ಮೂಡಲಗಿ: ವಿದ್ಯಾರ್ಥಿಗಳು ಉತ್ತಮ ಆರೋಗ್ಯ ಹೊಂದಿದಲ್ಲಿ ಮಾತ್ರ ಉತ್ತಮ ಶಿಕ್ಷಣ ಪಡೆಯಲು ಸಾದ್ಯ. ಈ ನಿಟ್ಟಿನಲ್ಲಿ ತುಕ್ಕಾನಟ್ಟಿಯ ಸರ್ಕಾರಿ ಶಾಲೆಯ ಕಾರ್ಯವೈಖರಿ ತುಂಬಾ ಶ್ಲಾಘನೀಯವಾಗಿದೆ ಎಂದು ಬೆಳಗಾವಿ ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ. ಹೇಳಿದರು. ಅವರು ತುಕ್ಕಾನಟ್ಟಿ ಶಾಲೆಯಲ್ಲಿ ಪ್ರಧಾನಮಂತ್ರಿ ಪೋಷನ್ ಶಕ್ತಿ ನಿರ್ಮಾಣ ಯೋಜನೆಯಡಿ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು ವಿತರಿಸಿ ಹಾಗೂ ತರಗತಿಗಳನ್ನು ವೀಕ್ಷ್ಷಿಸಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳಿಗೆ ಪೂರಕ ಪೌಷ್ಟಿಕಾಂಶವುಳ್ಳ ಆಹಾರವನ್ನು ಮದ್ಯಾಹ್ನದ ಬಿಸಿಯೂಟದೊಂದಿಗೆ ಒದಗಿಸುವ ಸರ್ಕಾರದ ಕಾರ್ಯಕ್ರಮ ಉತ್ತಮವಾಗಿದೆ. ರಾಷ್ಟಿçÃಯ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಸಮೀಕ್ಷೆಯಲ್ಲಿ ಶಾಲಾ ಮಕ್ಕಳಲ್ಲಿ ಅಪೌಷ್ಟ್ಟಿಕತೆ, ರಕ್ತಹೀನತೆ ಹಾಗೂ ಬಹುಪೋಷಕಾಂಶಗಳ ನೂನ್ಯತೆ ಅಧಿಕವಾಗಿರುವದರಿಂದ ಮಕ್ಕಳಿಗೆ ಬಾಳೆಹಣ್ಣು ಹಾಗೂ ಮೊಟ್ಟೆ ಶೆಂಗಾ ಚಿಕ್ಕಿ ಇಂತಹ ಪೌಷ್ಟಿಕಾಂಶಗಳನ್ನು ಕೊಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಪೋಷಕಾಂಶವನ್ನು ಕೊಡುವಲ್ಲಿ ತುಕ್ಕಾನಟ್ಟಿಯ ಸರ್ಕಾರಿ ಶಾಲೆಯ ಅಕ್ಷರದಾಸೋಹ ಎಲ್ಲಾ ಶಾಲೆಗಳಿಗೆ ಮಾದರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಾಧ್ಯಾಪಕ ಎ.ವ್ಹಿ.ಗಿರೆಣ್ಣವರ ಮಾತನಾಡಿ ಸರ್ಕಾರದ ಶೈಕ್ಷಣಿಕ ಯೋಜನೆಗಳು ವಿದ್ಯಾರ್ಥಿಗಳ ದಾಖಲಾತಿ ಹಾಜರಾತಿ ಹೆಚ್ಚಿಸುವಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ಕಾ.ನಿ.ಅಧಿಕಾರಿ ಎಫ್.ಜಿ.ಚಿನ್ನನವರ ಉದ್ಯೋಗ ಕಾತರಿ ಯೋಜನೆಯ ಸ.ನಿ. ಸಂಗಮೇಶ ರೊಡ್ಡನ್ನವರ, ಸ.ಕಾ.ಅಭಿಯಂತರರು ಉದಯಕುಮಾರ ಕಾಂಬಳೆ ಗ್ರಾ.ಪಂ ಅದ್ಯಕ್ಷರಾದ ಪುಂಡಲೀಕ ಬಾಗೇವಾಡಿ, ಮಾಜಿ ಅದ್ಯಕ್ಷರಾದ ಕುಮಾರ ಮರ್ದಿ, ಅಭಿವೃದ್ಧಿ ಅಧಿಕಾರಿ ವೀರಭದ್ರ ಗುಂಡಿ, ಲೆಕ್ಕಾಧಿಕಾರಿ ವಿಠ್ಠಲ ಮಾವರಕರ, ಕಲ್ಲೋಳಿ ಸಿ.ಆರ್.ಪಿ ಗಣಪತಿ ಉಪ್ಪಾರ, ಗ್ರಾ.ಪಂ ಸದಸ್ಯರಾದ ಸತ್ತೆಪ್ಪ ಮಲ್ಲಾಪೂರ, ತಿಪ್ಪಣ್ಣ ಹುಲಕುಂದ, ಮಂಜುನಾಥ ಗದಾಡಿ, ರಾಮಪ್ಪಾ ಬಾಗೇವಾಡಿ, ಕಾರ್ಯಕ್ರಮದಲ್ಲಿ ಪ್ರಧಾನ ಗುರುಗಳಾದ ಎ.ವ್ಹಿ ಗಿರೆಣ್ಣವರ, ಹಾಗೂ ಗುರುಬಳಗ ಇತರ ಪಂಚಾಯತ ಸದಸ್ಯರು ಪಾಲಕರು ಉಸ್ಥಿತರದ್ದರು.
