.
ಮುಧೋಳ: ೧ನೇ ಎಪ್ರಿಲ್ ೨೦೦೬ ರ ನೇಮಕಗೊಂಡ ರಾಜ್ಯ ಸರಕಾರಿ ನೌಕರರಿಗೆ ಜಾರಿಗೆ ಮಾಡಿರುವ ಎನ್.ಪಿ.ಎಸ್.ಯೋಜನೆಯನ್ನು ರದ್ದು ಮಾಡಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರಕಾರಿ ನೌಕರರ ಸಂಘದ ರಾಜ್ಯ ಗೌರವಾಧ್ಯಕ್ಷರು ಹಾಗೂ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಸರಕಾರವನ್ನು ಒತ್ತಾಯಿಸಿದ್ದಾರೆ.
ಅವರು ಬಾಗಲಕೋಟ ಜಿಲ್ಲೆಯ ಮುಧೋಳದಲ್ಲಿ ಮಾತನಾಡಿ,೧ ನೇ ಎಪ್ರಿಲ್ ೨೦೦೬ ರ ನಂತರ ನೇಮಕಗೊಂಡ ರಾಜ್ಯ ಸರಕಾರಿ ನೌಕರರಿಗೆ ಸರಕಾರವು ಎನ್.ಪಿ.ಎಸ್.ಎಂಬ ಭದ್ರತೆ ಇಲ್ಲದ ಯೋಜನೆಯನ್ನು ಜಾರಿಗೆ ತರಲಾಗಿದೆ.ಯಾವುದೇ ಯೋಜನೆಯನ್ನು ಜಾರಿಗೆ ತರುವ ಮುನ್ನ ಅದರ ಸಾಧಕ- ಬಾಧಕಗಳ ಯೋಚನೆ ಮಾಡಿ ನಂತರ ಯೋಜನೆಯನ್ನು ಜಾರಿಗೆ ಮಾಡಲಾಗುತ್ತದೆ.ಆದರೆ ಸರಕಾರಿ ನೌಕರರ ಸಮೂಹಕ್ಕೆ ಜಾರಿಗೆ ಮಾಡಲಾದ ಎನ್.ಪಿ.ಎಸ್.ಯೋಜನೆಯು ಸರಕಾರಿ ನೌಕರರಿಗೆ ಮಾರಕವಾಗಿದೆ ಎಂಬ ಅಂಶ ಗೊತ್ತಿದ್ದರೂ ಕೂಡಾ ಸರಕಾರವು ಯೋಜನೆಯಲ್ಲಿ ಜಾರಿಗೆ ಮಾಡಿರುವುದು ಖಂಡನೀಯ ಸಂಗತಿಯಾಗಿದೆ.ಎನ್.ಪಿ.ಎಸ್. ಯೋಜನೆ ಜಾರಿಗೆಯಾದ ನಂತರ ಅದರಲ್ಲಿ ಸರಕಾರಿ ನೌಕರರಿಗೆ ಪೂರಕವಾದ ಅಂಶಗಳು ಕಡಿಮೆ ಇದ್ದು ಮಾರಕವಾದ ವಿಚಾರಗಳು ಹೆಚ್ಚು ಇರುವ ಬಗ್ಗೆ ಅರಿತ ನಂತರ ನೌಕರರಿಗೆ ಮರಣ ಶಾಸನವಾಗಿ ಪರಿಗಣಿಸಿರುವ ಎನ್.ಪಿ.ಎಸ್.ಯೋಜನೆಯನ್ನು ರದ್ದು ಪಡಿಸಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ಮಾಡುವಂತೆ ಸರಕಾರದ ಮೇಲೆ ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರಕಾರಿ ನೌಕರರ ಸಂಘದ ವತಿಯಿಂದ ಅನೇಕ ರೀತಿಯಲ್ಲಿ ಪ್ರತಿಭಟನೆ ಮಾಡಿದರೂ ಕೂಡಾ ಸರಕಾರ ಮಾತ್ರ ಹಳೆಯ ಪಿಂಚಣಿ ಯೋಜನೆಗೆ ಜಾರಿಗೆ ಮಾಡಿರುವುದಿಲ್ಲ.ಈಗಾಗಲೇ ದೇಶದ ವಿವಿಧ ರಾಜ್ಯಗಳು ಕೂಡಾ ಎನ್.ಪಿ.ಎಸ್.ಯೋಜನೆಯನ್ನು ರದ್ದು ಪಡಿಸಿ ಹಳೆಯ ಪಿಂಚಣಿ ಯೋಜನೆ ಜಾರಿಗೆ ಮಾಡುವ ಬಗ್ಗೆ ಒಲವು ಹೊಂದಿವೆ.ಅದರಂತೆ ನಮ್ಮ ರಾಜ್ಯದಲ್ಲಿ ಕೂಡಾ ಎನ್.ಪಿ.ಎಸ್.ಯೋಜನೆಯನ್ನು ರದ್ದು ಮಾಡಿ ಹಳೆಯ ಪಿಂಚಣಿ ಯೋಜನೆ ಜಾರಿಗೆ ಮಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ಹೋರಾಟವನ್ನು ನೆಡಲಾಗುತ್ತದೆ ಎಂದು ಹೇಳಿದರು.
ಮುಧೋಳ ತಾಲೂಕು ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾದ ಮಂಜುನಾಥ ಪರೀಟ್ ಮಾತನಾಡಿ,ಸರಕಾರಿ ನೌಕರರು ಸುಮಾರು ವರ್ಷಗಳ ಕಾಲ ತಮ್ಮ ಸೇವೆಯನ್ನು ಮಾಡಿ ನಂತರ ನಿವೃತ್ತಿ ಆಗುತ್ತಾರೆ.ಆದರೆ ಸಂಧ್ಯಾ ಕಾಲದಲ್ಲಿ ಅವರಿಗೆ ಸಿಗಬೇಕಾದ ಪಿಂಚಣಿ ಸೌಲಭ್ಯ ಇಲ್ಲದಿರುವುದು ಖಂಡನೀಯ ಸಂಗತಿಯಾಗಿದೆ. ಎನ್.ಪಿ.ಎಸ್.ಯೋಜನೆಯಲ್ಲಿ ಇರುವ ಮಾರಕ ಅಂಶಗಳ ಈಗಾಗಲೇ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರ ಮೂಲಕ ನೌಕರರಿಗೆ ತಿಳಿಸಲಾಗಿದೆ.ಅಲ್ಲದೇ ನಮ್ಮ ಸಂಘದ ರಾಜ್ಯ ಗೌರವಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಅವರು ಸತತ ಮೂರು ದಿನಗಳ ಉಪವಾಸದ ನಂತರ ಅಂದಿನ ಮುಖ್ಯಂಮತ್ರಿಗಳಾಗಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರು ಎನ್.ಪಿ.ಎಸ್.ರದ್ದು ಪಡಿಸುವ ನಿಟ್ಟಿನಲ್ಲಿ ಒಂದು ಸಮಿತಿ ರಚನೆ ಮಾಡಲಾಗಿದೆ.ಆದರೆ ಸಮಿತಿ ಮೂರು ವರ್ಷ ಕಳೆದರೂ ಕೂಡಾ ಸಭೆ ಮಾತ್ರ ಸೀಮಿತವಾಗಿದೆ ಕೂಡಲೇ ರಾಜ್ಯ ಸರಕಾರ ಈ ವಿಷಯದ ಬಗ್ಗೆ ಹೆಚ್ಚು ಗಮನ ಹರಿಸಿ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದು ಹೇಳಿದರು.
ವಿಕಲಚೇತನ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ತುಕಾರಾಮ.ಎಸ್.ಲಮಾಣಿ ಮಾತನಾಡಿ,ನೌಕರರ ಬೇಡಿಕೆಗಳು ಸರಿಯಾದ ಸಮಯಕ್ಕೆ ಸಿಗಬೇಕಾದರೆ ಮೊದಲು ನಮ್ಮಲ್ಲಿ ಒಗ್ಗಟ್ಟು ಮುಖ್ಯವಾಗಿದೆ.ನೌಕರರ ಒಗ್ಗಟ್ಟು ಅರಿತು ಸರಕಾರ ನೌಕರರಿಗೆ ಸೌಲಭ್ಯ ಜಾರಿಗೆ ಮಾಡುತ್ತದೆ. ಸಂಘ ಕರೆ ನೀಡುವ ಯಾವುದೇ ಕೆಲಸಕ್ಕೆ ನೌಕರರು ಹೆಚ್ಚಿನ ಸಂಖ್ಯೆಯ ಸೇರಿದಾಗ ಮಾತ್ರ ಹೆಚ್ಚು ಹೆಚ್ಚು ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುತ್ತದೆ. ಎನ್.ಪಿ.ಎಸ್.ಯೋಜನೆ ರದ್ದು ಮಾಡುವ ವಿಷಯದಲ್ಲಿ ಎಲ್ಲಾ ನೌಕರರು ಒಂದು ಕಡೆಯಲ್ಲಿ ಸೇರಿ ಸರಕಾರಕ್ಕೆ ಒತ್ತಡ ಹಾಕುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಈ ಸಮಯದಲ್ಲಿ ವಿಕಲಚೇತನ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಪ್ರಕಾಶ ಬೆಳಗಲಿ,ಖಜಾಂಚಿ ಸುರೇಶ ಕಿಳ್ಯಾರ್.ಸಂಘಟನಾ ಕಾರ್ಯದರ್ಶಿ ಸಂಗಮೇಶ ಸಿರಗುಂಪಿ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರಾದ ಎಸ್.ಬಿ.ಅನಂತಪುರ,ಶಿಕ್ಷಕರಾದ ಹನುಮಂತ ಬೂಧಿಹಾಳ,ಹನುಮಂತ ಮೇತ್ರಿ ಮುಂತಾದವರು ಹಾಜರಿದ್ದರು.