ಮೂಡಲಗಿ: ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ತಾಲೂಕ ಮಟ್ಟದ ಬೃಹತ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ ಸಮಾರೋಪ ಸಮಾರಂಭ ಅ-೦೭ ರಂದು ಮಧ್ಯಾಹ್ನ ೦೩.೦೦ ಗಂಟೆಗೆ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ನಡೆಯಲಿದ್ದು, ಸಮಾವೇಶ ಯಶಸ್ವಿಯಾಗಲು ಇಂದು ನಡೆದ ಪಂಚಮಸಾಲಿ ಸಮಾಜದ ಪ್ರಮುಖರ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.
ಪಂಚಮಸಾಲಿ ಲಿಂಗಾಯತರನ್ನು ೨ಎ ವರ್ಗದಲ್ಲಿ ಸೇರ್ಪಡೆ ಮಾಡಲು ಹೊರಾಟ ನಿರಂತರವಾಗಿದ್ದು, ಲಿಂಗಾಯತ ಪಂಚಮಸಾಲಿ ಸಮಾಜದ ವಿದ್ಯಾರ್ಥಿಗಲಿಗೆ ೨ಎ ಮೀಸಲಾತಿಯಿಂದ ಉಜ್ವಲ ಭವಿಷ್ಯವಿದೆ. ಕೂಡಲ ಸಂಗಮ ಧರ್ಮಕ್ಷೇತ್ರದ ಲಿಂಗಾಯತ ಪಂಚಮಸಾಲಿ ಮಹಾಪೀಠದ ಪ್ರಥಮ ಜಗದ್ಗುರು ಬಸವಜಯ ಮೃಂತ್ಯುಜಯ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯಲಿರುವ ಸಮಾವೇಶದ ಯಶಸ್ವಿಗೆ ಶ್ರಮಿಸುವಂತೆ ಸಭೆಯಲ್ಲಿ ನಿರ್ಧರಿಸಲಾಯಿತು.
ಈ ಸಂದರ್ಭದಲ್ಲಿ ಬಸವ ಕೇಂದ್ರದ ಅಧ್ಯಕ್ಷ ಶಂಕರ ಬೆಳಕೂಡ, ಸೇವಾ ಸಂಸ್ಥೆಯ ಅಧ್ಯಕ್ಷ ಬಸವರಾಜ ಕಡಾಡಿ, ಪ್ರಮುಖರಾದ ರಾವಸಾಬ ಬೆಳಕೂಡ, ಅಜೀತ ಬೆಳಕೂಡ, ಗಿರಮಲ್ಲಪ್ಪ ಸೌಂಸುದ್ದಿ, ಬಸವರಾಜ ಖಾನಾಪೂರ, ಭೀಮಶಿ ಗೋರೋಶಿ, ಶಿವಾನಂದ ಹೆಬ್ಬಾಳ, ಧರೇಶ ಖಾನಗೌಡ್ರ, ಹಣಮಂತ ಸಂಗಟಿ, ಮಲ್ಲು ಕಡಾಡಿ, ಶಂಕರ ಭಾಗೋಜಿ, ಭೀಮರಾಯ ಕಡಾಡಿ, ಪ್ರಭು ಕಡಾಡಿ, ಮಹಾಂತೇಶ ಪಾಟೀಲ, ಪ್ರಕಾಶ ಕಂಕಣವಾಡಿ, ಸಿದ್ದಪ್ಪ ಮುಗಳಿ, ಮಲ್ಲಪ್ಪ ಕುರಬೇಟ, ಬಸವಣ್ಣೆಪ್ಪ ಚೌಗಲಾ, ಶಿವಪ್ಪ ಬಿ.ಪಾಟೀಲ, ಮಹಾದೇವ ಖಾನಾಪೂರ, ಬಾಳು ಕಂಕಣವಾಡಿ, ವೀರನಗೌಡ ಪಾಟೀಲ, ಬಾಳಪ್ಪ ಮಟಗಾರ, ಪರಪ್ಪ ಕಡಾಡಿ, ಈರಣ್ಣ ಮುನ್ನೋಳಿಮಠ, ಮಹಾಂತೇಶ ಮಳವಾಡ, ಆನಂದ ಹೆಬ್ಬಾಳ, ಭೀಮಶಿ ಹೆಬ್ಬಾಳ, ಈರಪ್ಪ ಪಾಟೀಲ, ಬಸವರಾಜ ಜಗದಾಳೆ ಸೇರಿದಂತೆ ಅನೇಕ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.
ಹಣಮಂತ ಕೌಜಲಗಿ ಸ್ವಾಗತಿಸಿದರು, ಗೂಳಪ್ಪ ವಿಜಯನಗರ ಕಾರ್ಯಕ್ರಮ ನಿರೂಪಿಸಿದರು. ರಾಘವೇಂದ್ರ ಚೌಗಲಾ ವಂದಿಸಿದರು.
.
