ರಾಮದುರ್ಗ : ಸಾಲಬಾದೆ ತಾಳದೆ ರೈತನೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಚೆನ್ನಾಪೂರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ .
ಆತ್ಮಹತ್ಯೆ ಮಾಡಿಕೊಂಡ ರೈತ ಹನಮಂತ ಯಮನಪ್ಪ ಓಗಳಾಪೂರ ( 35 ) ಎಂದು ತಿಳಿದಿದ್ದು , ಕೃಷಿ ಕೆಲಸಕ್ಕಾಗಿ ಬಟಕುರ್ಕಿ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕಿನಲ್ಲಿ 70 ಸಾವಿರ , ಬಟಕುರ್ಕಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 30 ಸಾವಿರ ಹಾಗೂ ಖಾಸಗಿ ಸುಮಾರು 2 ಲಕ್ಷ ಸೇರಿದಂತೆ 3 ಲಕ್ಷಕ್ಕೂ ಅಧಿಕ ಸಾಲ ಮಾಡಿರುವದಾಗಿ ಅವರ ಕುಟುಂಬ ಮೂಲಗಳು ತಿಳಿಸಿವೆ . 3 ಎಕರೆ ಜಮೀನು ಹೊಂದಿದ ರೈತ ಸಾಲದಿಂದಾಗಿ ಕಳೆದ ವರ್ಷ 1 ಎಕರೆ ಹೊಲವನ್ನು ಮಾರಾಟ ಮಾಡಿ ಅದರಿಂದ ಕೆಲ ಸಾಲ ತೀರಿಸಿದ್ದ .
ಆದರೂ ಸಾಲ ತಿರದ ಕಾರಣ ಮನನೊಂದು ಶುಕ್ರವಾರ ತನ್ನ ಹೊಲದಲ್ಲಿರುವ ಗಿಡಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ . ಮೃತನಿಗೆ ಪತ್ನಿ , ಓರ್ವ ಪುತ್ರ , ಒರ್ವ ಪುತ್ರಿ ಸೇರಿದಂತೆ ಇತರ ಕುಟುಂಬ ಸದಸ್ಯರನ್ನು ಅಗಲಿದ್ದಾರೆ . ಈ ಘಟನೆ ಕುರಿತು ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,
ಇಂದು ತಾಲೂಕಿನ ಚನ್ನಾಪೂರ ಗ್ರಾಮದಲ್ಲಿ ಭೇಟಿ ನೀಡಿದ ಚಿಕ್ಕರೇವಣ್ಣರವರು ಖ್ಯಾತ ಉದ್ಯಮಿಗಳು ಹಾಗೂ ಸಮಾಜ ಸೇವಕರು ಮೃತ ರೈತನ ಮನೆಗೆ ಬೇಟಿ ನೀಡಿ ಸಾಂತ್ವನ ಹೇಳಿ 5000 ರೂ ಸಹಾಯಧನ ನೀಡಿ ಪ್ರತಿ ತಿಂಗಳು 1000 ರೂ ನೀಡುವುದಾಗಿ ಹೇಳಿದರು.
ಈ ಸಂದರ್ಬದಲ್ಲಿ ಹಲಗತ್ತಿ ಬಸಪ್ಪ ಶೇಡಬಾಳ, ರಾಮದುರ್ಗ ಬಿ,ಆರ್, ದೊಡಮನಿ, ಹಾಗೂ ಮಾರುತಿ ಮೆಟ್ಟಿನ ಹಾಗೂ ಇತರರೂ ಇದ್ದರು