ರಾಮದುರ್ಗ: ಪಟ್ಟಣದ ಖ್ಯಾತ ಉದ್ಯಮಿ ಚಿಕ್ಕರೇವಣ್ಣನವರು ಕೋವಿಡ್ ಸಂದರ್ಭದಲ್ಲಿ ತಾಲೂಕಿನ ಪ್ರತಿಯೊಂದು ಹಳ್ಳಿ ಗಳಲ್ಲಿ ಆಹಾರದ ಕಿಟ್ ವಿತರಿಸಿ ಮಾನವೀಯತೆ ಮೆರೆದರು.
SSLC ವಿಧ್ಯಾರ್ಥಿಗಳ ನೇರವಿಗೆ ಬಂದ ಶಿಕ್ಷಣ ಪ್ರೇಮಿ ಚಿಕ್ಕ ರೇವಣ್ಣನವರು ರಾಮದುರ್ಗ ತಾಲೂಕಿನ 17 ಪರೀಕ್ಷಾ ಕೇಂದ್ರಗಳಿಗೆ ಹಾಗೂ 3901ಎಲ್ಲಾ ವಿಧ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿವರ್ಗದವರಿಗೆ 6000 ಮಾಸ್ಕ್, 6000 ಸ್ಯಾನಿಟೈಸರ್,6000 ಊಟದ ಪ್ಯಾಕೆಟ್, 6000 ನೀರಿನ ಬಾಟಲ್ಗಳನ್ನು ವಿತರಣೆ ಮಾಡಲು ವ್ಯವಸ್ಥೆ ಮಾಡಿದ್ದಾರೆ,ಇಂದು ತಾಲೂಕಿನ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಮಾಸ್ಕ್ ಸ್ಯಾನಿಟೈಸರ್ ಊಟದ ಪ್ಯಾಕೆಟ್, ನೀರಿನ ಬಾಟಲ್, ವಿತರಣೆ ಮಾಡಲು ಈಗಾಗಲೇ ಎಲ್ಲಾ ಸಿದ್ದತೆ ಮಾಡಲಾಗಿದು.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕು ರಾಮದುರ್ಗದಲ್ಲಿ ಇಂದಿನಿಂದ ಮತ್ತು ಜುಲೈ 22 ರವರೆಗೆ ನಡೆಯುವ SSLC ಪರೀಕ್ಷಾ ಕೇಂದ್ರಗಳಿಗೆ ಹಾಗೂ ಎಲ್ಲಾ ವಿಧ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಮಾಸ್ಕ್ ಸ್ಯಾನಿಟೈಸರ್, ಊಟ, ನೀರು, ವ್ಯವಸ್ಥೆ ಮಾಡುತ್ತಿರುವ ಮೂಲಕ 2020-21ನೇ ಸಾಲಿನ SSLC ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಶಿಕ್ಷಣ ಪ್ರೇಮಿಗಳು ಹಾಗೂ ಸಮಾಜ ಸೇವಕರು, ಹಾಗೂ ಖ್ಯಾತ ಉದ್ಯಮಿಗಳಾದ ಚಿಕ್ಕ ರೇವಣ್ಣವರು ಶುಭ ಕೋರಿದರು.
ವರದಿ: ಶ್ರೀಕಾಂತ ಪೂಜಾರ್