ಭಾನುವಾರ , ಜೂನ್ 16 2024
kn
Breaking News

ರಸ್ತೆ ನಿಯಮಗಳನ್ನು ಪಾಲಿಸಿ ಅಮೂಲ್ಯವಾದ ಜೀವಗಳನ್ನು ಉಳಿಸಿ-ಸಿಪಿಆಯ್ ವೆಂಕಟೇಶ ಮುರನಾಳ

Spread the love

ಮೂಡಲಗಿ : ಸರಕಾರದಿಂದ ರೂಪಿಸಿದ ರಸ್ತೆ ನಿಯಮಗಳನ್ನು ಪಾಲಿಸಿ ಅಮೂಲ್ಯವಾದ ಜೀವಗಳನ್ನು ಉಳಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು ವಾಹನಗಳನ್ನು ಚಲಿಸುವಾಗ ರಸ್ತೆ ಬದಿಗಳಲ್ಲಿ ಅಳವಡಿಸಿದ ಸಂಚಾರಿ ನಿಯಮಗಳನ್ನು ಪಾಲಿಸುವದರೊಂದಿಗೆ ನಿಮ್ಮ ಸುರಕ್ಷತೆಯ ಜೊತೆಗೆ ನಿಮ್ಮ ಕುಟುಂಬ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವುದು ಅವಶ್ಯವಿದೆ. ಇಂದು ಯುವಕರು ಸರಿಯಾದ ವಾಹನಗಳ ನಿರ್ವಹಣೆಯ ನಿಯಗಳನ್ನು ಪಾಲಿಸದೆ ಮತ್ತೊಬ್ಬರ ಜೀವಕ್ಕೆ ಹಾನಿ ಮಾಡುವದರ ಜೊತೆಗೆ ತಮ್ಮ ಜೀವಕ್ಕೂ ಹಾನಿ ಮಾಡಿಕೊಳ್ಳುತ್ತಿದ್ದು ತಮ್ಮ ಜೀವವನ್ನು ಉಳಿಸಿಕೊಳ್ಳುವದರ ಜೊತೆಗೆ ನಾಗರಿಕರ ಜೀವ ರಕ್ಷಣೆಗೆ ಆಧ್ಯತೆ ನೀಡುವುದು ಅವಶ್ಯವಿದೆ ಎಂದು ಮೂಡಲಗಿಯ ಸಿಪಿಆಯ್ ವೆಂಕಟೇಶ ಮುರನಾಳ ಹೇಳಿದರು.

ಅವರು ಸ್ಥಳೀಯ ಪೋಲಿಸ್ ಠಾಣೆ ಹಾಗೂ ಆರ್.ಡಿ.ಎಸ್ ಪದವಿ ಮಹಾವಿದ್ಯಾಲಯದ ಸಯೋಗದಲ್ಲಿ ರಸ್ತೆ ಸಂಚಾರ ಸುರಕ್ಷತೆ ಸಪ್ತಾಹದ ಅಂಗವಾಗಿ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಇಂದಿನ ಯುವಕರಲ್ಲಿ ಮತ್ತು ಗ್ರಾಮೀಣ ಭಾಗದ ಜನರಲ್ಲಿ ರಸ್ತೆ ಸುರಕ್ಷತೆಯ ನಿಯಮಗಳ ಅರಿವು ಇಲ್ಲ ಇದರಿಂದ ಅಪಘಾತಗಳು ಹೆಚ್ಚಾಗುತ್ತಿದ್ದು ಅವುಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಸಲುವಾಗಿ ನಮ್ಮ ಇಲಾಖೆಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅಲ್ಲದೇ ಎಷ್ಟೋ ಜನರಲ್ಲಿ ವಾಹನಗಳ ದಾಖಲೆಗಳು ಸರಿಯಾಗಿರುವುದಿಲ್ಲ & ಲೈಸನ್ಸ್, ಆರ್.ಸಿ. ಬುಕ್ಕ್, ಇನ್ಸೂರನ್ಸ್ ಇನ್ನಿತರ ದಾಖಲೆಗಳು ಇಲ್ಲದೇ ಇರುವ ವಾಹನಗಳು ಅಪಘಾತ ಉಂಟಾದಾಗ ಅಪಘಾತ ಉಂಟಾದ ವ್ಯಕ್ತಿಗೆ ಪರಿಹಾರ ನೀಡುವಂತೆ ಇರುವ ಕಾನೂನುನಿಂದ ಒಂದು ಕುಂಟುಂಬಕ್ಕೆ ಆರ್ಥಿಕ ಸಮಸ್ಯೆ ಉಂಟಾಗುತ್ತದೆ ಆದ್ದರಿಂದ ದಾಖಲೆಗಳನ್ನು ಕಾನೂನು ಬದ್ದವಾಗಿ ನಿರ್ವಹಿಸುವುದು ಅವಶ್ಯವಿದೆ ಎಲ್ಲ ಯುವಕರು ಲೈಸನ್ಸ್ ಮಾಡಿಸಿಕೊಳ್ಳಬೇಕು ಮತ್ತು ಇತ್ತೀಚಿಗೆ ಸಾಮಾಜಿಕ ಜಾಲ ತಾಣಗಳಿಂದ ಹೆಚ್ಚಿನ ಅಪರಾಧಗಳು ನಡೆಯುತ್ತಿದ್ದು ಕಾಲೇಜು ವಿದ್ಯಾರ್ಥಿಗಳು ಈ ವಿಷಯದ ಬಗ್ಗೆ ಜಾಗೃತಿ ವಹಿಸುವುದು ಅವಶ್ಯವಿದೆ ಎಂದರು.

ಮೂಡಲಗಿ ಪಿಎಸ್‍ಐ ಎಚ್. ವಾಯ್ ಬಾಲದಂಡಿ ಮಾತನಾಡಿ ಕಾನೂನು ಪ್ರತಿಯೊಬ್ಬರ ರಕ್ಷಣೆಗೆ ಆಧ್ಯತೆ ನೀಡುತ್ತದೆ ಪೋಲಿಸ್ ಇಲಾಖೆ ಕಾನೂನು ಪಾಲಿಸುವದರ ಜೊತೆಗೆ ಜನರ ಜೀವ ರಕ್ಷಣೆಗೆ ಹೆಚ್ಚಿನ ಪ್ರಾಸಸ್ಥ್ಯ ನೀಡುತ್ತಿದ್ದು ರಸ್ತೆ ನಿಯಮಗಳನ್ನು, ಕಾನೂನು ನಿಯಮಗಳನ್ನು ಪಾಲಿಸಿ ನಿಮ್ಮ ಕುಟುಂಬಕ್ಕೆ ಒಳ್ಳೆಯ ಮಗನಾಗಿ ಸಮಾಜಕ್ಕೆ ಉತ್ತಮ ನಾಗರಿಕನಾಗಿ ನೀವು ತಯಾರಾದರೆ ನಿಮ್ಮ ರಕ್ಷಣೆಗೆ ನಮ್ಮ ಪೋಲಿಸ್ ಇಲಾಖೆ ಸದಾಕಾಲ ಸಿದ್ದವಾಗಿರುತ್ತದೆ ಎಂದರು.

ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಸಂತೋಷ ಪಾರ್ಶಿ ವಹಿಸಿಕೊಂಡಿದ್ದರು ಕಾಲೇಜು ಪ್ರಾಚಾರ್ಯ ಎಸ್.ಬಿ.ಗೋಟೂರ ಪ್ರಾಸ್ತಾವಿಕವಾಗಿ ಮಾತನಾಡಿದರು ಕಾರ್ಯಕ್ರಮದಲ್ಲಿ ಪೋಲಿಸ್ ಪೇದೆ ದುಂಡಪ್ಪಾ ಕೊಣ್ಣೂರ ಉಪನ್ಯಾಸಕರಾದ ಶಿವಾನಂದ ಸತ್ತಿಗೇರಿ, ಪ್ರಕಾಶ ಚೌಡಕಿ, ಮುತ್ತುರಾಜ ಒಡೆಯರ, ರಾಜು ಪತ್ತಾರ ಹಾಜರಿದ್ದರು ಗೀರಿಶ ಬಳಿಗಾರ ಸ್ವಾಗತಿಸಿದರು, ಭಾಗ್ಯಶ್ರೀ ಜೋಡಟ್ಟಿ ನಿರೂಪಿಸಿದರು. ಆನಂದ ಸಿಂಘೆ ವಂದಿಸಿದರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page