ಮೂಡಲಗಿ: ಕಳ್ಳಿಗುದ್ದಿ ಗ್ರಾಮ ಪಂಚಾಯತನ ಅಧ್ಯಕ್ಷರಾಗಿ ಲಕ್ಷ್ಮಣ ಚನ್ನಾಳ ಉಪಾಧ್ಯಕ್ಷರಾಗಿ ಶೋಭಾ ಮೆಟ್ಟಿನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಗೋಕಾಕ ಜಿಆರ್‍ಬಿಸಿ ಎಇಇ ಶ್ರೀನಿವಾಸ ಬಿರಾದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 14 ಜನ ಸದಸ್ಯರ ಬಲ ಹೊಂದಿರುವ ಗ್ರಾಮ ಪಂಚಾಯಿತಿಯು ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಮಾರ್ಗದರ್ಶನದ ಮೇರೆಗೆ, ಗ್ರಾಮಗಳ ಅಭಿವೃದ್ಧಿ ಹಿತ ದೃಷ್ಠಿಯಿಂದ ಅವಿರೋಧ ಆಯ್ಕೆಯನ್ನು ಗ್ರಾಮಗಳ ಮುಖಂಡರುಗಳ ಉಪಸ್ಥಿತಿಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ. ನೂತನ ಸದಸ್ಯರುಗಳು: ರೇಣುಕಾ ದಳವಾಯಿ, …
Read More »Yearly Archives: 2021
ಮೂಡಲಗಿ ತಾಲೂಕಿನ ಪ್ರಥಮ ಕಸಾಪ ಸಮ್ಮೇಳನ ಪೆ.13 ರಂದು
ಮೂಡಲಗಿ: ತಾಲೂಕಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇದೇ ಫೆಬ್ರುವರಿ 13 ಶನಿವಾರದಂದು ಮೂಡಲಗಿ ನಗರದ ಶ್ರೀ ಶ್ರೀಪಾದಬೋಧ ಸ್ವಾಮಿಜಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ನಡೆಸಲು ಕಾರ್ಯಕಾರಣಿ ಸಭೆಯಲ್ಲಿ ನಿರ್ಧರಿಲಾಗಿದೆ. ಕಳೆದ ಸಾಲಿನಲ್ಲಿ ಕೋವಿಡ-19 ಮಹಾಮಾರಿ ಪರಿಣಾಮ ಲಾಕ್ ಡೌನ್‍ದಿಂದ ಕೊನೆಯ ಕ್ಷಣದಲ್ಲಿ ರದ್ದಾಗಿತ್ತು. ಸಮ್ಮೇಳನವನ್ನು ಈ ಹಿಂದೆ ನಿರ್ಧರಿಸಿದಂತೆ ನಾಡಿನ ಹಿರಿಯ ಸಾಹಿತಿ ಪ್ರೋ. ಸಂಗಮೇಶ ಗುಜಗೊಂಡ ಅವರ ಸರ್ವಾಧ್ಯಕ್ಷತೆಯಲ್ಲಿ ವಿಜೃಂಭನೆಯಿಂದ ಹಮ್ಮಿಕೊಳ್ಳುವುದಾಗಿ ಪರಿಷತ್ತ ಅಧ್ಯಕ್ಷ ಸಿದ್ರಾಮ …
Read More »ಫೆ 07 ಬೆಂಗಳೂರಿನಲ್ಲಿ “ಎಸ್.ಟಿ. ಮೀಸಲಾತಿಗಾಗಿ ಕುರುಬರ ಜಾಗೃತಿ ಸಮಾವೇಶ” : ಸೋಮಣ್ಣ ಮೌರ್ಯ
ವರದಿ: ಕೆ.ವಾಯ್ ಮೀಶಿ ಬೆಂಗಳೂರು: ಕುರುಬ ಸಮಾಜವು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ ಹಾಗೂ ರಾಜಕೀಯವಾಗಿಯೂ ಹಿಂದುಳಿದಿದೆ ಇಂದಿಗೂ ಸಹ ಅಲೆಮಾರಿ ಜೀವನ ನಡೆಸುತ್ತಿರುವ, ಬುಡಕಟ್ಟು ಸಂಸ್ಕøತಿಗಳನ್ನು ಆಚರಿಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮೀಸಲಾತಿಯು ಪ್ರಜೆಗಳ ಹಕ್ಕು. ಭಾರತ ದೇಶದಲ್ಲಿ ಹಲವು ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿದ್ದರೂ ಸಹ ಕರ್ನಾಟಕದಲ್ಲಿ ಕುರುಬ ಸಮುದಾಯ ಮೀಸಲಾತಿಯಿಂದ ವಂಚಿತವಾಗಿದೆ ಎಂದು ಸೋಮಣ್ಣ ಮೌರ್ಯ ಮಲ್ಲೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅವರು ಬೆಂಗಳೂರಿನಲ್ಲಿ …
Read More »ನೂತನ ಶಾಖಾಧಿಕಾರಿಯಾಗಿ ಬಿ ವಾಯ್ ಕುರಿ ಅಧಿಕಾರ ಸ್ವೀಕಾರ
ಮೂಡಲಗಿ: ಇಲ್ಲಿಯ ಹೆಸ್ಕಾಂ ಕಚೇರಿಯ ಹಳ್ಳೂರ ಗ್ರಾಮ ಶಾಖಾಧಿಕಾರಿಗಳಾಗಿ ಬಿ ವಾಯ್ ಕುರಿ ಅಧಿಕಾರ ವಹಿಸಿಕೊಡರು. ಈ ಮೊದಲು ಇವರು ನರಗುಂದನಲ್ಲಿ ಪಟ್ಟಣ ಶಾಖಾಧಿಕಾರಿಯಾಗಿ ಮೂರು ವರ್ಷ ಕಾರ್ಯ ನಿರ್ವಹಿಸಿ ವರ್ಗಾವಣೆಗೊಂಡು ಸಧ್ಯ ಪಟ್ಟಣದ ಹೆಸ್ಕಾಂ ಕಚೇರಿಯಲ್ಲಿ ಹಳ್ಳೂರ ಗ್ರಾಮ ಶಾಖಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ನೂತನ ಶಾಖಾಧಿಕಾರಿಗೆ ಸಿಬ್ಬಂದಿ ವರ್ಗ ಸ್ವಾಗತಿಸಿದರು. ನಂತರ ಮಾತನಾಡಿದ ಅವರು, ಸಿಬ್ಬಂದಿ,ರೈತರು ಮತ್ತು ಗ್ರಾಹಕರನ್ನು ವಿಶ್ವಾಸಕ್ಕೆ ತಗೆದುಕೊಂಡು ಉತ್ತಮ ಸೇವೆ ಸಲ್ಲಿಸುವುದಾಗಿ ಹೇಳಿದರು.
Read More »ಆರ್ಥಿಕತೆಗೆ ಚೈತನ್ಯ ತುಂಬಲು ಬಜೆಟ್ ಸಹಕಾರಿ, ಜನಹಿತದ ಬಜೆಟ್ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಶ್ಲಾಘನೀಯ
ಗೋಕಾಕ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಕೇಂದ್ರ ಬಜೆಟ್ ಬಗ್ಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದು, ಸಮಾಜದ ಪ್ರತಿಯೊಬ್ಬರಿಗೂ ಈ ಬಜೆಟ್ ಸಹಕಾರಿಯಾಗಿದೆ ಎಂದು ಶ್ಲಾಘಿಸಿದ್ದಾರೆ. ಕೃಷಿ ಹಾಗೂ ರೈತರನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ. ರೈತರ ಅಭಿವೃದ್ಧಿ ಅದು ಕೇಂದ್ರದಿಂದ ಮಾತ್ರ ಸಾಧ್ಯವಿದ್ದು, ಎಲ್ಲ ನಾಗರೀಕರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಜನಪರ ಹಾಗೂ ರೈತಪರ ಬಜೆಟ್ ಇದಾಗಿದೆ ಎಂದು ಅವರು ಹೇಳಿದ್ದಾರೆ. ಆರ್ಥಿಕತೆಗೆ ಚೈತನ್ಯ ತುಂಬಲು …
Read More »ಕೇಂದ್ರ ಸರಕಾರದ ಬಜೆಟ್ ಸ್ವಾಗತಾರ್ಹ : ಈರಣ್ಣ ಕಡಾಡಿ
ಮೂಡಲಗಿ: ಈ ಬಾರಿ ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ಜನಸಾಮಾನ್ಯರ ಆರೋಗ್ಯ, ರೈತರ ಆದಾಯ, ಗ್ರಾಮೀಣ ಜನರ ಮೂಲಸೌಕರ್ಯಗಳಿಗೆ ಆದ್ಯತೆ ನೀಡಿದ್ದು, ಜನಹಿತದ ಬಜೆಟ್ ಆಗಿದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ಈರಣ್ಣ ಕಡಾಡಿ ಹರ್ಷ ವ್ಯಕ್ತಪಡಿಸಿದರು. ಸೋಮವಾರ ಫೆ-01 ರಂದು ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ಕುರಿತು ಮಾತನಾಡಿದ ಅವರು ಕರೋನಾ ಹೊಡೆತಕ್ಕೆ ಕಳೆದ ಒಂದು ವರ್ಷದಲ್ಲಿ ಆರ್ಥಿಕ ಪರಿಸ್ಥಿತಿಗೆ ಬಾರಿ …
Read More »ಸರಕಾರದ ಯೋಜನೆಗಳನ್ನು ಸದುಪಯೋಗ ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ- ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ
ಮೂಡಲಗಿ: ಸರಕಾರವು ಬಡ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆಗಳಿದ್ದು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು. ಹೆಣ್ಣು ಮಕ್ಕಳಿಗೆ ಅನೇಕ ಸೌಲಭ್ಯಗಳಿದ್ದು ಅವುಗಳ ಉಪಯೋಗ ಪಡೆದುಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ ಹೇಳಿದರು. ಅವರು ಪಟ್ಟಣದ ವಾರ್ಡ್ ನಂ. 5ರ ಲಕ್ಷ್ಮೀನಗರದ ಶ್ರೀ ಕರೆಮ್ಮಾ ದೇವಿ ದೇವಸ್ಥಾನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಜರುಗಿದ ‘ಭಾಗ್ಯಲಕ್ಷ್ಮೀ ಬಾಂಡ್’ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. …
Read More »ದೂಪದಾಳ ಡ್ಯಾಂನಲ್ಲಿಯ ಮಣ್ಣಿನ ಹೂಳೆತ್ತುವ ಕಾರ್ಯ ಸರಕಾರ ಕೂಡಲೇ ಕೈಗೊಳ್ಳಬೇಕು- ಲಕ್ಕಣ್ಣ ಸವಸುದ್ದಿ
ಮೂಡಲಗಿ: 2008-13 ರ ಅವಧಿಯಲ್ಲಿ ಅಂದಿನ ಜಲಸಂಪನ್ಮೂಲ ಸಚಿವರಾಗಿದ್ದ ಎಸ್.ಆರ್ ಬೊಮ್ಮಾಯಿ ಹಾಗೂ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್ ಯಡಿಯೂರಪ್ಪನವರ ಅವಧಿಯಲ್ಲಿ ದೂಪದಾಳ ಡ್ಯಾಂನಲ್ಲಿಯ ಹೂಳೆತ್ತುವ ಕಾರ್ಯವನ್ನು ಇಟಲಿ ಮಾದರಿಯಲ್ಲಿ ಕೈಗೊಳ್ಳುವದಾಗಿ ಹೇಳಿದ್ದರು ಆದರೆ ಸದ್ಯ ಸ್ವದೇಶಿ ಮಾದರಿಯಲ್ಲಿಯೇ ಆ ಕಾರ್ಯಮಾಡಬೇಕೆಂದು ಕಾಂಗ್ರೇಸ್ ಜಿಲ್ಲಾ ಮುಖಂಡ ಲಕ್ಕಣ್ಣ ಸವಸುದ್ದಿ ಪತ್ರಿಕಾಘೋಷ್ಠಿಯಲ್ಲಿ ಸರಕಾರಕ್ಕೆ ಆಗ್ರಹಿಸಿದರು. ಪಟ್ಟಣದ ಪ್ರೇಸ್ ಕ್ಲಬ್‍ನಲ್ಲಿ ಆಯೋಜಿಸಿದ್ದ ಪತ್ರಿಕಾಘೋಷ್ಠಿಯಲ್ಲಿ ಮಾತನಾಡಿದ ಅವರು ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ದೂಫದಾಳ ಡ್ಯಾಂನಲ್ಲಿಯ ಮಣ್ಣು …
Read More »ರಸ್ತೆ ನಿಯಮಗಳನ್ನು ಪಾಲಿಸಿ ಅಮೂಲ್ಯವಾದ ಜೀವಗಳನ್ನು ಉಳಿಸಿ-ಸಿಪಿಆಯ್ ವೆಂಕಟೇಶ ಮುರನಾಳ
ಮೂಡಲಗಿ : ಸರಕಾರದಿಂದ ರೂಪಿಸಿದ ರಸ್ತೆ ನಿಯಮಗಳನ್ನು ಪಾಲಿಸಿ ಅಮೂಲ್ಯವಾದ ಜೀವಗಳನ್ನು ಉಳಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು ವಾಹನಗಳನ್ನು ಚಲಿಸುವಾಗ ರಸ್ತೆ ಬದಿಗಳಲ್ಲಿ ಅಳವಡಿಸಿದ ಸಂಚಾರಿ ನಿಯಮಗಳನ್ನು ಪಾಲಿಸುವದರೊಂದಿಗೆ ನಿಮ್ಮ ಸುರಕ್ಷತೆಯ ಜೊತೆಗೆ ನಿಮ್ಮ ಕುಟುಂಬ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವುದು ಅವಶ್ಯವಿದೆ. ಇಂದು ಯುವಕರು ಸರಿಯಾದ ವಾಹನಗಳ ನಿರ್ವಹಣೆಯ ನಿಯಗಳನ್ನು ಪಾಲಿಸದೆ ಮತ್ತೊಬ್ಬರ ಜೀವಕ್ಕೆ ಹಾನಿ ಮಾಡುವದರ ಜೊತೆಗೆ ತಮ್ಮ ಜೀವಕ್ಕೂ ಹಾನಿ ಮಾಡಿಕೊಳ್ಳುತ್ತಿದ್ದು ತಮ್ಮ ಜೀವವನ್ನು ಉಳಿಸಿಕೊಳ್ಳುವದರ …
Read More »ರಕ್ತದಾನದಿಂದಾಗಿ ಆರೋಗ್ಯ ವೃದ್ಧಿಯ ಜೊತೆಗೆ ಮಾನಸಿಕ ಸ್ಥಿತಿ ಮಿತಿಗಳು ಹತೋಟಿಯಲ್ಲಿ ಇರುತ್ತವೆ : ಡಾ. ಆರ್.ಎಸ್ ಬೆನಚಣಮರಡಿ
ಮೂಡಲಗಿ: ರಕ್ತದಾನದಿಂದಾಗಿ ಆರೋಗ್ಯ ವೃದ್ಧಿಯ ಜೊತೆಗೆ ಮಾನಸಿಕ ಸ್ಥಿತಿ ಮಿತಿಗಳು ಹತೋಟಿಯಲ್ಲಿ ಇರುತ್ತವೆ ಎಂದು ನಿವೃತ್ತ ತಾಲೂಕಾ ವೈಧ್ಯಾಧಿಕಾರಿ ಡಾ. ಆರ್.ಎಸ್ ಬೆನಚಣಮರಡಿ ಹೇಳಿದರು. ಅವರು ಪಟ್ಟಣದ ಸುರಕ್ಷಾ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಚಿಕ್ಕೋಡಿಯ ಮಾತೋ ಶ್ರೀ ರಕ್ತ ಬಂಡಾರ ಕೇಂದ್ರ, ಸುರಕ್ಷಾ ಪ್ಯಾರಾ ಮೆಡಿಕಲ್ ಕಾಲೇಜು, ಶ್ರೀ ಮಂಜುನಾಥ ಸೈನಿಕ ತರಭೇತಿ ಕೇಂದ್ರ, ಯುವ ಜೀವನ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ಐಚ್ಛಿಕ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ …
Read More »