ಮೂಡಲಗಿ: ಭಾರತ ಸರಕಾರದ ಹಿರಿಯ ಅಧಿಕಾರಿ, ಕೃಷಿತಜ್ಞ ಮತ್ತು ಅನುಭವಿ ಆಡಳಿತಗಾರರಾದ ಡಾ.ಅಶೋಕ ದಳವಾಯಿಯವರ ಜೀವಮಾನ ಸಾಧನೆ ಗುರುತಿಸಿ ಅವರಿಗೆ ೨೦೨೨ ನೇ ಸಾಲಿನ ‘ಪೋಷಕ ಅನಾಜ’ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಪ್ರತಿಷ್ಟಿತ ಭಾರತೀಯ ಕೃಷಿ ಸಂಶೋಧನ ಅನುಸಂಧಾನ ನವದೆಹಲಿ ಇವರ ಅಧೀನ ಹೈದರಾಬಾದನ ಸಂಸ್ಥೆಯಾದ ಭಾರತೀಯ ಕಿರುಧಾನ್ಯ ಅಭಿವೃದ್ಧಿ ಸಂಸ್ಥೆಯವರು ಸಪ್ಟೆಂಬರ ೨೩ ರಂದು ಹೈದರಾಬಾದನಲ್ಲಿ ನಡೆಯುವ ವಿಷೇಶ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರಧಾನ ಮಾಡುತ್ತಿದ್ದಾರೆ. ದಳವಾಯಿಯವರು ಕಳೆದ ನಾಲ್ಕು …
Read More »Monthly Archives: ಸೆಪ್ಟೆಂಬರ್ 2022
ಮಕ್ಕಳು,ಗರ್ಭಿಣಿಯರು ಮತ್ತು ಬಾಣಂತಿಯರಲ್ಲಿನ ಅಪೌಷ್ಠಿಕತೆ ನಿವಾರಣೆಯಾಗಬೇಕು: ಜಯಶ್ರೀ ಕಂಬಾರ
ಮೂಡಲಗಿ: ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರಲ್ಲಿನ ಅಪೌಷ್ಠಿಕತೆ ನಿವಾರಣೆ ಮಾಡುವ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸುವುದು ಅಗತ್ಯ ಹಾಗಾಗಿ ಅಂಗನವಾಡಿ ಕೇಂದ್ರಗಳಲ್ಲಿ ಜನರಿಗೆ ಕಾರ್ಯಕ್ರಮ ಮಾಡುವ ಮೂಲಕ ಜಾಗೃತಿ ಮಾಡಿಸಲಾಗುತ್ತಿದೆ ಎಂದು ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಜಯಶ್ರೀ ಕಂಬಾರ ಹೇಳಿದರು. ಪಟ್ಟಣದ ಜವಳಪ್ಲಾಟ್ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಪೋಷಣ ಅಭಿಯಾನ ಮಾಸಾಚರಣೆ ಕಾರ್ಯಕ್ರಮ ಅಂಗವಾಗಿ ಹಮ್ಮಿಕೊಳ್ಳಲಾದ ಕಿಶೋರಿಯರಿಗೆ ಪೌಷ್ಠಿಕ ಆಹಾರದ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, …
Read More »ಕೆಎಂಎಫ್ ಕೇಂದ್ರ ಕಛೇರಿಗೆ ಭೇಟಿ ನೀಡಿದ ಆಂಧ್ರಪ್ರದೇಶದ ಸಚಿವೆ ಉಷಾ ಶ್ರೀಚರಣ
ಬೆಂಗಳೂರು: ಆಂಧ್ರ ಪ್ರದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಷಾ ಶ್ರೀಚರಣ ಅವರು ಶನಿವಾರದಂದು ಇಲ್ಲಿಯ ಕೆಎಮ್‍ಎಫ್ ಕೇಂದ್ರ ಕಚೇರಿಗೆ ಭೇಟಿ ನೀಡಿ ಚರ್ಚೆ ನಡೆಸಿದರು. ಕೆಎಮ್‍ಎಫ್‍ನ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ ಅವರು ಸಚಿವರನ್ನು ಸ್ವಾಗತಿಸಿದರು. ಆಂಧ್ರಪ್ರದೇಶ ಸರ್ಕಾರದ ಪ್ರತಿಷ್ಠಿತ ಯೋಜನೆಯಾದ ವಾಯ್‍ಎಸ್‍ಆರ್ ಸಂಪೂರ್ಣ ಪೋಷಣ ಯೋಜನೆಯು ನವೆಂಬರ್-2016 ರಲ್ಲಿ 13 ಲಕ್ಷ ಲೀಟರ್ ಹಾಲಿನೊಂದಿಗೆ ಆರಂಭಗೊಂಡು ಹಂತ-ಹಂತವಾಗಿ 13 ಜಿಲ್ಲೆಗಳನ್ನು ಒಳಗೊಂಡ 55,600 ಅಂಗನವಾಡಿ ಕೇಂದ್ರಗಳಿಂದ 26 …
Read More »ದುರ್ಗಾದೇವಿ ನವರಾತ್ರಿ ಉತ್ಸವ ಸಮಿತಿವತಿಯಿಂದ ನಾಳೆ ಪೂರ್ವಭಾವಿ ಸಭೆ
ಮೂಡಲಗಿ: ದುರ್ಗಾದೇವಿ ನವರಾತ್ರಿ ಉತ್ಸವ ಸಮಿತಿವತಿಯಿಂದ ಪ್ರತಿ ವರ್ಷ ಜರುಗುವ ನವರಾತ್ರಿ ಉತ್ಸವ ಕುರಿತು ಪೂರ್ವಭಾವಿ ಸಭೆಯು ಸ. ೧೬ ಶುಕ್ರವಾರದಂದು ಸಾಂಯಕಾಲ ೪-೦೦ ಗಂಟೆಗೆ ನಗರದ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಲಿದೆ. ಪೂರ್ವಭಾವಿ ಸಭೆಗೆ ನಗರದ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಮುಖಂಡರು, ಯುವಕ-ಯುವತಿಯರು, ಕಾಲೇಜು ವಿದ್ಯಾರ್ಥಿಗಳು ಹಾಗೂ ನಗರದ ಸಾರ್ವಜನಿಕರು ಪೂರ್ವಭಾವಿ ಸಭೆಗೆ ಹಾಜರಾಗುವ ಮೂಲಕ ದುರ್ಗಾದೇವಿ ನವರಾತ್ರಿ ಉತ್ಸವ ಸಮಿತಿಗೆ ಅಗತ್ಯ ಸಲಹೆ …
Read More »ಚೀನಾ ಮತ್ತು ನಾರ್ವೇ ದೇಶಗಳನ್ನು ಹಿಂದಿಕ್ಕಿ ಕೆಎಂಎಫ್ ಗೆ “ಇನ್ನೋವೇಷನ್ ಇನ್ ಸ್ಕೂಲ್ ಮಿಲ್ಕ್ ಪ್ರೋಗ್ರಾಮ್ಸ್” ಪ್ರತಿಷ್ಠಿತ ಪ್ರಶಸ್ತಿ
ನವದೆಹಲಿ : ಶಾಲೆ ಹಾಗೂ ಅಂಗನವಾಡಿ ಮಕ್ಕಳಲ್ಲಿ ಅಪೌಷ್ಠಿಕತೆಯನ್ನು ನಿವಾರಣೆಗೊಳಿಸಿ ಆರೋಗ್ಯವಂತರನ್ನಾಗಿಸುವ ಸಾಮಾಜಿಕ ಕಳಕಳಿಯೊಂದಿಗೆ ರಾಜ್ಯ ಸರ್ಕಾರವು ಕೆಎಂಎಫ್ ಸಹಯೋಗದೊಂದಿಗೆ ಆರಂಭಿಸಲಾದ ಕ್ಷೀರಭಾಗ್ಯ ಯೋಜನೆಗೆ ಅಂತರಾಷ್ಟಿಯ ಡೇರಿ ಫೆಡರೇಷನ್ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಿದೆ. ಉತ್ತರ ಪ್ರದೇಶದ ಗ್ರೇಟರ್ ನೋಯಿಡಾದಲ್ಲಿ ನಿನ್ನೆಯಿಂದ ಆರಂಭಗೊoಡಿರುವ ಅಂತರರಾಷ್ಟಿಯ ಡೇರಿ ಫೆಡರೇಷನ್ ವಿಶ್ವ ಡೇರಿ ಶೃಂಗ ಸಭೆಯಲ್ಲಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಪರವಾಗಿ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ, ಮಾರುಕಟ್ಟೆ ವಿಭಾಗದ …
Read More »ಮೂಡಲಗಿ ತಾಲೂಕಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದಿಂದ ಮನವಿ
ಮೂಡಲಗಿ: ದೈಹಿಕ ಶಿಕ್ಷಣ ಶಿಕ್ಷಕರ ವೃಂದ & ನೇಮಕಾತಿ ನಿಯಮಗಳ ತಿದ್ದುಪಡಿ ಆದೇಶ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಯನ್ನು ಶೀಘ್ರವಾಗಿ ಮಾಡುವಂತೆ ಮನವಿಯನ್ನು ತಾಲೂಕಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದಿoದ ತಹಶೀಲ್ದಾರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಸಲ್ಲಿಸಿದ್ದಾರೆ. ಅವರು ಮನವಿಯಲ್ಲಿ ರಾಜ್ಯದ ದೈಹಿಕ ಶಿಕ್ಷಣ ಶಿಕ್ಷಕರ ಪ್ರಮುಖ ಬೇಡಿಕೆಗಳಾದ ದೈಹಿಕ ಶಿಕ್ಷಣ ಶಿಕ್ಷಕರ ವೃಂದ ನೇಮಕಾತಿ ನಿಯಮಗಳ ತಿದ್ದುಪಡಿ ಆದೇಶ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ …
Read More »ಕುರುಹಿನಶೆಟ್ಟಿ ಸೊಸೈಟಿಗೆ ೩.೨೨ಕೋಟಿ ಲಾಭ – ಬಸಪ್ಪ ಮುಗಳಖೋಡ
ಮೂಡಲಗಿ: ಪಟ್ಟಣದ ಪ್ರತಿಷ್ಠಿತ ಕುರುಹಿನಶೆಟ್ಟಿ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿಯು ಮಾರ್ಚ ಅಂತ್ಯಕ್ಕೆ ೩.೨೨ ಕೋಟಿ ರೂ. ಲಾಭ ಗಳಿಸಿ ಸಂಘವು ಪ್ರಗತಿ ಪಥದತ್ತ ಸಾಗಿದೆ ಎಂದು ಬ್ಯಾಂಕ್ ಚೇರಮನ್ ಬಸಪ್ಪ ಮುಗಳಖೋಡ ಹೇಳಿದರು. ಸೊಸೈಟಿ ಸಭಾಭವನದಲ್ಲಿ ೨೭ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘವು ಪ್ರಧಾನ ಕಚೇರಿಯ ಆಧುನಿಕ ಮಾದರಿಯ ಸುಸಜ್ಜಿತ ಕಟ್ಟಡ ಹೊಂದಿ ೧೩ ಶಾಖೆಗಳನ್ನು ಹೊಂದಿ ಎಲ್ಲಾ ಶಾಖೆಗಳು …
Read More »“ನಂದಿನಿ” ಹಾಲು ಪ್ರತಿ ಲೀ.ಗೆ ೩ ರೂ. ಹೆಚ್ಚಳ…? ಕೆಎಂಎಫ್‌ನ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಒಮ್ಮತದ ನಿರ್ಣಯ
ಬೆಂಗಳೂರು : ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಲು ರೈತರ ಆರ್ಥಿಕಾಭಿವೃದ್ಧಿಗೆ ಪ್ರತಿ ಲೀಟರ್ ಹಾಲಿಗೆ ೩ ರೂ. ಹೆಚ್ಚಳ ಮಾಡಲು ಕೆಎಂಎಫ್ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಕಳೆದ ಶುಕ್ರವಾರದಂದು ನಗರದ ಖಾಸಗಿ ಹೊಟೇಲ್‌ನಲ್ಲಿ ಜರುಗಿದ ಕೆಎಂಎಫ್‌ನ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಈ ಬಗ್ಗೆ ಸರ್ವಾನುಮತದ ನಿರ್ಣಯ ಕೈಗೊಂಡಿದ್ದು, ಕೆಎಂಎಫ್‌ನ ಎಲ್ಲ ೧೪ ಜಿಲ್ಲಾ ಹಾಲು ಒಕ್ಕೂಟಗಳು ಹಾಲಿನ ದರ ಹೆಚ್ಚಳ ಮಾಡುವುದರ ಬಗ್ಗೆ ಒಲುವು ತೋರಿವೆ ಎಂದು ಹೇಳಲಾಗುತ್ತಿದೆ. …
Read More »ನಿಧನ ವಾರ್ತೆ ಬಸಬಣ್ಣೆವ್ವ ಮಾರುತಿ ದುರದುಂಡಿ
ಮೂಡಲಗಿ: ಸಮೀಪದ ಕಂಕಣವಾಡಿ ಗ್ರಾಮದ ನಿವಾಸಿಯಾದ ಬಸವಣ್ಣೆವ್ವ ಮಾರುತಿ ದುರುದುಂಡಿ (೭೫) ನಿಧನರಾದರು. ಅವರು ಇಬ್ಬರು ಪುತ್ರರು, ಓರ್ವ ಪುತ್ರಿ, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Read More »ಎಲ್ಲರೊಂದಿಗೆ ಬೆರೆಯುವ ಅಜಾತಶತ್ರು ಉಮೇಶ ಕತ್ತಿ
ಮೂಡಲಗಿ: ಸಚಿವ ಉಮೇಶ ಕತ್ತಿ ಅವರ ನಿಧನಕ್ಕೆ ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಮೂಡಲಗಿ ಘಟಕದಿಂದ ಶ್ರದ್ಧಾಂಜಲಿಯನ್ನು ಅರ್ಪಿಸಿದರು. ಈ ಸಂದರ್ಭದಲ್ಲಿ ನುಡಿ ನಮನ ಸಲ್ಲಿಸಿದ ಬಾಲಶೇಖರ ಬಂದಿ ಹಾಗೂ ಎ.ಜಿ. ಶರಣಾರ್ಥಿ ಮಾತನಾಡಿ ‘ಉಮೇಶ ಕತ್ತಿ ಅವರು ಅಪ್ರತಿಮ ರಾಜಕಾರಣಿಯಾಗಿದ್ದರು. ಜನಪರ ಕಾರ್ಯಗಳನ್ನು ಮಾಡುವ ಮೂಲಕ ನಾಡಿನ ಹೃದಯದಲ್ಲಿ ಶಾಶ್ವತವಾಗಿ ಉಳಿದುಕೊಂಡಿದ್ದಾರೆ’ ಎಂದರು. ‘ಎಲ್ಲರೊoದಿಗೆ ಬೆರೆಯುವ ಅಜಾತಶತ್ರುವಾಗಿದ್ದ ಅವರ ನಿಧನದಿಂದ ಸಮಾಜಕ್ಕೆ ಹಾಗೂ ನಾಡಿಗೆ ತುಂಬಲಾರದಷ್ಟು ಆಘಾತವಾಗಿದೆ’ …
Read More »