ಮೂಡಲಗಿ: ಮತದಾನ ಪ್ರತಿಯೊಬ್ಬರ ಹಕ್ಕಾಗಿದೆ. ಪ್ರಜಾಪ್ರಭುತ್ವ ಭದ್ರಪಡಿಸಲು ನನ್ನ ಮತ ನನ್ನ ಹಕ್ಕಾಗಿದೆ ಎಂದು ತಾ.ಪಂ ಇಒ ಮತ್ತು ತಾಲೂಕಾ ಸ್ವಿಪ್ ಸಮಿತಿಯ ಪ್ರಕಾಶ ವಡ್ಡರ ಹೇಳಿದರು.
ಅವರು ಸಮೀಪದ ಹಳ್ಳೂರ ಗ್ರಾಮದಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಪ್ರಯುಕ್ತ ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರತಿಯೊಬ್ಬರು ತಮ್ಮ ಮತದಾನದ ಕುರಿತು ಅರಿವು ಹಾಗೂ ಅದರ ಮಹತ್ವ ತಿಳಿದಿರಬೇಕು. ಈಗಿರುವ ವಿದ್ಯುನ್ಮಾನ ಮತಯಂತ್ರದಲ್ಲಿ ಮತ ಚಲಾಯಿಸುವದರಿಂದ ಅದರ ಬಗ್ಗೆ ಸಂಪೂರ್ಣವಾದ ಜ್ಞಾನ ಹೊಂದಿರಬೇಕು. ಅರ್ಹ ಅಭ್ಯರ್ಥಿಗೆ ತಮ್ಮ ಅಮೂಲ್ಯ ಮತ ಚಾಲಾಯಿಸಿ ಉತ್ತಮ ಆಡಳಿತ ತಮ್ಮದಾಗಿಸಿಕೊಳ್ಳಿ ಎಂದು ನುಡಿದರು.
ತಾಪಂ ಸಹಾಯಕ ನಿರ್ಧೇಶಕ ಎಸ್.ಎಸ್ ರೊಡ್ಡನವರ ಮಾತನಾಡಿ, ಜಾಗೃತಿ ಜಾಥಾ, ಅಣಕು ಮತ ಚಲಾವಣೆ, ಭಿತ್ತಿ ಪತ್ರಗಳು ಹಾಗೂ ಇಂದಿನ ದಿನಮಾನಗಳಲ್ಲಿ ಸಮೂಹ ಮಾದ್ಯಮ ಮೊಬೈಲ್‍ಗಳ ಮೂಲಕ ವ್ಯಾಪಕ ಪ್ರಚಾರ ನೀಡುತ್ತಿದೆ. ಮತದಾರರು ಯಾವುದೇ ಆಶೆ ಆಮಿಷಗಳಿಗೆ ಒಳಗಾಗದೆ ತಮ್ಮಯ ಶ್ರೇಷ್ಠವಾದ ಮತವನ್ನು ಚಲಾಯಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಹನಮಂತ ತಾಳಿಕೋಟಿ, ಮಂಜುನಾಥ ಕೋಹಳ್ಳಿ, ಈಶ್ವರ ಗಣಾಚಾರಿ, ಮಹಾಂತೇಶ ಸಂತಿ, ಮಹಾಂತೇಶ ಕುಂದರಗಿ, ಮುತ್ತೇಪ್ಪ ಗಡಾದೆ, ಅರ್ಜುನ ಕುಲಗೋಡ, ಕುತಬು ಮುಜಾವರ, ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾ.ಪಂ ಸಿಬ್ಬಂದಿಗಳು ಹಾಜರಿದ್ದರು.
Check Also
ತಮ್ಮ ಸ್ವಂತ ವೆಚ್ಚದಲ್ಲಿ ಅರಭಾವಿ ಕ್ಷೇತ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಕಿಟ್‌ಗಳನ್ನು ವಿತರಿಸಿದ ಬಾಲಚಂದ್ರ ಜಾರಕಿಹೊಳಿ
Spread the loveಗೋಕಾಕ : ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದ್ದು, ಹಳ್ಳಿಗಳಿಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು …