ಶುಕ್ರವಾರ , ಸೆಪ್ಟೆಂಬರ್ 30 2022
kn
Breaking News

ಸನ್ನಡತೆಗಳನ್ನು ಅನುಸರಿಸಿದರೆ ನೆಮ್ಮದಿಯ ಜೀವನ ಪ್ರಾಪ್ತವಾಗುವುದು: ಶಿವಾನಂದ ಮರಾಠೆ

Spread the love

ಮೂಡಲಗಿ: ಸ್ವಾಮೀಜಿಗಳು ತಮ್ಮ ಪ್ರವಚನದ ಮೂಲಕ ಜನತೆಗೆ ಮುಕ್ತಿ ಮಾರ್ಗ ತೋರುವ ಸನ್ಮಾರ್ಗ, ಸನ್ನಡತೆಗಳನ್ನು ಅನುಸರಿಸಿದರೆ ನೆಮ್ಮದಿಯ ಜೀವನ ಪ್ರಾಪ್ತವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ತಾಲೂಕಾ ಘಟಕದ ಉಪಾಧ್ಯಕ್ಷ ಶಿವಾನಂದ ಮರಾಠೆ ಹೇಳಿದರು.
ಸಮೀಪದ ಗುರ್ಲಾಪೂರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಟ್ರಸ್ಟ್ ಸಂಘಟಕರು ಹಮ್ಮಿಕೊಂಡ ಇಟ್ನಾಳದ ಶ್ರೀ ಶಿದ್ದೇಶ್ವರ ಸ್ವಾಮಿಗಳು ನೀಡುತ್ತಿರುವ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ವೇಳೆಯಲ್ಲಿ ನೂತನವಾಗಿ ಆಯ್ಕೆಯಾದ ಪತ್ರಕರ್ತರ ಸಂಘದ ಅಧ್ಯಕ್ಷ ಕೃಷ್ಣ ಗಿರೆನ್ನವರ, ಪ್ರಧಾನ ಕಾರ್ಯದರ್ಶಿ ಮಲ್ಲು ಬೋಳನವರ, ಕಾರ್ಯದರ್ಶಿಗಳಾದ ಅಲ್ತಾಫ್ ಹವಾಲ್ದಾರ, ವೆಂಕಪ್ಪ ಬಾಲರಡ್ಡಿ, ಖಜಾಂಚಿ ಮಹಾದೇವ ನಡುವಿನಕೇರಿ ಶ್ರೀಗಳನ್ನು ಸತ್ಕರಿಸಿ ಗೌರವಿಸಿದರು.
ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಟ್ರಸ್ಟ ಸಂಘಟಕರು, ಅನೇಕ ಭಕ್ತಾದಿಗಳು ಇದ್ದರು.


Spread the love

About Kenchappa Meesi

Check Also

ದುರ್ಗಾದೇವಿ ನವರಾತ್ರಿ ಉತ್ಸವ ಸಮಿತಿವತಿಯಿಂದ ನಾಳೆ ಪೂರ್ವಭಾವಿ ಸಭೆ

Spread the loveಮೂಡಲಗಿ: ದುರ್ಗಾದೇವಿ ನವರಾತ್ರಿ ಉತ್ಸವ ಸಮಿತಿವತಿಯಿಂದ ಪ್ರತಿ ವರ್ಷ ಜರುಗುವ ನವರಾತ್ರಿ ಉತ್ಸವ ಕುರಿತು ಪೂರ್ವಭಾವಿ ಸಭೆಯು …

41 comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

error: Content is protected !!