ಮೂಡಲಗಿ: ಭೂಗೋಳಿಕವಾಗಿ ಮೂಡಲಗಿ ತಾಲೂಕು ರಚನೆಯಾದಾಗ ರಾಯಬಾಗ ಹಾಗೂ ಕುಡಚಿ ಮತಕ್ಷೇತ್ರದ ಸುಮಾರು 10-15 ಹಳ್ಳಿ ಜನರು ಸಂಭ್ರಮಿಸಿದರು. ಇದಕ್ಕೆ ಕಾರಣ ಆ ಊರುಗಳು ಮೂಡಲಗಿಯಿಂದ 4-6-10 ಕಿ.ಮೀ. ಒಳಗಿನ ಊರುಗಳು ರಾಜಕಾರಣಿಗಳ ಇಚ್ಛಾನುಸಾರವಾಗಿ ಈ ಊರುಗಳನ್ನು ಕೈಬಿಟ್ಟಾಗ ಜನ ಕಂಗಾಲಾದರು ಎಂದು ಕಾಂಗ್ರೆಸ್ ಮುಖಂಡ ಲಕ್ಕಣ್ಣ ಸವಸುದ್ದಿ ಹೇಳಿದರು.
ಅವರು ಸ್ಥಳಿಯ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗಾರರೋಂದಿಗೆ ಜೊತೆ ಮಾತನಾಡುತ್ತಾ ಈಗಲೂ ಕಾಲ ಮಿಂಚಿಲ್ಲ ಜನಪ್ರತಿನಿಧಿಗಳು ರಾಜಕೀಯ ಆಟ ಬಿಟ್ಟು ಜನರ ಭಾವನೆ ಹಾಗೂ ಕಷ್ಟಗಳನ್ನು ಅರಿತು ತಾಲೂಕಾ ರಚನೆಯಲ್ಲಿ ಆದ ಲೋಪವನ್ನು ಸರಿಪಡಿಸಿಕೊಂಡು ಹಂದಿಗುಂದ, ಕಪ್ಪಲಗುದ್ದಿ, ಇಟ್ನಾಳ, ಸವಸುದ್ದಿ, ಖನದಾಳ, ಪಾಲಬಾವಿ, ಮುಗಳಖೋಡ, ಕಂಕಣವಾಡಿ, ಕಟಕಬಾವಿ, ಇನ್ನೂ ಅನೇಕ ಊರುಗಳನ್ನು ಮೂಡಲಗಿ ತಾಲೂಕಿಗೆ ಸೇರಿಸಿಕೊಳ್ಳಬೇಕು ಎನ್ನುವ ಜನರ ಬೇಡಿಕೆ ಹಾಗೂ ನಮ್ಮ ಆಗ್ರಹವಾಗಿದೆ. ಇಷ್ಟರಲ್ಲಿ ಚಿಂತಕರು ಹಾಗೂ ರಾಜಕೀಯ ಮುಖಂಡರ ಸಭೆ ಸೇರಿ ಸರ್ಕಾರಕ್ಕೆ ಮನವಿ ಕಾನೂನು ಹೋರಾಟ ಅಥವಾ ಪ್ರತಿಭಟನೆ ಎನ್ನುವದನ್ನು ನಿರ್ಧರಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಂದಿಗುಂದದ ಶ್ರೀಮಂತ ಶಿವಯೋಗಿ ಮಹಾರಾಜರು ಶಿವಾನಂದ ಮಡಿವಾಳ, ಸುಭಾಸ ಲೋಕನ್ನವರ ಮಡೇಪ್ಪಾ ಬಳಲ್ದಾರ ಅನೇಕರು ಉಪಸ್ಥಿತರಿದ್ದರು.