ಶನಿವಾರ , ಡಿಸೆಂಬರ್ 21 2024
kn
Breaking News

ಮಹಾನ್ ನಾಯಕರ ಆದರ್ಶವನ್ನು ಪ್ರತಿಯೊಬ್ಬರೂ ಪಾಲಿಸಬೇಕು: ಎಂ.ಡಿ.ಗುಲಾಮ್ ಹುಸೇನ

Spread the love

ಕೊಪ್ಪಳ: ಸ್ವಾತಂತ್ರ್ಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಹೋರಾಟ ಮಾಡಿದ ಮಹಾನ್ ನಾಯಕರ ಆದರ್ಶಗಳನ್ನು ಪ್ರತಿಯೊಬ್ಬರು ಅನುಸರಿಸಬೇಕು ಎಂದು ಸಿ.ಪಿ.ಎಸ್.ಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಡಿ.ಗುಲಾಮ್ ಹುಸೇನ ಹೇಳಿದರು.
ಅವರು ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಹಮ್ಮಿಕೊಂಡಿದ್ದ ೭೫ ನೇ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವದ ಧ್ವಜಾರೋಹಣವನ್ನು ನೇರವೆರಿಸಿ ಮಾತನಾಡಿ,ನಮ್ಮ ದೇಶವು ಸುಮಾರು ೨೦೦ ವರ್ಷಗಳ ಕಾಲ ಆಂಗ್ಲರ ವಶದಲ್ಲಿ ಇತ್ತು.ಅವರ ಗುಲಾಮರಾಗಿ ನಾವು ಬದುಕುತ್ತಿದ್ದೆವೆ.ಇಂತಹ ಸಮಯದಲ್ಲಿ ಸ್ವಾತಂತ್ರ್ಯ ಪಡೆಯುವ ನಿಟ್ಟಿನಲ್ಲಿ ಅನೇಕರು ತಮ್ಮ ಪ್ರಾಣವನ್ನು ಲೆಕ್ಕಿಸದೇ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ.ಅಂಥವರ ತ್ಯಾಗ ಹಾಗೂ ಬಲಿದಾನದ ಫಲವಾಗಿ ಇಂದು ನಮಗೆ ಸ್ವಾತಂತ್ರ್ಯ ದೊರೆತ್ತಿದೆ.ನಮ್ಮ ಸ್ವಾತಂತ್ರ್ಯ ದೊರಕಿಸಿ ಕೊಟ್ಟ ಮಹಾನ್ ನಾಯಕರ ತತ್ವ ಹಾಗೂ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಇಂತಹ ಕಾರ್ಯಕ್ರಮಗಳಿಗೆ ಮಹತ್ವ ಬರಲು ಸಾಧ್ಯವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ,ಅನೇಕ ಮಹಾನ್ ನಾಯಕರ ಫಲವಾಗಿ ನಮ್ಮ ಸಿಕ್ಕಿರುವ ಸ್ವಾತಂತ್ರ್ಯವನ್ನು ನಾವು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು.ಯಾವುದೇ ಕಾರಣಕ್ಕೂ ಅದನ್ನು ಸ್ವೇಚ್ಛಾಚಾರ ಆಗದಂತೆ ನೋಡಿಕೊಳ್ಳಬೇಕಿದೆ.ನಮ್ಮ ಯಾವುದೇ ರೀತಿಯ ಅನೇಕ ಹಕ್ಕುಗಳು ಇವೆ.ಅದೇ ರೀತಿಯಲ್ಲಿ ನಮ್ಮ ನಮ್ಮದೆಯಾದ ಕರ್ತವ್ಯಗಳು ಕೂಡಾ ಇವೆ.ಇವು ಎರಡನ್ನು ಸಮಾನವಾದ ರೀತಿಯಲ್ಲಿ ಬಳಸಿಕೊಳ್ಳಬೇಕು.ದೇಶಕ್ಕೆ ಆಪತ್ತು ಬಂದ ಸಮಯದಲ್ಲಿ ದೇಶಕ್ಕಾಗಿ ಪ್ರಾಣವನ್ನು ಕೊಡಲು ಸಿದ್ದರಿರಬೇಕು.ಪ್ರತಿಯೊಬ್ಬರು ಕೂಡಾ ನಮ್ಮ ದೇಶ,ರಾಷ್ಟ್ರಗೀತೆ, ರಾಷ್ಟ್ರ ಧ್ವಜಗಳ ಬಗ್ಗೆ ಗೌರವ ನೀಡುವ ಕೆಲಸ ಮಾಡಬೇಕಿದೆ.ವಿವಿಧತೆಯಲ್ಲಿ‌ ಏಕತೆ ಇರುವುದು ಭಾರತ ದೇಶದಲ್ಲಿ ಮಾತ್ರ ಅದರ ಜೊತೆಗೆ ವೈವಿಧ್ಯಮಯಿಂದ‌ ಪರಿಸರ ,ಸಾಂಸ್ಕೃತಿಕ ನೆಲ ಬಿಡಿನ‌ ಪ್ರದೇಶವನ್ನು ಹೊಂದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ‌ ವಿಕಲಚೇತನ ನೌಕರರ ಸಂಘದ ರಾಜ್ಯ ತಾಂತ್ರಿಕ ಗೌರವ ಸಲಹೆಗಾರರಾದ ಕಾಶಿನಾಥ ಸಿರಿಗೇರಿ,ಶಿಕ್ಷಕಿ ಜಯಶ್ರೀ ದೇಸಾಯಿ, ಗಂಗಮ್ಮ ತೋಟದ ಮಾತನಾಡಿದರು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷರಾದ ವಿರೂಪಾಕ್ಷ ಬಾಗೋಡಿ,ಶಿಕ್ಷಕರಾದ ಮೊಮ್ಮದ ಆಬೀದ ಹುಸೇನ ಅತ್ತಾರ,ನಾಗಪ್ಪ ನರಿ, ಶ್ರೀನಿವಾಸರಾವ ಕುಲಕರ್ಣಿ. ಶಂಕ್ರಮ್ಮ ಶೆಟ್ಟರ್, ಗಂಗಮ್ಮ ತೋಟದ,ಸುನಂದಾಬಾಯಿ,ಶೀಲಾಬಂಡಿ,ಜಯಶ್ರೀ ದೇಸಾಯಿ, ಭಾರತಿ ಆಡೂರು, ಗೌಸಿಯಾಬೇಗಂ,ನಾಗರತ್ನ ಆಡೂರು, ರತ್ನಾ ಹೂಲಗೇರಿ,ಟಾಟಾ ಕಲಿಕಾ ಟ್ರಸ್ಟ್ ನ ಪ್ರೇರಕಿ ಅನಿತಾ ಉಪ್ಪಾರ ಮುಂತಾದವರು ಹಾಜರಿದ್ದರು.
ಇದೇ ಸಮಯದಲ್ಲಿ ಮಕ್ಕಳಿಂದ ವಿವಿಧ ಬಗೆಯ ಛದ್ಮವೇಶ ನಡೆಸಲಾಯಿತು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page