ಮೂಡಲಗಿ : ಮುಂದಿನ ವರ್ಷ ನಡೆಯಲಿರುವ ಇಲ್ಲಿಯ ಪ್ರಸಿದ್ಧ ಬಲಭೀಮ ದೇವಸ್ಥಾನದ ಕಾರ್ತಿಕೋತ್ಸವ ನಿಮಿತ್ಯ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಳೆದ ಶನಿವಾರದಂದು ಚಾಲನೆ ನೀಡಿದರು.
ಮೂಡಲಗಿ ತಾಲೂಕಿನ ಕುಲಗೋಡದ ಸುಪ್ರಸಿದ್ಧ ಬಲಭೀಮ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದ ಅವರು, ಕಾರ್ತಿಕೋತ್ಸವದ ಅಂಗವಾಗಿ 2022 ರಲ್ಲಿ ನಡೆಯುವ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕುಲಗೋಡ ಭಾಗದ ಬಲಭೀಮ ದೇವಸ್ಥಾನವು ಅನೇಕ ಇತಿಹಾಸ ಹಾಗೂ ಪವಾಡಗಳನ್ನು ಹೊಂದಿದೆ. ಬಲಭೀಮನ ಪವಾಡ ಅಪಾರವಾಗಿದೆ. ಪ್ರತಿವರ್ಷ ಜರುಗುವ ಕಾರ್ತಿಕೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ತಮ್ಮ ಹರಕೆಗಳನ್ನು ತೀರಿಸುತ್ತಾರೆ. ಭಕ್ತಾಧಿಗಳು ಕಾರ್ತಿಕ ನಿಮಿತ್ಯ ಹಮ್ಮಿಕೊಂಡಿರುವ ಲಕ್ಷ ದೀಪೋತ್ಸವ ಕಾರ್ಯಕ್ರಮದ ಯಶಸ್ಸಿಗಾಗಿ ದೇಣಿಗೆ ನೀಡಿ ಬಲಭೀಮನ ಕೃಪೆಗೆ ಪಾತ್ರರಾಗುವಂತೆ ಇದೇ ಸಂದರ್ಭದಲ್ಲಿ ಅವರು ಮನವಿ ಮಾಡಿಕೊಂಡರು.
ದೇವಸ್ಥಾನದ ಭೀಮಶಿ ಪೂಜೇರಿ ಅವರು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಸತ್ಕರಿಸಿದರು.
ಕ್ರಿಕೇಟ್ ಟೂರ್ನಾಮೆಂಟ್ : ಶ್ರೀರಾಮ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಪಿಎಲ್‌ಡಿ ಬ್ಯಾಂಕ್ ಮಾಜಿ ನಿರ್ದೇಶಕ ದಿ. ಸುಧೀರ ಸುರೇಶ ವಂಟಗೋಡಿ ಅವರ ಸ್ಮರಣಾರ್ಥ ರಾಷ್ಟçಮಟ್ಟದ ಕ್ರಿಕೇಟ್ ಟೂರ್ನಾಮೆಂಟ್‌ಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಚಾಲನೆ ನೀಡಿದರು.
ಗೋಕಾಕ ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ, ಯಾದವಾಡ ಜಿಪಂ ಸದಸ್ಯ ಗೋವಿಂದ ಕೊಪ್ಪದ, ಗ್ರಾಪಂ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ, ತಾಪಂ ಮಾಜಿ ಸದಸ್ಯ ಸುಭಾಸ ವಂಟಗೋಡಿ, ಪಿಕೆಪಿಎಸ್ ಅಧ್ಯಕ್ಷ ವೆಂಕಣ್ಣಾ ಚನ್ನಾಳ, ಪ್ರಭಾಶುಗರ ಉಪಾಧ್ಯಕ್ಷ ರಾಮಣ್ಣಾ ಮಹಾರಡ್ಡಿ, ಎಪಿಎಂಸಿ ಮಾಜಿ ಅಧ್ಯಕ್ಷ ಅಜ್ಜಪ್ಪ ಗಿರಡ್ಡಿ, ನ್ಯಾಯವಾದಿ ಪ್ರಶಾಂತ ವಂಟಗೋಡಿ, ಸುನೀಲ ವಂಟಗೋಡಿ, ಜಿಪಂ ಮಾಜಿ ಸದಸ್ಯ ಪರಮೇಶ್ವರ ಹೊಸಮನಿ, ಅರಭಾವಿ ಮಂಡಲ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ತಮ್ಮಣ್ಣಾ ದೇವರ, ಶ್ರೀಶೈಲ ಭಜಂತ್ರಿ, ಸೋಮಲಿಂಗ ಮಿಕಲಿ, ರಮೇಶ ಜಗದಾಳ, ಬಸು ಮಲಕನ್ನವರ, ಮೂಡಲಗಿ ವಲಯದ ಶಿಕ್ಷಕರ ಸಂಘದ ಅಧ್ಯಕ್ಷ ಲಕ್ಷ್ಮಣ ಬಡಕಲ್, ಶಂಕರ ಹಾದಿಮನಿ, ಪ್ರಕಾಶ ಹಿರೇಮೇತ್ರಿ, ರಾಮಣ್ಣಾ ಕುರುಬಚನ್ನಾಳ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.