ಮೂಡಲಗಿ : ಮೇ ೧೬ರಂದು ಕಲಿಕಾ ಚೇತರಿಕೆಗೋಸ್ಕರ ಶೈಕ್ಷಣಿಕ ವರ್ಷ ಆರಂಭದಲ್ಲಿ ವಿದ್ಯಾರ್ಥಿಗಳನ್ನು ವಿನೂತನವಾಗಿ ಸ್ವಾಗತಿಸುವ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಮೂಡಲಗಿ ವಲಯದ ಎಲ್ಲ ಶಾಲೆಗಳು, ಶಿಕ್ಷಕರು ಸಿದ್ಧಗೊಂಡಿದ್ದಾರೆ. ತುಕ್ಕಾನಟ್ಟಿ ಶಾಲಾ ಶಿಕ್ಷಕರು ಪಾಲಕರಿಗೆ ಮಮತೆಯ ಕರೆಯೋಲೆಯೊಂದಿಗೆ ಅಂಚೆ ಪತ್ರ ಬರೆಯುವ ಮೂಲಕ ತಮ್ಮ ಮಕ್ಕಳ ದಾಖಲಾತಿ ಮಾಡುವಂತೆ ಮನವಿ ಮಾಡಿಕೊಂಡಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಬಿಜಿಒ ಅಜೀತ ಮನ್ನಿಕೇರಿ ಹೇಳಿದರು. ಪಟ್ಟಣದ ಬಿಇಒ ಕಾರ್ಯಲಯದಲ್ಲಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದ …
Read More »Monthly Archives: ಮೇ 2022
ಸತ್ತಿಗೇರಿ ತೋಟದಲ್ಲಿ ಕಿಡಿಗೇಡಿಗಳಿಂದ ಮಸೀದಿ ಮೇಲೆ ಧ್ವಜ.. ಉಭಯ ಸಮುದಾಯಗಳ ಶಾಂತಿ ಸಭೆ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ.
ಗೋಕಾಕ : ಸಮೀಪದ ಅರಭಾವಿ ಸತ್ತಿಗೇರಿ ತೋಟದ ಮಸೀದಿ ಹತ್ತಿರ ಕೆಲ ಕಿಡಗೇಡಿಗಳು ಕಳೆದ ರಾತ್ರಿ ಕೇಸರಿ ಧ್ವಜ ಕಟ್ಟಿದ್ದರಿಂದ ಕೆಲ ಕಾಲ ಪರಿಸ್ಥಿತಿ ಉದ್ವಿಘ್ನಗೊಂಡಿದ್ದು, ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಸಿಬ್ಬಂದಿಗಳ ಮೂಲಕ ಸತ್ತಿಗೇರಿ ತೋಟದ ಉಭಯ ಸಮುದಾಯಗಳ ಸಭೆ ನಡೆಸುವ ಮೂಲಕ ಯಶಸ್ವಿಯಾಗಿ ಸಂಧಾನ ನಡೆಸಿದ್ದಾರೆ. ಇಲ್ಲಿಯ ಎನ್‌ಎಸ್‌ಎಫ್ ಅತಿಥಿ ಗೃಹದಲ್ಲಿ ಬುಧವಾರದಂದು ಅಲ್ಲಿನ ನಿವಾಸಿಗಳ ಸಭೆ ನಡೆಸಿ ತಪ್ಪಿತಸ್ಥರು ಯಾರೇ …
Read More »ಕೊಳಚೆ ಪ್ರದೇಶದ ನಿವಾಸಿಗಳಿಗೆ ಪಿಎಂ ಆವಾಸ್ ಯೋಜನೆಯಡಿಯಲ್ಲಿ ೧೪೨೯ ಮನೆಗಳ ಮಂಜೂರು.- ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ : ಮೂಡಲಗಿ ಪಟ್ಟಣ ವ್ಯಾಪ್ತಿಯಲ್ಲಿ ಘೋಷಿತ ಕೊಳಚೆ ಪ್ರದೇಶಗಳಿಗೆ ಪ್ರಧಾನ ಮಂತ್ರಿ ಆವಾಸ ಯೋಜನೆ ಹಾಗೂ ಎಚ್‌ಎಫ್‌ಎ ಯೋಜನೆಯಡಿಯಲ್ಲಿ 1429 ಫಲಾನುಭವಿಗಳಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡಲಾಗುತ್ತಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಮಂಗಳವಾರ ಸಂಜೆ ಇಲ್ಲಿಯ ತಹಶೀಲ್ದಾರ ಕಾರ್ಯಾಲಯದ ಆವರಣದಲ್ಲಿ ಜರುಗಿದ ಪಟ್ಟಣದ ಕೊಳಚೆ ಪ್ರದೇಶಗಳಲ್ಲಿ ಮನೆಗಳನ್ನು ನಿರ್ಮಿಸುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೊಳಚೆ ಪ್ರದೇಶಗಳಲ್ಲಿ ಸುಂದರವಾದ ವಸತಿ ಸೌಲಭ್ಯಗಳನ್ನು …
Read More »ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮನವಿಯ ಮೇರೆಗೆ ಘಟಪ್ರಭಾ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ನೀರು ಬಿಡುಗಡೆ ಮಾಡಿದ ಜಿಲ್ಲಾ ಸಚಿವ ಗೋವಿಂದ ಕಾರಜೋಳ
ಗೋಕಾಕ : ಸಾರ್ವಜನಿಕರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ನಾಳೆಯಿಂದ ೫ ದಿನಗಳವರೆಗೆ ತಲಾ ೧ ಟಿಎಂಸಿ ನೀರನ್ನು ಹರಿಸಲಾಗುತ್ತಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಮಂಗಳವಾರ ಸಂಜೆ ಈ ಬಗ್ಗೆ ಪತ್ರಿಕಾ ಪ್ರಕಟಣೆಯೊಂದನ್ನು ಹೊರಡಿಸಿರುವ ಅವರು, ನಾಳೆಯಿಂದ ಸಾರ್ವಜನಿಕರು ಮತ್ತು ಜಾನುವಾರುಗಳಿಗಾಗಿ ಕುಡಿಯಲಿಕ್ಕೆ ನೀರನ್ನು ಬಿಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ನಾಳೆ …
Read More »ತಾಲೂಕಾ ಆಡಳಿತದಿಂದ ಹೇಮರಡ್ಡಿ ಮಲ್ಲಮ್ಮಳ ಜಯಂತಿ ಆಚರಣೆ
ಮೂಡಲಗಿ: ಪಟ್ಟಣದ ತಹಶೀಲ್ದಾರ ಕಛೇರಿಯಲ್ಲಿ ಆತಾಲೂಕಾ ಆಡಳಿತದಿಂದ ಶಿವಶರಣೆ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮಳ ಜಯಂತಿ ಆಚರಿಸಲ್ಲಾಯಿತು. ಹೇಮರಡ್ಡಿ ಮಲ್ಲಮ್ಮಳ ಭಾವ ಚಿತ್ರಕ್ಕೆ ಮೂಡಲಗಿ ಪುಸರಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಉಪಾದ್ಯಕ್ಷೆ ರೇಣುಕಾ ಹಾದಿಮನಿ ಮತ್ತು ತಹಶೀಲ್ದಾರ ಡಿ.ಜಿ.ಮಹಾತ ಪೂಜೆಸಲ್ಲಿಸಿದರು. ಈ ಸಮಯದಲ್ಲಿ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗು ವಾಣಿಜ್ಯ ಮಹಾವಿದ್ಯಾಲಯ ನಿವೃತ್ತ ಪ್ರಾದ್ಯಾಪಕ ಪ್ರೊ.ಪಿ.ಕೆ.ರಡ್ಡೇರ ಮಾತನಾಡಿ, ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮನ್ನ ಜೀವನ ಚರಿತ್ರೆ ವೈವಿದ್ಯಮಯವಾಗಿದು, ಅವಳು ಇಡಿ ಮಹಿಳಾ …
Read More »ಮಾಡೆಲಿಂಗ್ ನಲ್ಲಿ ಮೂಡಲಗಿಗೆ ಎರಡು ಪ್ರಶಸ್ತಿ
ಮೈಸೂರಿನ : ಕಿಂಗ್ಸ್ ಎಲ್ಡೆನ್ ರೆಸಾರ್ಟಲ್ಲಿ ನಡೆದ ತಿಬ್ಬಾಸ್ ಗ್ರುಪ್ ಅರ್ಪಿಸುವ ತಿಬ್ಬಾಸ್ ಫ್ಯೂಚರ್ ಮಾಡೆಲ್ ಆಫ್ ಇಂಡಿಯಾ ಸೀಸನ್ 2 ನಲ್ಲಿ ಇದೇ ಮೊದಲ ಭಾರಿಗೆ ತಿಬ್ಬಾಸ್ ಗ್ರೂಪ್ ವತಿಯಿಂದ 16 ವಿಭಾಗಗಳನ್ನು ಪರಿಚಯಿಸಲಾಯಿತು. ಈ ಸ್ಪರ್ಧೆಯಲ್ಲಿ ಫ್ಯಾಷನ್ ಲೋಕದಲ್ಲೆ ಮೊದಲ ಸಲ ತಿಬ್ಬಾಸ್ ಗ್ರುಪ್ ಸಂಸ್ಥೆಯು ಫಾರ್ಮರ್ ಥೀಮ್ ಆಯೋಜಿಸಿತ್ತು ಈ ಸ್ಪರ್ಧೆಯಲ್ಲಿ ರಾಜ್ಯದ ಹಲವು ಸ್ಪರ್ಧಿಗಳ ಜೊತೆಯಲ್ಲಿ ರೈತರ ವೇಷಭೂಷಣದಲ್ಲಿ ಕಾಣಿಸಿಕೊಂಡಿದ್ದ ಮೂಡಲಗಿಯ ಯುವಕ ಮಂಜುನಾಥ …
Read More »ಕನ್ನಡ ಮನಸ್ಸು ಒಗ್ಗೂಡಿಸಿರುವ ಕನ್ನಡ ಸಾಹಿತ್ಯ ಪರಿಷತ್ತು : ಡಾ. ಮಹಾದೇವ ಜಿಡ್ಡಿಮನಿ
ಮೂಡಲಗಿ: ‘ಕನ್ನಡ ಸಾಹಿತ್ಯ ಪರಿಷತ್‌ವು ಕನ್ನಡ ಭಾಷಿಕ ಹಾಗೂ ಕನ್ನಡ ಮನಸ್ಸುಗಳನ್ನು ಒಂದುಗೂಡಿಸುವ ಮೂಲಕ ಕನ್ನಡ ನಾಡು ಕಟ್ಟುವಲ್ಲಿ ಪ್ರಮುಖ ಕಾರ್ಯಮಾಡಿದೆ’ಎಂದು ಸಾಹಿತಿ ಡಾ. ಮಹಾದೇವ ಜಿಡ್ಡಿಮನಿ ಹೇಳಿದರು. ಮೂಡಲಗಿ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಸ್ಥಳೀಯ ಶ್ರೀ ಶ್ರೀಪಾದಬೋಧ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ೧೦೮ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಕವಿಗೋಷ್ಠಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಕರ್ನಾಟಕ ಏಕೀಕರಣದ ಹೋರಾಟಕ್ಕೆ …
Read More »ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನ ದಿನಾಚರಣೆ ಆಚರಣೆ
ಮೂಡಲಗಿ: ಮೂಡಲಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ವು ಕನ್ನಡ ಸಾಹಿತ್ಯ ಪರಿಷತ್‌ನ ೧೦೮ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಕವಿಗೋಷ್ಠಿಯನ್ನು ಮೇ ೫ರಂದು ಬೆಳಿಗ್ಗೆ ೯.೩೦ಕ್ಕೆ ಸ್ಥಳೀಯ ಶ್ರೀಪಾದಬೋಧ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಏರ್ಪಡಿಸಿರುವರು. ಮಹಾವಿದ್ಯಾಲಯದ ಪ್ರಾಚಾರ್ಯ ಶಾನೂರಕುಮಾರ ಗಾಣಿಗೇರ ಅಧ್ಯಕ್ಷತೆವಹಿಸುವರು. ಸಾಹಿತಿ ಡಾ. ಮಹಾದೇವ ಜಿಡ್ಡಿಮನಿ ಕಾರ್ಯಕ್ರಮ ಉದ್ಘಾಟಿಸಿವರು. ಸಾಹಿತಿ ಬಾಲಶೇಖರ ಬಂದಿ ಉಪನ್ಯಾಸ ನೀಡುವರು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಪ್ರೊ. ಬಿ.ಸಿ. ಹೆಬ್ಬಾಳವಹಿಸುವರು. ಅತಿಥಿಗಳಾಗಿ ಕಸಾಪ ನಿಕಟಪೂರ್ವ ಅಧ್ಯಕ್ಷ …
Read More »ಬಸವ ಜಯಂತಿ ಆಚರಣೆ
ಮೂಡಲಗಿ: ವಿಶ್ವಗುರು ಬಸವಣ್ಣನವರ ಜಯಂತಿ ಪ್ರಯುಕ್ತ ಮಂಗಳವಾರ ಬೆಳಿಗ್ಗೆ ರುದ್ರಾಭೀಷೇಕ ಹಾಗೂ ಸಾಯಂಕಾಲ ೩ ಗಂಟೆಗೆ ಬಸವಣ್ಣನವರ ಭಾವಚಿತ್ರದೊಂದಿಗೆ ಪ್ರಮುಖ ಬೀದಿ ಹಾಗೂ ವೃತ್ತಗಳಲ್ಲಿ ಎತ್ತುಗಳ ಮೆರವಣಿಗೆಯು ಸಕಲ ವಾದ್ಯಮೇಳದೊಂದಿಗೆ ನೆರವೇರುವುದು ಎಂದು ಬಸವೇಶ್ವರ ಕಲ್ಯಾಣ ಮಂಟಪ ಟ್ರಸ್ಟ್ ಕಮೀಟಿ ಅಧ್ಯಕ್ಷ ಎಸ್ ಜಿ ಢವಳೇಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Read More »ಗಿಡ ನೆಟ್ಟು ಕಾರ್ಮಿಕರ ದಿನಾಚರಣೆ ಆಚರಣೆ
ಮೂಡಲಗಿ: ಇಲ್ಲಿನ ಈರಣ್ಣ ನಗರದ ಶ್ರೀ ದುರ್ಗಾದೇವಿ ದೇವಸ್ಥಾನ ಆವರಣದಲ್ಲಿ ಕಾರ್ಮಿಕ ದಿನಾಚರಣೆ ಪ್ರಯುಕ್ತ ಪರಿಸರ ಪ್ರೇಮಿ ಈರಪ್ಪ ಢವಳೇಶ್ವರ ಅವರು ೨೦ ಗಿಡ ನೆಟ್ಟು ವಿಭಿನ್ನವಾಗಿ ಕಾರ್ಮಿಕ ದಿನಾಚರಣೆ ಆಚರಿಸಿದರು ಶಿಕ್ಷಣ ಸಂಯೋಜಕ ಕರಿಬಸವರಾಜ ಅವರು ಸಸಿಗೆ ನೀರು ಉಣಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ರೈತನಂತೆ ನಿತ್ಯ ಶ್ರಮಪಡುವ ಕಾರ್ಮಿಕರ ಸೇವೆ ಅನನ್ಯವಾಗಿದೆ.ಅವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಅವರು ೫ಬಡ ನಿರ್ಗತಿಕ …
Read More »