ಭಾನುವಾರ , ಮೇ 28 2023
kn
Breaking News

‘ರವಿ ಬೆಳಗೆರೆ ಅವರದು ಮಾಂತ್ರಿಕ ಬರವಣಿಗೆ’ :ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ

Spread the love

ಮೂಡಲಗಿ: ‘ರವಿ ಬೆಳಗೆರೆ ಅವರ ಮಾಂತ್ರಿಕ ಬರವಣಿಗೆಯಿಂದ ಓದುಗರ ಸಮೂಹವನೇ ಸೃಷ್ಟಿ ಮಾಡಿದ್ದರು’ಎಂದು ಸಾಹಿತಿ ಬಾಲಶೇಖರ ಬಂದಿ ಹೇಳಿದರು.
ಅಕಾಲಿಕವಾಗಿ ನಿಧನ ಹೊಂದಿದ ಹಾಯ್ ಬೆಂಗಳೂರು ವಾರ ಪತ್ರಿಕೆಯ ಸಂಪಾದಕ ಹಾಗೂ ಖ್ಯಾತ ಪತ್ರಕರ್ತ, ಸಾಹಿತಿ, ಲೇಖಕ, ಅಕ್ಷರ ಮಾಂತ್ರಿಕರಾದ ರವಿ ಬೆಳಗೆರೆ ಅವರಿಗೆ ಮೂಡಲಗಿ ಪತ್ರಿಕಾ ಬಳಗದ ಕಚೇರಿಯಲ್ಲಿ ಏರ್ಪಡಿಸಿದ್ದ ಶ್ರದ್ಧಾಂಜಲಿ ಮತ್ತು ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಾರಂಭದ ದಿನಗಳಲ್ಲಿ ಸಾಕಷ್ಟು ಕಷ್ಟ, ನೋವನ್ನು ಉಂಡು ಬೆಳೆದವರು ಎಂದರು.
ರವಿ ಬೆಳೆಗೆರೆ ಅವರಲ್ಲಿ ಇದ್ದ ಆಗಾಧವಾದ ಪಾಂಡಿತ್ಯ, ಬರವಣಿಗೆಯ ಶೈಲಿ ಹಾಗೂ ಮಾತನಾಡುವ ಕಲೆ ಇವು ಅವರನ್ನು ಶಿಖರೆತ್ತರಕ್ಕೆ ಬೆಳೆಸಿದ್ದವು. ಪತ್ರಿಕಾ ರಂಗದಲ್ಲಿ ತಮ್ಮದೆಯಾದ ವ್ಯಕ್ತಿತ್ವ ರೂಪಿಸಿಕೊಂಡ ಪತ್ರಕರ್ತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು ಎಂದರು.
ಬೆಳಗೆರೆ ಅವರು ಘಟನೆಗಳು ನಡೆದ ಸ್ಥಳಕ್ಕೆ ತಾವೇ ಖುದ್ದಾಗಿ ಹೋಗಿ ವಸ್ತುಸ್ಥಿತಿಯನ್ನು ಬರವಣಿಗೆಯ ಮೂಲಕ ಮಾಡುವ ನಿರೂಪಣೆಯು ಓದುಗರನ್ನು ಮಂತ್ರಮುಗ್ದರನ್ನಾಗಿಸುವಂತಿತ್ತು. ಐವತ್ತಕ್ಕೂ ಹೆಚ್ಚು ಕೃತಿಗಳನ್ನು ನೀಡಿದ್ದು, ಹಲವಾರು ಮೌಲಿಕ ಪ್ರಶಸ್ತಿಗಳನ್ನು ಪಡೆದುಕೊಂಡಿರುವರು ಎಂದರು.
ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕøತ ಸಿದ್ದು ದುರದುಂಡಿ ಮಾತನಾಡಿ ‘ರವಿ ಬೆಳೆಗೆರೆಯವರು ಯುವ ಪತ್ರಕರ್ತರಿಗೆ ಪ್ರೇರಣೆಯಾಗಿದ್ದರು. ಅವರ ಮಾತು ಮತ್ತು ಬರವಣಿಗೆ ಎರಡರಲ್ಲೂ ನಿಷ್ಠೂರತೆ ಇತ್ತು ಎಂದರು.
ಲಕ್ಷ್ಮಣ ಅಡಿಹುಡಿ ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮ ಪೂರ್ವದಲ್ಲಿ ಒಂದು ನಿಮಿಷ ಮೌನ ಆಚರಿಸಿ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಸುಧಾಕರ ಉಂದ್ರಿ, ಎಲ್.ಸಿ.ಗಾಡವಿ, ಕೃಷ್ಣಾ ಗಿರೆನ್ನವರ, ಅಲ್ತಾಫ್ ಹವಾಲ್ದಾರ್, ಲಕ್ಷ್ಮಣ ಅಡಿಹುಡಿ, ಕೆ.ಎಲ್.ಮೀಶಿ, ಮಲ್ಲು ಬೋಳನವರ, ಸುಭಾಷ ಗೋಡ್ಯಾಗೋಳ, ಸಚೀನ್ ಪತ್ತಾರ, ಸುಭಾಷ ಕಡಾಡಿ, ಈಶ್ವರ ಡವಳೇಶ್ವರ, ಮಲ್ಲಿಕ್ ಬಾಗವಾನ್, ಲಕ್ಷ್ಮಣ ಮ್ಯಾಗೇರಿ, ಯಲ್ಲಾಲಿಂಗ ವಾಳದ, ಸುರೇಶ ಎಮ್ಮಿ, ಶಿವಬಸು ಮೋರೆ ಉಪಸ್ಥಿತರಿದ್ದರು


Spread the love

About gcsteam

Check Also

ಹಳೆಯ ಪಿಂಚಣಿ ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ:ಬೀರಪ್ಪ ಅಂಡಗಿ

Spread the loveಕೊಪ್ಪಳ: ೧ನೇ ಏಪ್ರೀಲ್ ೨೦೦೬ ರ ನಂತರ ನೇಮಕಗೊಂಡ ರಾಜ್ಯ ಸರಕಾರಿ ನೌಕರರಿಗೆ ಜಾರಿಗೆ ಮಾಡಲಾಗಿರುವ ನೂತನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page