ಭಾನುವಾರ , ಡಿಸೆಂಬರ್ 22 2024
kn
Breaking News

ರಾಷ್ಟ್ರ ಬದಲಾವಣೆ ಮಾಡುತ್ತೆವೆಂದು ಹೇಳಿ ಜನರ ಕಣ್ಣಿಗೆ ಮಣ್ಣೆರೆಚುತ್ತಿರುವ ಕೇಂದ್ರ ಸರಕಾರ : ಎಚ್.ಎಮ್ ರೇವಣ್ಣ

Spread the love


ಮೂಡಲಗಿ: ಕಳೆದ ಎಳು ವರ್ಷಗಳಿಂದ ರಾಷ್ಟ್ರ ಬದಲಾವಣೆ ಮಾಡುತ್ತೆ ಎಂದು ಹೇಳಿ ಜನರ ಕಣ್ಣಿಗೆ ಮಣ್ಣ ಎರಚ್ಚಿ ಸುಳ್ಳ ಹೇಳುತ್ತಿರುವ ಕೇಂದ್ರ ಸರಕಾರದಲ್ಲಿ ಜನ ಸಮಾನ್ಯರ ಪರ ಧ್ವನಿ ಎತ್ತಲು ಸರಳ ಸಜ್ಜನಿಕೆ ವ್ಯಕ್ತಿ ಸತೀಶ ಜಾರಕಿಹೊಳಿ ಅವರನ್ನು ಲೋಕಸಭೆಗೆ ದಾಖಲೆ ಮತಗಳ ಅಂತರದಿಂದ ಆಯ್ಕೆ ಮಾಡಬೇಕೆಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ಹೇಳಿದರು.
ಬುಧವಾರದಂದು ಪಟ್ಟಣದ ಅಂಬೇಡ್ಕರ ಭವನದಲ್ಲಿ ಜರುಗಿದ ಬೆಳಗಾವಿ ಲೋಕಸಭಾ ಉಪಚುನಾವಣೆ ಕಾಂಗ್ರೇಸ್ ಅಭ್ಯರ್ಥಿ ಪರ ಮತಯಾಚನೆಯಲ್ಲಿ ಮಾತನಾಡಿದ ಅವರು ಚಾಮರು ಅಂತಹ ಮೋದಿ ಅವರನ್ನು ಪ್ರಾಧಾನಿಯಾಗಿ ಮಾಡಿದು ಕಾಂಗ್ರೇಸ್ ಪಕ್ಷ ಆದರೆ ಉನ್ನತ ಶಿಕ್ಷಣ ಪಡೆದ ಯುಕರನ್ನು ಪಕೋಡು ಮಾರುಲು ಹಚ್ಚಿದ ಬಿಜೆಪಿ ಪಕ್ಷದ ವಿರುದ್ದ ಹರಿ ಆಯ್ದು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಠಿ ಮಾಡುತ್ತೆವೆ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಣ ಜಮಾ ಮಾಡುತ್ತೆವೆ ಎಂದು ಸುಳ್ಳು ಹೇಳಿ ಇಂದು ಯುವಕರು ಉದ್ಯೋಗ ಕಳೆದುಕೊಂಡು ಬಿದ್ದಿಪಾಲಾಗುತ್ತಿದಾರೆ ಎಂದರು.
ಜನ ಸಮಾನ್ಯರಿಗೆ ಅನೂಕೂಲವಾಗುವ ದೃಷ್ಟಿಯಿಂದ ಇಂದಿರಾಗಾಂಧಿ ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿದರು ಆದರೆ ಮೋದಿ ಸರಕಾರ ಅವುಗಳನ್ನು ಖಾಸಗಿಕರಣ ಹಾಗೂ ವಿವೀಧ ಬ್ಯಾಂಕುಗಳನ್ನು ವೀಲಿನ್ ಮಾಡಿ ಉದ್ಯೋಗಸ್ಥರು ಇಂದು ನಿರುದ್ಯೋಗಸ್ಥರಾಗಿ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.
ಕಾಂಗ್ರೇಸ ಮುಖಂಡ ಅರವಿಂದ ದಳವಾಯಿ ಮಾತನಾಡಿ, ಈ ಲೋಕಸಭಾ ಉಪಚುನಾವೆಣೆಯಲ್ಲಿ ಕಾಂಗ್ರೇಸ್ ಪಕ್ಷದ ಭವಿಷ್ಯ ಇದೆ. ಬಿಜೆಪಿ ಸರ್ಕಾರ ಜನರಿಗೆ ಅನ್ಯಾಯವಾಗುವಂತ ಕಾನೂನುಗಳನ್ನು ಜಾರಿಗೆ ತಂದು ಬೀದಿಗೆ ಅಟ್ಟುವಂತ ಕೆಲಸ ಮಾಡುತ್ತಿದೆ. ಆದರಿಂದ ಜನರು ಆ ಬಿಜೆಪಿ ಸರ್ಕಾರವನ್ನು ಮನೆಗೆ ಕಳಿಸುವಂತ ಸಂದರ್ಭ ಬಂದಿದೆ. ಲೋಕಸಭೆಯಲ್ಲಿ ಜನರ ಕಷ್ಟಗಳ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತಂದು ಒಳ್ಳೆಯ ಕಾರ್ಯ ಮಾಡುವಂತ, ಸದಾ ನಿಮ್ಮ ಸೇವೆಯನ್ನು ಮಾಡುತ್ತಾ ಬಂದಿರುವ ಸತೀಶ ಜಾರಕಿಹೊಳಿಯವರಿಗೆ ತಮ್ಮ ಮತಗಳನ್ನು ನೀಡಿ ಅಧೀಕ ಮತಗಳ ಅಂತರದಿಂದ ಆಯ್ಕೆ ಮಾಡಿ ಎಂದು ಜನರಲ್ಲಿ ಮತಯಾಚನೆ ಮಾಡಿದರು.
ಹರಿಹರ ಶಾಸಕ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೇಸ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ರಂಗನಗೌಡ ಪಾಟೀಲ ಮಾತನಾಡಿದರು.
ಸಭೆಯಲ್ಲಿ ಕುಂದಗೋಳ ಶಾಸಕಿ ಕುಸುಮಾ ಶಿವಳ್ಳಿ, ಡಾ: ವನಿತಾ, ಬಾಗಲಕೋಟಿ ಮಹಿಳಾ ಘಟಕದ ರಕ್ಷಿತಾ ಈಟಿ, ಎಮ್.ಬಿ.ಕಬ್ಬೂರ, ರಮೇಶ ದಳವಾಯಿ,ಪಾಸ್ಟರ ರೇ.ಡ್ಯಾನಿಯಲ್ ಬಾಬು, ರವಿ ತುಪ್ಪದ, ತಮೇಶ ಸಣ್ಣಕ್ಕಿ, ಶರೀಪ್ ಪಟೇಲ, ಗುಂಡಪ್ಪ ಕಮತೆ, ಪ್ರಭು ಬಂಗೆನ್ನವರ, ಸುರೇಶ ಮಗದುಮ, ಶಲಿಮ್ ಇನಾಮಾದಾರ, ಗೀರಿಶ ಕರಡ್ಡಿ, ಶಾಬು ಸಣ್ಣಕ್ಕಿ, ಡಾ: ಎಸ್.ಎಸ್.ಪಾಟೀಲ, ರಾಜು ಪರಸಣ್ಣವರ, ವಿಜಯ ಮೂಡಲಗಿ, ಮಹದೇವ ಕೌಲಾಪೂರೆ, ಸೈಯದ್ ಪೀರಜಾದೆ, ಗುರಪ್ಪ ಇಟ್ಟಣಗಿ, ಮಲ್ಲಿಕ ಕಳ್ಳಿಮನಿ, ರವಿ ಮೂಡಲಗಿ ಹಾಗೂ ಅನೇಕ ಉಪಸ್ಥಿತರಿದ್ದರು.
ಮತಯಾಚನೆ: ಬೆಳಗಾವಿ ಲೋಕಸಭಾ ಉಪಚುನಾವಣೆ ಕಾಂಗ್ರೇಸ್ ಅಭ್ಯರ್ಥಿ ಸತೀಶ ಜಾತಕಿಹೊಳಿ ಅವರು ಬುಧವಾರದಂದು ಮೂಡಲಗಿ ವಿವಿಧಡೆ ಮನೆ ಮನೆ ತೇರಳಿ ಮತಯಾಚಿಸಿ ನಂತರ ಚರ್ಚ ಹಾಗೂ ಬಿಡಿಸಿಸಿ ಬ್ಯಾಂಕಿನ ಸಭಾ ಭವನದಲ್ಲಿ ಸಭೆ ನಡೆಸಿ ಮಾತಯಾಚಿಸಿದರು.


Spread the love

About gcsteam

Check Also

ತಮ್ಮ ಸ್ವಂತ ವೆಚ್ಚದಲ್ಲಿ ಅರಭಾವಿ ಕ್ಷೇತ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಕಿಟ್‌ಗಳನ್ನು ವಿತರಿಸಿದ ಬಾಲಚಂದ್ರ ಜಾರಕಿಹೊಳಿ

Spread the loveಗೋಕಾಕ : ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದ್ದು, ಹಳ್ಳಿಗಳಿಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page