ಭಾನುವಾರ , ಡಿಸೆಂಬರ್ 22 2024
kn
Breaking News

ದಲಿತ ವಿದ್ಯಾರ್ಥಿನಿ ಮಧು ಹುಲಿಸ್ಕಾರ ಅವರ ಹತ್ಯೆ ಗೈದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ರಾಜ್ಯಪಾಲರಿಗೆ ಮನವಿ

Spread the love

ರಾಮದುರ್ಗ: ಗದಗ ಜಿಲ್ಲೆ ನರಗುಂದ ತಾಲೂಕೂ ನರಗುಂದ ಪಟ್ಟಣದ ದಲಿತ ವಿದ್ಯಾರ್ಥಿನಿಯ ಮಧು ಹುಲಿಸ್ಕಾರ ಅವರ ಹತ್ಯೆ ಖಂಡಿಸಿ ಕರ್ನಾಟಕ ಭೀಮ ಸೇನಾ ಸಮಿತಿ ಮತ್ತು ವಿಶ್ವ ಹಿಂದೂ ಪರಿಷತ್ ಬಜರಂಗದಳ ರಾಮದುರ್ಗ ತಾಲೂಕ ಘಟಕದಿಂದ ಪ್ರತಿಭಟನೆ ನಡೆಸಿ ಘನ ಸರ್ಕಾರ ಮಹಿಳಾ ಭದ್ರತಾ ಒದಗಿಸಿಕೊಡಬೇಕು ಮತ್ತು ಅಪರಾಧಿಗೆ ಕೂಡಲೇ ಗಲ್ಲುಶಿಕ್ಷೆ ವಿಧಿಸಬೇಕೆಂದು ತಹಸೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮಿನಿವಿಧಾನಸೌಧದ ಎದುರಿಗೆ ಕರ್ನಾಟಕ ಭೀಮಸೇನ ಸಮಿತಿ ರಾಮದುರ್ಗ ತಾಲೂಕ ಘಟಕ ರವರಿಂದ ಬೇಕೇ ಬೇಕು ನ್ಯಾಯ ಬೇಕು. ಆರೋಪಿಗೆ ಗಲ್ಲು ಶಿಕ್ಷೆ ಆಗಲೇಬೇಕು. ಎಂದು ಕೂಗುತ್ತಾ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನಂತರ ರಾಮದುರ್ಗ ತಾಲೂಕ ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಭೀಮಸೇನ ಸಮಿತಿ ರಾಮದುರ್ಗ ತಾಲೂಕ ಅಧ್ಯಕ್ಷರಾದ ಮಂಜುನಾಥ್ ಮಾದರ್. ವಿಶ್ವ ಹಿಂದೂ ಪರಿಷತ್ ಬಜರಂಗದಳ ತಾಲೂಕ ಕಾರ್ಯದರ್ಶಿ ರವಿ ಹೊಸೂರು. ಕೃಷ್ಣಾ ಪಾಟೀಲ್.ನವೀನ್ ಅಂಗಡಿ.
ಎಲ್ಲಪ್ಪ ಮಾದರ್. ರವಿ ಮಾದರ್. ಮತ್ತು ರಾಜು ಗೋಸಾವಿ. ಲಕ್ಷ್ಮಿ ಸೋಗಲಾದ.ಮತ್ತು ಸರ್ವ ಸಂಘಟಿಕರು ಉಪಸ್ಥಿತರಿದ್ದರು.

ವರದಿ : ಶ್ರೀಕಾಂತ ಪೂಜಾರ್


Spread the love

About gcsteam

Check Also

ತಮ್ಮ ಸ್ವಂತ ವೆಚ್ಚದಲ್ಲಿ ಅರಭಾವಿ ಕ್ಷೇತ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಕಿಟ್‌ಗಳನ್ನು ವಿತರಿಸಿದ ಬಾಲಚಂದ್ರ ಜಾರಕಿಹೊಳಿ

Spread the loveಗೋಕಾಕ : ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದ್ದು, ಹಳ್ಳಿಗಳಿಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page