷö್ಮಣ ವಾಯ್. ಅಡಿಹುಡಿ ಮಾತನಾಡಿ ಪರಿಸರ ಉಳಿಸಿ ಸಕಲ ಜೀವರಾಶಿ ಬೆಳೆಸಿ ಪರಿಸರದ ಬಗ್ಗೆ ಕಾಳಜಿ ವಹಿಸುವುದು ಪ್ರತಿಯೊಬ್ಬರ ಕರ್ತವ್ಯ. ಪರಿಸರದ ಅರಿವನ್ನು ಜನರಲ್ಲಿ ಜಾಗೃತಿ ಮೂಡಿಸಿ ಕಾಡು ಬೆಳಿಸಿ ನಾಡು ಉಳಿಸಿ ಎಂದರು.
ಕಾರ್ಯಕ್ರಮದಲ್ಲಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಸ್.ಗೋಡಿಗೌಡರ, ಪ್ರಧಾನ ಕಾರ್ಯದರ್ಶಿ ಬಿ.ವಾಯ್.ಹೆಬ್ಬಾಳ, ಸಹಕಾರ್ಯದರ್ಶಿಗಳು ಎಸ್.ಬಿ.ತುಪ್ಪದ, ಪಿ.ಎಸ್.ಮಲ್ಲಾಪೂರ, ಖಜಾಂಚಿ ಎಸ್.ಎಮ್.ಗಿಡೋಜಿ, ಮಹಿಳಾ ಪ್ರತಿನಿದಿ ಅಕ್ಕಮಹಾದೇವಿ ಗೊಡ್ಯಾಗೊಳ, ಹಿರಿಯ ವಕೀಲರಾದ ಕೆ.ಪಿ.ಮಗದುಮ್, ಬಿ.ಎನ್.ಸಣ್ಣಕ್ಕಿ, ವಿ.ಸಿ. ಗಾಡವಿ, ವಿ.ಕೆ.ಪಾಟೀಲ, ಆರ್.ಬಿ.ಕುಳ್ಳೂರ, ಬಿ.ಎಚ್.ಮಳ್ಳೀವಡೆಯರ, ವಾಯ್.ಎಸ್.ಖಾನಟ್ಟಿ, ಆರ್.ಬಿ.ಪತ್ತಾರ, ಎಸ್.ವಾಯ್.ಸಣ್ಣಕ್ಕಿ, ಎಸ್.ಎಸ್.ತುಪ್ಪದ, ಆರ್.ಎಮ್.ಐಹೋಳೆ, ಎಮ್.ಎಸ್.ಶಿರೋಳ, ಅರಣ್ಯ ಅಧಿಕಾರಿಗಳಾದ ಆಶೋಕ ಮಧುರಿ, ಇಕ್ಬಾಲ್ ನಿರಳಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


Spread the love

About Kenchappa Meesi

Check Also

ಡಾ.ಅಶೋಕ ದಳವಾಯಿಯವರ ಜೀವಮಾನ ಸಾಧನೆಗೆ ‘ಪೋಷಕ ಅನಾಜ’ ಪ್ರಶಸ್ತಿ

Spread the loveಮೂಡಲಗಿ: ಭಾರತ ಸರಕಾರದ ಹಿರಿಯ ಅಧಿಕಾರಿ, ಕೃಷಿತಜ್ಞ ಮತ್ತು ಅನುಭವಿ ಆಡಳಿತಗಾರರಾದ ಡಾ.ಅಶೋಕ ದಳವಾಯಿಯವರ ಜೀವಮಾನ ಸಾಧನೆ …

6,486 comments

  1. [url=https://stromectolbestprice.com/#]ivermectin cost in usa[/url] ivermectin dosage cats oral

  2. https://vukypavto.ru/ – Выкуп авто неисправных авто марки Dacia модели Espero, 1980 года выпуска, тип кузова седан 2 дв. с объемом двигателя 1305 коробка передач вариатор в Санкт-Петербурге.