ಮೂಡಲಗಿ: ಸರಕಾರಿ ಕಛೇರಿಗಳಾದ ತಹಶೀಲ್ದಾರ, ತಾಲೂಕ ಪಂಚಾಯತ, ಪೋಲಿಸ್, ಸಾರಿಗೆ, ನೊಂದಣಿ, ಎಪಿಎಮ್‍ಸಿ ಮುಂತಾದ ಇಲಾಖೆಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ಸರಾಗವಾಗಿ ಸಾಗಲು ಅಲ್ಲಿಯ ನೌಕರರ ಇಚ್ಛಾ ಶಕ್ತಿ ಅವಶ್ಯಕವಾಗಿದೆ. ಭ್ರಷ್ಟಾಚಾರ ನಡೆಸುವ ಸಲುವಾಗಿ ಕೇಲವು ಕಛೇರಿಗಳಲ್ಲಿ ಮದ್ಯವರ್ತಿಗಳ ಸಹಾಯದಿಂದ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವದು ಕಂಡು ಬರುತ್ತಿದೆ ಎಂದು ಜೈಹೋ ಜನತಾ ವೇದಿಕೆ ತಾಲೂಕಾಧ್ಯಕ್ಷ ಸುಭಾಸ ರಡ್ಡರಟ್ಟಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲರ ಮಾಶಾಸನ, ಜಾತಿ ಆದಾಯ ಪ್ರಮಾಣ ಪತ್ರ, ಉದ್ಯೋಗ ಖಾತ್ರಿ, ವಸತಿ ನಿವೇಶನ, ವಾಹನ ನೊಂದಣಿ, ನವಿಕರಣ, ಚಾಲನಾ ಪರವಾನಿಗೆ, ನಿವೇಶನ, ಜಮೀನು ಖರೀದಿ, ವರ್ಗಾವಣೆ, ರೈತರಿಗೆ ಬೆಂಬಲ ಬೆಲೆಯಂತಹ ಕಾರ್ಯಗಳಲ್ಲಿ ಮದ್ಯವರ್ತಿಗಳ ಹಾವಳಿಯಿಂದಾಗಿ ನೀಜವಾದ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದೆ. ಕೊಡಲೇ ಸಂಬಂಧಿಸಿದ ಇಲಾಖಾ ಮುಖ್ಯಸ್ಥರು ತಮ್ಮ ಸಿಬ್ಬಂದಿಯವರ ಮೂಲಕ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕ್ರಮ ಜರುಗಿಸಬೇಕು. ಯಾವುದೇ ಕ್ರಮ ಕೈಗೋಳ್ಳದಿದ್ದರೆ ಸಂಘಟನೆಯ ಮೂಲಕ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವದಾಗಿ ತಿಳಿಸಿದ್ದಾರೆ.
