ಮೂಡಲಗಿ: ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಪರಿಸರವನ್ನು ಕಾಳಜಿಯಿಂದ ನೋಡಬೇಕು ಅಂದಾಗ ಮಾತ್ರ ಸಕಲ ಜೀವ ರಾಶಿಗಳು ಬಾಳಿ ಬದುಕಲು ಸಾಧ್ಯ ಎಂದು ಮೂಡಲಗಿ ಜೆ.ಎಮ್.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಜ್ಯೋತಿ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಪಟ್ಟಣದ ಸರಕಾರಿ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಹಾಗೂ ಮೌಲಾನಾ ಅಬ್ದುಲ ಕಲಾಂ ಶಾಲಾವರಣದಲ್ಲಿ ಗೋಕಾಕನ ಸ್ಪಂದನ ಗೆಳೆಯರ ಬಳಗವು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಕಾರದೊಂದಿಗೆ ಸಸಿ ನೇಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಾಮಾಜಿಕ ಕಾರ್ಯಕರ್ತರ ಸಹಕಾರ ವಿವಿಧ ಇಲಾಖೆಗಳ ಜೊತೆಯಾಗಿ ಸಾರ್ವಜನಿಕರಿಗೆ ಅರಿವು ಮೂಡಿಸಿ ಪರಿಸರ ಸ್ನೇಹಿಯುಕ್ತ ವಾತಾವರಣ ನಿರ್ಮಾಣ ಮಾಡಬೇಕು. ಜೀವ ಸಂಕುಲಕ್ಕೆ ಅತ್ಯಾವಶ್ಯಕವಾಗಿ ಬೇಕಾಗಿರುವ ಗಾಳಿ, ನೀರು, ಬೆಳಕು, ಆಹಾರ, ನಮ್ಮ ದೈನಂದಿನ ಕಾರ್ಯಚಟುವಟಿಕೆಗಳು ಪರಿಸರದ ಮೇಲೆ ಅವಲಂಬನೆಯಾಗಿವೆ. ಪರಿಸರವನ್ನು ನಾವು ರಕ್ಷಿಸಿದರೆ ಪರಿಸರ ನಮ್ಮನ್ನು ಸಂರಕ್ಷಿಸಿ ನಮ್ಮ ಅಗತ್ಯತೆಗಳನ್ನು ಪೂರೆಸುತ್ತದೆ. ನೂತನ ಮೂಡಲಗಿ ತಾಲೂಕಿನಲ್ಲಿ ಎಲ್ಲರ ಸಹಕಾರದೊಂದಿಗೆ ಪರಿಸರ ಕಾಳಜಿಯನ್ನು ತೋರಿಸಬೇಕು ಎಂದು ಹೇಳಿದರು.
ಬಿ.ಇ.ಒ ಅಜಿತ ಮನ್ನಿಕೇರಿ, ಪಿ.ಎಸ್.ಐ ಹಾಲಪ್ಪ ಬಾಲದಂಡಿ, ಸ್ಪಂದನ ಗೆಳೆಯರ ಬಳಗದ ವಕೀಲ ಬಲದೇವ ಸಣ್ಣಕ್ಕಿ ಮಾತನಾಡಿ, ಪರಿಸರವನ್ನು ಕಾಳಜಿಯಿಂದ ನೋಡಿಕೊಂಡಾಗ ಮಾತ್ರ ಜೀವನ ನಡೆಸಲು ಸಾಧ್ಯವಾಗುವದು. ವಿನಾಕಾರಣ ಅನಗತ್ಯ ರೀತಿಯಲ್ಲಿ ದುಷ್ಪರಿಣಾಮ ಮಾಡಿದರೆ ಪ್ರಕೃತಿ ವಿಕೋಪಗಳಾದ ಅತಿವೃಷ್ಠಿ ಮತ್ತು ಅನಾವೃಷ್ಠಿಗಳು ಉಂಟಾಗಿ ಜೀವ ಸಂಕುಲಕ್ಕೆ ಹಾನಿಯಾಗುವದು. ಇಂದಿನ ಯಾಂತ್ರಿಕ ಬದುಕಿನಲ್ಲಿ ಹಿತ ಮಿತವಾದ ಬಳಕೆಯೊಂದಿಗೆ ಸೃಷ್ಠಿಯ ಸೌಂದರ್ಯ ಕಾಪಾಡಬೇಕು. ಸ್ಪಂದನ ಗೆಳೆಯರ ಬಳಗದ ಕಾರ್ಯಗಳು ಮುಂದಿರುವ ಯೋಜನೆಗಳನ್ನು ಪ್ರಂಶಸಿಸಿದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಪರಿವಾರದ ಅಧ್ಯಕ್ಷ ಡಾ.ಎಸ್ ಎಸ್ ಪಾಟೀಲ, ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ಹೈಕೋರ್ಟ್ ವಕೀಲ ಚೇತನ ಲಿಂಬಿಕಾಯಿ, ಉಪವಲಯ ಅರಣ್ಯಾಧಿಕಾರಿ ಅಶೋಕ ಮಧುರಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಜಿ ಗೋಡಿಗೌಡರ, ಪ್ರಾಥಮಿಕ ಶಿಕ್ಷಕರ ಸಂಘದ ಉಪಾಧ್ಯಕ್ಷ ಬಿ.ಎ ಡಾಂಗೆ, ಶಿವಲಿಂಗ ಜಿನರಾಳ, ಶಿವಾನಂದ ಹುಡೆದ, ಆನಂದ ಹಚ್ಚಪ್ಪನವರ, ಗಿರೀಶ ನಾಯಕ, ಗೊವಿಂದ ಮಳಲಿ, ವಿನೋದ ವೈದು, ಶ್ರೀಶೈಲ್ ತಡಸಲ ಹಾಗೂ ಗೋಕಾಕ ಸ್ಪಂದನ ಗೆಳೆಯರ ಬಳಗದವರು ಹಾಜರಿದ್ದರು.
ಕಾರ್ಯಕ್ರಮವನ್ನು ಸುರೇಶ ಮೂಡಲಗಿ ನಿರೂಪಿಸಿದರು. ಸಂಗಮೇಶ ದಂಡಾಪೂರ ಸ್ವಾಗತಿಸಿ, ರಾಘವೇಂದ್ರ ನಾಯಕ ವಂದಿಸಿದರು.
