ಮೂಡಲಗಿ: ಕೊರೋನಾ ವೈರಸ್ ದಿಂದ ದೇಶದಲ್ಲಿ ಏ ೧೪ ರವರೆಗೆ ಸಂಪೂರ್ಣ ಲಾಕ್ ಡೌನ್ ಆಗಿದ್ದು, ಪಟ್ಟಣದ ಬಡಜನರು, ಕೂಲಿಕಾರ್ಮಿಕರು,ಕೆಲಸವಿಲ್ಲದೆ ಕಂಗೆಟ್ಟು ಹೋಗಿದ್ದಾರೆ. ಅಗತ್ಯ ವಸ್ತಗಳನ್ನು ತರಲು ಹಣವಿಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ.ಇದನ್ನು ಮನಗೊಂಡ ಮೂಡಲಗಿ ವಾರ್ಡ ನಂ 2 ರ ಪುರಸಭೆ ಸದಸ್ಯರಾದ ಶಿವಪ್ಪ ಚಂಡಕಿಯವರ ಮಗ ಶ್ರೇಯಸ್ ಚಂಡಕಿ ಸುಮಾರು 110 ಬಡ ಕುಟುಂಬಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ದಿನನಿತ್ಯ ಬಳಸುವ ದಿನಸಿ ವಸ್ತುಗಳನ್ನು ನೀಡಿ ಮಾನವೀಯತೆ ಮೆರೆದರು.
ಶಿವಲೀಲಾ ಚಂಡಕಿ ಮಾತನಾಡಿ ಎಲ್ಲರೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ನಿಮ್ಮ ಆರೋಗ್ಯದ ಕಡೆ ಗಮನಹರಿಸುದರ ಜೊತೆಗೆ ಮನೆಲ್ಲೆ ಉಳಿದು ಕೊಳ್ಳಬೇಕು ಎಂದು ಜನರಲ್ಲಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಚಂದ್ರು ದರೂರ, ಲಕ್ಕಪ್ಪ ತಟಗಾರ,ಸತ್ಯಪ್ಪ ತಳವಾರ,ಕಲ್ಲಪ್ಪ ತಳವಾರ,ಶಿವಬಸು ತಳವಾರ, ಪ್ರದೀಪ ದರೂರ, ಮಹಾದೇವ ತೇಗೂರ ಉಪಸ್ಥಿತರಿದ್ದರು