ರಾಮದುರ್ಗ: ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಬಸವೇಶ್ವರ ಹಮಾಲಿ ಕಾರ್ಮಿಕರ ಸಂಘದಿಂದ ಹಮಾಲಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕೆಂದು ಪ್ರತಿಭಟನೆ ಮಾಡುವ ಮೂಲಕ ಎಪಿಎಂಸಿ ಕಾರ್ಯದರ್ಶಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ವಿಧಾನ ಸೌಧ ಬೆಂಗಳೂರು ಇವರಿಗೆ ಮನವಿ ಸಲ್ಲಿಸಿದರು .
ಪೆಟ್ರೋಲ್ ಡೀಸೆಲ್ ಅಡುಗೆ ಅನಿಲ ಅಗತ್ಯ ವಸ್ತುಗಳ ಬೆಲೆಗಳನ್ನು ಕಡಿಮೆ ಮಾಡಬೇಕು. ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡದ ಪ್ರತಿ ಕುಟುಂಬಕ್ಕೂ ಮಾಸಿಕ 7.500 ರೂಪಾಯಿ ನೀಡಬೇಕು ಹಾಗೂ ಪಡಿತರ ಧಾನ್ಯಗಳನ್ನು ಪ್ರತಿ ವ್ಯಕ್ತಿಗೂ ತಲಾ 10 ಕೆಜಿ ನೀಡಬೇಕು . ಕಾಪೋರೇಟ್ ಬಂಡವಾಳ ಪರ ರೂಪಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು ಕಾರ್ಮಿಕರ ಹಕ್ಕುಗಳನ್ನು ಉಳಿಸಬೇಕು
ದೇಶದ ಸಂಪತ್ತಾದ ಸಾರ್ವಜನಿಕ ಉದ್ಯಮಿಗಳ ಖಾಸಗೀಕರಣ ನಿಲ್ಲಿಸಬೇಕು. ಅಸಂಘಟಿತ ಕಾರ್ಮಿಕರಿಗೆ ಸಾರ್ವತ್ರಿಕ ಸಾಮಾಜಿಕ ಭದ್ರತೆ ಒದಗಿಸಬೇಕು ಕೋವಿಡ್ ಸಂಕಷ್ಟಕ್ಕೆ ಒಳಗಾದ ಅಸಂಘಟಿತ ರಿಗೆ ಪರಿಹಾರ ಒದಗಿಸಬೇಕು
ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯನ್ನು ನಗರ ಪ್ರದೇಶಗಳಿಗೂ ವಿಸ್ತರಿಸಬೇಕು ಕೆಲಸದ ದಿನಗಳನ್ನು 200 ದಿನಗಳ ಹೆಚ್ಚಿಸಬೇಕು ಹೆಚ್ಚಿನ ಅನುದಾನ ಬಜೆಟ್ನಲ್ಲಿ ನೀಡಬೇಕು .
ಕೋವಿಡ್ ಎದುರಿಸಲು ಕೆಲಸ ಮಾಡುತ್ತಿರುವ ಮುಂಚೂಣಿ ಕಾರ್ಮಿಕರಿಗೆ ಸೂಕ್ತ ರಕ್ಷಣೆ ಮತ್ತು ವಿಮಾ ಸೌಲಭ್ಯ
ಒದಗಿಸಬೇಕು.
ಅಂಗನವಾಡಿ, ಆಶಾ, ಬಿಸಿಯೂಟ ಮತ್ತು ಇತರೆ ಸ್ತ್ರೀಂ ನೌಕರರಿಗೆ ಶಾಸನಬದ್ಧ ಕನಿಷ್ಟ ವೇತನ ಮತ್ತು ಸಾಮಾಜಿಕ ಭದ್ರತೆ
ಜಾರಿ ಮಾಡಬೇಕು.
ರಾಷ್ಟ್ರೀಯ ಆರ್ಥಿಕತೆಯನ್ನು ಪುನರುಜೀವನಗೊಲಿಸಲು ಶ್ರೀಮಂತರಿಗೆ ಆಸ್ತಿ ತೆರಿಗೆ ಇತ್ಯಾದಿಗಳನ್ನು ವಿಧಿಸುವ ಮೂಲಕ ಕೃಷಿ,
ಶಿಕ್ಷಣ, ಆರೋಗ್ಯ ಮತ್ತು ಇತರ ನಿರ್ಣಾಯಕ ಸಾರ್ವಜನಿಕ ಸೇವೆಗಳಿಗೆ ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸಬೇಕು.
ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್.ಪಿ.ಎಸ್) ರದ್ದುಗೊಳಿಸಿ, ಹಳೆ ಪಿಂಚಣಿ ವ್ಯವಸ್ಥೆಯನ್ನು ಪುನರ್ ಸ್ಥಾಪಿಸಬೇಕು.
ರೂ.26 ಸಾವಿರ ಸಮಾನ ಕನಿಷ್ಟ ವೇತನಕ್ಕಾಗಿ, ಸಂಘ ಮಾನ್ಯತೆ, ಗುತ್ತಿಗೆ ಮುಂತಾದ ಖಾಯಂಯೇತ್ತರರ ಖಾಯಂಗೆ.
ಅಸಂಘಟಿತರಿಗೆ ಭವಿಷ್ಯನಿಧಿಗೆ ಶಾಸನ ರೂಪಿಸಬೇಕು.
ಎಪಿಎಂಸಿ ಮಾರುಕಟ್ಟೆ ಹಮಾಲಿ ಕಾರ್ಮಿಕರ ಬೇಡಿಕೆಗಳು
“ಕಾಯಕ ನಿಧಿ” ಯೋಜನೆ ಅಡಿಯಲ್ಲಿ ಎಪಿಎಂಸಿ ಹಮಾಲಿ ಕಾರ್ಮಿಕರಿಗಾಗಿ ಈ ಹಿಂದೆ ಪ್ರಾರಂಭಿಸಲಾದ “ಕಾಯಕ ನಿಧಿ”
ಯೋಜನೆ ಬಡ ಹಮಾಲಿ ಕಾರ್ಮಿಕರಿಗೆ ಅತ್ಯಂತ ಪ್ರಯೋಜನಕಾರಿಯಾಗಿದ್ದು ಸರಕಾರದಿಂದ ಹಾಗೂ ಹಿಂದಿನಂತೆ ಎಪಿಎಂಸಿ
ಸಮಿತಿಗಳಿಂದ ನಿರಂತರ ಹಣಕಾಸು ಸಹಾಯ ಪಡೆದು ವೈದ್ಯಕೀಯ ಮರುಪಾವತಿ ಯೋಜನೆ ಮುಂದುವರೆಸಬೇಕು ಹಾಗೂ 60
ವರ್ಷ ಆದ ಹಮಾಲಿ ಕಾರ್ಮಿಕರಿಗೆ ಒಂದು ಬಾರಿ ಕನಿಷ್ಟ ರೂ. 1,00,000/- (ಒಂದು ಲಕ್ಷ) ನಿವೃತ್ತಿ ಪರಿಹಾರ (ಗ್ರಾಚೂಟ)
ನೀಡಬೇಕು.
ರಾಜ್ಯದಲ್ಲಿ ವಿವಿದ ಮಾರುಕಟ್ಟೆಗಳಲ್ಲಿ ಲಭ್ಯವಿರುವ ಜಾಗಗಳನ್ನು ಗುರುತಿಸಿ ಲೈಸೆನ್ಸ್ ಹೊಂದಿದ ವಸತಿ ರಹಿತ ಹಮಾಲಿ ಕಾರ್ಮಿಕರಿಗೆ
ಸರಕಾರದ ವಿವಿಧ ವಸತಿ ಯೋಜನೆಗಳನ್ನು ಬಳಸಿಕೊಂಡು ಉಚಿತವಾಗಿ ಯೋಗ್ಯ ವಸತಿ ಯೋಜನೆ ರೂಪಿಸಬೇಕು.
ಸರಕಾರ ಲೋಡಿಂಗ್ ಅನ್‌ಲೋಡಿಂಗ್ ಉದ್ದಿಮೆಗೆ ಕನಿಷ್ಟ ವೇತನ ಜಾರಿಮಾಡಿ ಹಮಾಲಿ ಕೂಲಿಗಳನ್ನು ನಿಗಧಿಗೊಳಿಸಲಾಗಿದ್ದು
ಎಲ್ಲಾ ಎಪಿಎಂಸಿಗಳಲ್ಲಿ ಕನಿಷ್ಟ ವೇತನ ಜಾರಿಯಾಗುವಂತೆ ಮುತವರ್ಜಿವಹಿಸಬೇಕು
ಎಪಿಎಂಸಿಗಳಲ್ಲಿ ಕೆಲಸ ನಿರ್ವಹಿಸುವ ಹಮಾಲಿ ಕಾರ್ಮಿಕರಿಗೆ ಬೇಡಿಕೆ ಆಧಾರದಲ್ಲಿ, ಹಮಾಲಿ ಸಂಘಗಳ ಶಿಫಾರಸ್ಸಿನಂತೆ ಹೊಸ
ಲೈಸೆನ್ಸ್ ಮತ್ತು ಲೈಸೆನ್ಸ್ ನವೀಕರಣ ಮಾಡಿಕೊಳ್ಳಬೇಕು. ಮಾಲೀಕರಿಂದ ಶಿಫಾರಸ್ಸು ಪತ್ರ ತರಲು ಒತ್ತಡ ಹೇರಬಾರದು.
ಮಹಿಳಾ ಹಮಾಲಿ ಕಾರ್ಮಿಕರಿಗೆ ಲೈಸೆನ್ಸ್ ನೀಡಬೇಕು. ಅವರಿಗೆ ಕನಿಷ್ಟ ವೇತನ ಸಿಗುವಂತ ವ್ಯವಸ್ಥೆಯಾಗಬೇಕು ಮತ್ತು ಶ್ರಮಿಕ ಭವನಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು
ಮಿಲ್-ಗೋಡೌನ್-ವೇರಹೌಸ್, ನಗರ ಗ್ರಾಮೀಣ ಬಜಾರ, ಬಸ್ ಸ್ಟಾಂಡ್, ಬಂದರು ಮತ್ತು ಸರಕಾರಿ ನಿಗಮಗಳ ಹಮಾಲಿ
ಕಾರ್ಮಿಕರ ಹಕ್ಕೊತ್ತಾಯಗಳು
ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಮಾಡಬೇಕು.
ಕರ್ನಾಟಕ ರಾಜ್ಯ ಪಾನೀಯ ನಿಗಮ, ಕೆಎಸ್‌ಸಿಎಫ್ಸಿ, ಎಫ್.ಸಿ.ಐ, ಕೇಂದ್ರ ಉಗ್ರಾಣ ನಿಗಮ, ವಿವಿಧ ಅಕ್ಕಿ, ಎಣ್ಣೆ, ಬೇಳೆ ಮಿಲ್
ಗಳಲ್ಲಿ ಮೊದಲಾದ ಕಡೆ ಹತ್ತಾರು ವರ್ಷಗಳಿಂದ ಕಾರ್ಮಿಕರು ದುಡಿಯುತ್ತಿದ್ದರೂ ಅವರಿಗೆ ಭವಿಷ್ಯನಿಧಿ,ವಿಮಾ ಸೌಲಭ್ಯ,ಬೋನಸ್ ಮೊದಲಾದ ಕಾರ್ಮಿಕ ಕಾನೂನುಗಳ ಜಾರಿಯಿಂದ ವಂಚಿತರಾಗಿದ್ದಾರೆ ಆ ಎಲ್ಲಾ ಕಾರ್ಮಿಕರಿಗೆ ಕಡ್ಡಾಯವಾಗಿ ಕಾರ್ಮಿಕ
ಕಾನೂನುಗಳು ಜಾರಿಯಾಗುವಂತೆ ಕ್ರಮವಹಿಸಬೇಕು.
ಹಮಾಲಿ ಕಾರ್ಮಿಕರು ಸೇರಿದಂತೆ ವಿವಿಧ ಪ್ರಮುಖ ಅಸಂಘಟಿತ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ ಸಿದ್ದಪಡಿಸಿರುವ ಅಸಂಘಟಿತ
ಕಾರ್ಮಿಕರ ಭವಿಷ್ಯನಿಧಿ ಯೋಜನೆ (ಪಶ್ಚಿಮ ಬಂಗಾಲ ಮಾದರಿ)ಯನ್ನು ಜಾರಿಮಾಡಬೇಕು ಅದಕ್ಕಾಗಿ ರಾಜ್ಯ ಬಜೆಟ್‌ನಲ್ಲಿ ಕನಿಷ್ಟ ರೂ. 1000 ಕೋಟಿಗಳ ಹಣಕಾಸು ನೆರವು ನೀಡಬೇಕು.
ಮಂಡಳಿಯಿಂದ ನೀಡಲಾಗುತ್ತಿರುವ ಅಂಬೇಡ್ಕರ ಸಹಾಯ ಹಸ್ತ ಸ್ಮಾರ್ಟ್ ಕಾರ್ಡಗಳನ್ನು ಸಮರ್ಪಕವಾಗಿ ಕೂಡಲೇ ಕಾರ್ಮಿಕರಿಗೆ
ಉಚಿತವಾಗಿ ನೀಡಬೇಕು.
ಎಲ್ಲಾ ವಸತಿ ರಹಿತ ಹಮಾಲಿ ಕಾರ್ಮಿಕರಿಗೆ ವಸತಿ ಯೋಜನೆಯನ್ನು ಜಾರಿ ಮಾಡಬೇಕು.
ಕೇಂದ್ರ ಸರಕಾರ ಜಾರಿಮಾಡಿರುವ ಪ್ರಧಾನಮಂತ್ರಿ ಜೀವನ ಭೀಮಾ ಮತ್ತು ಸುರಕ್ಷಾ ಯೋಜನೆಗಳನ್ನು ರಾಜ್ಯದ ಅಸಂಘಟಿತ
ಕಾರ್ಮಿಕರಿಗೆ ಉಚಿತವಾಗಿ ಮಂಡಳಿಯಿಂದ ಜಾರಿಮಾಡಬೇಕು.
ಮಂಡಳಿಯನ್ನು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ರೀತಿಯಲ್ಲಿ ಆರ್ಥಿಕ ಸಂಪನ್ಮೂಲಗಳನ್ನು
ಕ್ರೂಢಿಕರಿಸಿ ಅಭಿವೃದ್ಧಿಪಡಿಸಲು ಸೂಕ್ತಕ್ರಮವಹಿಸಬೇಕು.
ಕೋವಿಡ್ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ ಹಮಾಲಿ ಕಾರ್ಮಿಕರು ಸೇರಿದಂತೆ 11 ವಿಭಾಗದ ಅಸಂಘಟಿತ ಕಾರ್ಮಿಕರಿಗೆ ಕೂಡಲೇ
ಪರಿಹಾರ ವಿತರಿಸಬೇಕು.
ಅಂಬೇಡ್ಕರ ಸಹಾಯ ಹಸ್ತ (ಸ್ಮಾರ್ಟ ಕಾರ್ಡ) ಮತ್ತು ಇ-ಶ್ರಮ ಕಾರ್ಡ ಪಡೆದ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ
ಸೌಲಭ್ಯಗಳನ್ನು ಜಾರಿ ಮಾಡಬೇಕು.
ಸರಕಾರ ಲೋಡಿಂಗ್ ಅನ್‌ಲೋಡಿಂಗ್ ಉದ್ದಿಮೆಗೆ ಕನಿಷ್ಟ ವೇತನ ಜಾರಿಮಾಡಿ ಹಮಾಲಿ ಕೂಲಿಗಳನ್ನು ನಿಗಧಿಗೊಳಿಸಲಾಗಿದ್ದು
ಎಲ್ಲಾ ವಿಭಾಗದ ಹಮಾಲಿ ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿಯಾಗುವಂತೆ ಕಾರ್ಮಿಕ ಇಲಾಖೆ ಮುತವರ್ಜಿವಹಿಸಬೇಕು
ನಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕೆಂದು ಪ್ರತಿಭಟನೆ ನಡೆಸಿದರು.
ಈ ಒಂದು ಪ್ರತಿಭಟನೆಯಲ್ಲಿ ರಾಮದುರ್ಗ ತಾಲೂಕು ಶ್ರೀಬಸವೇಶ್ವರ ಅಮಾಲಿ ಕಾರ್ಮಿಕ ಸಂಘದ ಅಧ್ಯಕ್ಷರಾದ ನಾಗರಾಜ್ ಮ ಮಾದರ್, ಎಸ್ಎಂ ಮಕಾನದರ್, ಹಮಾಲಿ ಕಾರ್ಮಿಕ ಸಂಘದ ಸಿಬ್ಬಂದಿಗಳು ಭಾಗವಹಿಸಿದ್ದರು