ರಾಮದುರ್ಗ: ತಾಲೂಕಿನ ಸುರೇಬಾನ ಉಪ ಪೋಲಿಸ್ ಠಾಣೆಯ ಆವರಣದಲ್ಲಿ ಆಯೋಜಿಸಿದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಆಚರಣೆ ಹಾಗೂ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು
ಈ ಕಾರ್ಯಕ್ರಮದಲ್ಲಿ ಮಾತನಾಡಿದ ರಾಮದುರ್ಗ ತಾಲ್ಲೂಕಿನ DYSP ರಾಮನಗೌಡ ಹಟ್ಟಿಯವರು ಪ್ರತಿಯೊಬ್ಬ ವಾಹನ ಸವಾರರು ಕಡ್ಡಾಯವಾಗಿ ಕಾನೂನು ನಿಯಮ ಪಾಲಿಸಬೇಕು ಹಾಗೂ ಅಗತ್ಯ ಸಂದರ್ಭಗಳಿಗಾಗಿ ಹೊಸದಾಗಿ ಬಂದಿರುವ ಕರೆ ಸಂಖ್ಯೆ 112 ಹೊಂದಿರುವ ವಾಹನವನ್ನು ಬಳಸಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು.ಅಪಘಾತ ಮತ್ತು ಬೆಂಕಿ ಅವಘಡದಂತಹ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ಉದ್ದೇಶದಿಂದ ಇಲಾಖೆಯಿಂದ ಹೊಸದಾಗಿ ಬಂದಿರುವ ತುರ್ತು ವಾಹನ (112)ಕ್ಕೆ ಕರೆ ಮಾಡಬೇಕೆಂದು ಹೇಳಿದರು
ಇದೇ ಸಮಯದಲ್ಲಿ ರಾಮದುರ್ಗ ಸಿಪಿಐ ಶಶಿಕಾಂತ ವರ್ಮಾರವರು ಮಾತನಾಡಿ ಸುರೇಬಾನ ಮನಿಹಾಳ ಗ್ರಾಮದ ಪ್ರಮುಖ ಬೀದಿಗಳಲ್ಲಿ ಆಗುವ ಟ್ರಾಫಿಕ್ ಬಗ್ಗೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಬಗ್ಗೆ 112 ತುರ್ತು ಹೊಯ್ಸಳ ಪೋಲಿಸ್ ವಾಹನವನ್ನು ಯಾವ ಪರಿಸ್ಥಿತಿಯಲ್ಲಿ ಬಳಸಬೇಕು ಹಾಗೂ ಸಾರ್ವಜನಿಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಮೂಲಕ ತಮ್ಮ ಹಾಗೂ ತಮ್ಮ ಕುಟುಂಬದ ಸುರಕ್ಷತೆಯ ಜೊತೆಗೆ ಇನ್ನೊಬ್ಬರ ಜೀವ ಉಳಿಸಲು ಮುಂದಾಗಬೇಕು ಎಂದು ಹೇಳಿದರು
ಇದೇ ಸಂದರ್ಭದಲ್ಲಿ ರಾಮದುರ್ಗ ಪಿಎಸ್ಐ ನಾಗನಗೌಡ ಕಟ್ಟಿಮನಿಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿ ಮುಂಬರುವ ಹೋಳಿ ಹಬ್ಬದ ಸಂದರ್ಭದಲ್ಲಿ ಯಾವುದೇ ರೀತಿ ಅಹಿತಕರ ಘಟನೆಗಳು ನಡೆಯದಂತೆ ಸುರೇಬಾನ ಮನಿಹಾಳ ಗ್ರಾಮಗಳು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿನ ಹಿರಿಯರು ಮುತ್ತುವರ್ಜಿ ವಹಿಸಬೇಕು ಮತ್ತು ಒಳ್ಳೆಯ ರೀತಿಯಲ್ಲಿ ಮುಂಬರುವ ಎಲ್ಲಾ ಹಬ್ಬಗಳನ್ನು ಆಚರಿಸಬೇಕೆಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಡಿವಾಯ್ಎಸ್ಪಿ ರಾಮನಗೌಡ ಹಟ್ಟಿ ಸಿಪಿಐ ಶಶಿಕಾಂತ ವರ್ಮ,ಪಿಎಸ್ಐ ನಾಗನಗೌಡ ಕಟ್ಟಿಮನಿಗೌಡ್ರ,ಸುರೇಬಾನ ಮನಿಹಾಳ ಎರಡು ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿನ ಗುರುಹಿರಿಯರು ಮತ್ತು ಸುರೇಬಾನ ಮನಿಹಾಳ ಗ್ರಾಮದ ವ್ಯಾಪಾರಸ್ಥರು ಹಾಗೂ ಸುರೇಬಾನ ಉಪ ಪೋಲಿಸ್ ಠಾಣೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ರಾಮದುರ್ಗ : ಶ್ರೀಕಾಂತ್ ಪೂಜಾರ್