ಮೂಡಲಗಿ: ಭಾರತೀಯ ಕೃಷಿಕ ಸಮಾಜದ ಮೂಡಲಗಿ ತಾಲೂಕಾಧ್ಯಕ್ಷರಾಗಿ ಪಂಚಮಸಾಲಿ ಮುಂಖಂಡ ಬಸವರಾಜ ಈರನಗೌಡ ಪಾಟೀಲ ಅವರನ್ನು ನೇಮಕ ಮಾಡಿ ರಾಷ್ಟ್ರೀಯ ಅಧ್ಯಕ್ಷ ಡಾ. ಕಿಶನಕುಮಾರ ಚೌದರಿ ಆದೇಶ ನೀಡಿದ್ದಾರೆ. ತಾಲೂಕಿನ ರೈತ ಚಿಂತಕರಾಗಿ ರೈತಾಪಿ ವರ್ಗದವರಿಗೆ, ಕೃಷಿಕ ಮಹಿಳೆಯರಿಗೆ, ಕೃಷಿ ಕೂಲಿ ಕಾರ್ಮಿಕರಿಗೆ ದೊರಕುವ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಗ್ರಾಮೀಣ ಘಟಕಗಳಿಗೆ ಭೇಟಿ ನೀಡಿ ಅಗತ್ಯ ಸಲಹೆ ಸೂಚನೆ ಮಾರ್ಗದರ್ಶನ ನೀಡುವ ಮೂಲಕ ತಾಲೂಕಿನ ರೈತರಿಗೆ ಅನುಕೂಲವಾಗುವ ಕಾರ್ಯಗಳನ್ನು ಮಾಡಬೇಕು ಎಂದು ಆದೇಶ ನೀಡಿದ್ದಾರೆ.
