ವಡೇರಹಟ್ಟಿ: ಕೋರೊನಾ ವೈರಸ್ ವ್ಯಾಪಕವಾಗಿ ಹರಡುವುದನ್ನು ಕಂಡು ದಿನಾಂಕ: 4-4-2020ರ ಮುಂಜಾನೆ 10ಘಂಟೆಯಿಂದ ಗ್ರಾಮದ ಎಲ್ಲ ಅಂಗಡಿ-ಮುಂಗಟ್ಟುಗಳು ಬಂದ ಆಗಲಿದ್ದು, ಯಾವುದೇ ಕಾರಣಕ್ಕು ಜನರು ಬೀದಿಗೆ ಇಳಿಯಬಾರದು.

ಕಾರಣ ಕೋರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವದರಿಂದ ಹೈ-ಅಲರ್ಟ್ ಘೋಷಣೆಯಾಗಿದ್ದರಿಂದ ದಿ.8-4-2020ರ ಬೆಳಿಗ್ಗೆ 6ಘಂಟೆಯವರೆಗೆ ಯಾವುದೇ ವಾಹನಗಳು ಮತ್ತು ಸಾರ್ವಜನಿಕರು ರಸ್ತೆಗೆ ಇಳಿಯದಂತೆ ಸೂಚಿಸಿ. ಕೇವಲ ಔಷದ ಅಂಗಡಿ ಮತ್ತು ಆಸ್ಪತ್ರೆಗಳು ಮಾತ್ರ ಪ್ರಾರಂಭವಿದ್ದು, ಅಲ್ಲಿಯೂ ಕೂಡ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸೂಚಿಸಿದ್ದು, ಪ್ರತಿ ದಿನ ನೀರು ಮತ್ತು ಹಾಲು ಬೆಳಿಗ್ಗೆ 6 ರಿಂದ 8ಘಂಟೆಯವರೆಗೆ ಕರಿದಿಸಲು ಅವಕಾಶ ಇರುತ್ತದೆ ಎಂದು ಗ್ರಾಮಸ್ತರನ್ನ ವಿಸ್ವಾಸಕ್ಕೆ ತೆಗೆದುಕೊಂಡು, ಕಲ್ಲೊಳ್ಳಿ ಮತ್ತು ವಡೇರಹಟ್ಟಿ ಗ್ರಾಮಕ್ಕೆ ಇರುವ ರಸ್ತೆ ಸಂಪರ್ಕ ಮಾರ್ಗವನ್ನು ಬಂದ ಮಾಡಿಸಲಾಯಿತು ಎಂದು ಗ್ರಾಮದ ಬೀಟ್ ಪೋಲಿಸ ದುಂಡು ಕೋಣ್ಣೂರ ಮತ್ತು ಎಸ್.ಬಿ.ಬೆಕ್ಕೆರಿ ತಿಳಿಸಿದ್ದಾರೆ.
Sarvavani Latest Kannada News