ಸೋಮವಾರ , ಅಕ್ಟೋಬರ್ 3 2022
kn
Breaking News

ರಾಜ್ಯದಾದ್ಯಂತ ಜಿ.ವಿ.ಪಿ ನೌಕರರು ಸೇರಿ ಉಗ್ರವಾದ ಪ್ರತಿಭಟನೆ : ಭೀಮಪ್ಪ ಗಡಾಡ

Spread the love

ಮೂಡಲಗಿ: ಕರ್ನಾಟಕ ಸರ್ಕಾರದ ಒಡೆತನಕ್ಕೆ ಸೇರಿರುವ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ವಿದ್ಯುತ್ ಪ್ರತಿನಿಧಿಗಳಾಗಿ ಕಳೆದ 18 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಜಿ.ವಿ.ಪಿ ನೌಕರರಿಗೆ ಮುಂಬರುವ ಅಧಿವೇಶದ ಒಳಗಾಗಿ ಮೀಟರ್ ರೀಡರ್ (ಎಮ್.ಆರ್) ನೇಮಕ ಮಾಡದಿದ್ದಲ್ಲಿ ವಿಧಾಸೌದದ ಮುಂದೆ ರಾಜ್ಯದಾದ್ಯಂತ ಜಿ.ವಿ.ಪಿ ನೌಕರರು ಸೇರಿ ಉಗ್ರವಾದ ಪ್ರತಿಭಟನೆ ಮಾಡಲಾಗುವುದೆಂದು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾಡ ಹೇಳಿದರು.

ಶನಿವಾರದಂದು ಪಟ್ಟಣದ ಸಮರ್ಥ ಶಾಲಾ ಸಭಾಂಗಣದಲ್ಲಿ ಗ್ರಾಮ ವಿದ್ಯುತ್ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದಿoದ ಹಮ್ಮಿಕೊಳ್ಳಲಾದ ಭೀಮಪ್ಪ ಗಡಾದ ನೇತೃತ್ವದಲ್ಲಿ ಗ್ರಾಮ ವಿದ್ಯುತ್ ಪ್ರತಿನಿಧಿಗಳ ಖಾಯಮಾತಿಗಾಗಿ ಹೋರಾಟದ ರೂಪರೇಷೆಗಳ ಬಗ್ಗೆ ಕರೆಯಲಾದ ಸಭೆಯ ನಂತರ ಜರುಗಿದ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿ.ವಿ.ಪಿ ನೌಕರರು ಕರ್ನಾಟಕ ನ್ಯಾಯಾಲಯದಲ್ಲಿ ರೀಟ ಅರ್ಜಿ ಸಲ್ಲಿಸಿ ಜಿ.ವಿ.ಪಿ ಗಳನ್ನು ಖಾಯಂಗೊಳಿಸುವoತೆ ಕೇಳಿಕೊಳ್ಳಲಾಗಿತ್ತು. ನ್ಯಾಯಾಲಯ ನೌಕರರ ಬೇಡಿಕೆಗಳನ್ನು ಎತ್ತಿ ಹಿಡಿದು ಸೂಕ್ತ ಹುದ್ದೆಗಳನ್ನು ರಚಿಸಿ, ಇವರುಗಳಿಗೆ ಖಾಯಂಗೊಳಿಸಲು ಆದೇಶಿಸಲಾಗಿತ್ತು. ಆದರೆ ಇದನ್ನು ಸರ್ಕಾರ ಮಾತ್ರ ಕಾರ್ಯರೂಪಕ್ಕೆ ತರದೆ ರೀಟ್ ಅಪೀಲ್ ಸಲ್ಲಿಸಿರುವ ಸರ್ಕಾರ ದುಡಿಯುವ ಜಿ.ವಿ.ಪಿ ಗಳ ವಿರುದ್ದವಾಗಿದೆ ಎಂದು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಜಿ.ವಿ.ಪಿ ನೌಕರರನ್ನು ಖಾಯಂಗೊಳಿಸುವoತೆ ಒತ್ತಾಯಿಸಿ ಈಗಾಗಲೇ ಮುಖ್ಯಮಂತ್ರಿಗಳಿಗೆ ಹಾಗೂ ಇಂಧನ ಸಚಿವರಿಗೂ ಹಾಗೂ ಹೆಸ್ಕಾಂ ಕಂಪನಿಯ ಎಮ್.ಡಿಯವರಿಗೂ ಮನವಿ ಪತ್ರ ಸಲ್ಲಿಸಲಾಗಿದ್ದು, ಕೂಡಲೇ ಸರ್ಕಾರ ಖಾಯಂಗೊಳಿಸದಿದ್ದಲ್ಲಿ, ರಾಜ್ಯದ ಸುಮಾರು 3572 ನೌಕರರು ಸೇರಿ ಸರ್ಕಾರದ ವಿರುದ್ದ ಹಾಗೂ ಅಧಿವೇಶ ವೇಳೆ ವಿಧಾಸೌಧ ಮುತ್ತಿಗೆ ಹಾಕಿ ಹೋರಾಟ ಮಾಡಲಾಗುವುದು. ಆದರಿಂದ ಸರ್ಕಾರಕ್ಕೆ ಇನ್ನೂ ಕಾಲಾವಕಾಶವಿದ್ದು ಶೀಘ್ರವಾಗಿ ಖಾಯಂಗೊಳಿಸಿ ಆದೇಶ ಹೊರಡಿಸಬೇಕೆಂದು ಎಂದರು.

ಯಾದಗಿರಿ ಜಿಲ್ಲೆಯ ಗ್ರಾ.ವಿ.ಕ್ಷೇ.ಸಂಘ ಪದಾಧಿಕಾರಿ ಹಳೇರಾವ್ ಕುಲಕರ್ಣಿ ಮಾತನಾಡಿ, ಗ್ರಾಮ ವಿದ್ಯುತ್ ಪ್ರತಿನಿಧಿಗಳು ಹಾಗೂ ಮೇಲಾಧಿಕಾರಿಗಳು ಒಂದೇ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮೇಲಾಧಿಕಾರಿಗಳು ಮಾತ್ರ ಗ್ರಾಮ ವಿದ್ಯುತ್ ಪ್ರತಿನಿಧಿಗಳನ್ನು ಕೂಲಿ ಆಳುಗಳನ್ನಾಗಿ ದುಡಿಸಿಕೊಳ್ಳುತ್ತಿದ್ದಾರೆ ವಿನಹ ಕಂಪನಿಗಳಿoದ ಕೂಡುವಂತ ಸಂಬಳದಲ್ಲಿ ನಮ್ಮ ಜೀವನ ಸಾಗಿಸಲು ತೊಂದರೆ ಉಂಟಾಗಿದರು ಕೂಡಾ ಸರ್ಕಾರ ನಮ್ಮನ್ನು ಖಾಯಂಗೊಳಿಸದೇ ತಾರತಮ್ಯ ಧೋರಣೆ ಮಾಡುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ನಮ್ಮ ಈ ಹೋರಾಟಕ್ಕೆ ಶಾಸಕರು ಕೂಡಾ ನಮಗೆ ಬೆಂಬಲ ನೀಡಿ ಸರ್ಕಾರದ ಗಮನ ಸೆಳೆದು ಜಿ.ವಿ.ಪಿ ನೌಕರರನ್ನು ಖಾಯಂಗೊಳಿಸುವoತೆ ಒತ್ತಾಯಿಸುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಗ್ರಾ.ವಿ.ಕ್ಷೇ.ಸಂಘ ಪದಾಧಿಕಾರಿಗಳಾದ ವಿಜಯಪುರ ಜಿಲ್ಲೆಯ ಎಮ್ ಎಸ್ ತಳವಾರ, ಬೆಳಗಾವಿ ಜಿಲ್ಲೆಯ ಎಮ್ ಎಸ್ ಪಾಟೀಲ, ಕಲಬುರಗಿ ಜಿಲ್ಲೆಯ ಲಕ್ಷಿಕಾಂತ ಪಾಟೀಲ, ಬಾಗಲಕೋಟಿ ಜಿಲ್ಲೆಯ ಶಿವಾನಂದ ದೊಡ್ಡಮನಿ, ವಿಜಯಪುರ ಜಿಲ್ಲೆಯ ಎಸ್ ಸಿ ಹಿರೇಮಠ ಹಾಗೂ ಸ್ಥಳೀಯ ಜಿ.ವಿ.ಪಿ ನೌಕರರಾದ ಶಂಕರ ಹೊಸಮನಿ, ಬಾಬು ನಾರಾಯಕರ, ಸದಾಶಿವ ಹೊಸಮನಿ, ಅಪ್ಪಾಸಾಬ ನಾಗನೂರ, ಸಿದ್ದಯ್ಯ ಹಿರೇಮಠ, ಬಸವರಾಜ ಪೈಠಾನ, ಮಂಜು ಕೌಜಲಗಿ, ಭೋರಪ್ಪ ತಳವಾರ, ದುಂಡಪ್ಪ ಕಂಬಾರ, ಹಣಮಂತ ಅರಬಾವಿ, ಕುಮಾರ ದೊಡ್ಡಮನಿ, ಸಂಜು ಕರಬನ್ನವರ, ಬಾಳೇಶ ಗೌಡರ್ ಮತ್ತು ಇನ್ನಿತರರು ಉಪಸ್ಥಿತರಿದ್ದರು.


Spread the love

About Kenchappa Meesi

Check Also

ಡಾ.ಅಶೋಕ ದಳವಾಯಿಯವರ ಜೀವಮಾನ ಸಾಧನೆಗೆ ‘ಪೋಷಕ ಅನಾಜ’ ಪ್ರಶಸ್ತಿ

Spread the loveಮೂಡಲಗಿ: ಭಾರತ ಸರಕಾರದ ಹಿರಿಯ ಅಧಿಕಾರಿ, ಕೃಷಿತಜ್ಞ ಮತ್ತು ಅನುಭವಿ ಆಡಳಿತಗಾರರಾದ ಡಾ.ಅಶೋಕ ದಳವಾಯಿಯವರ ಜೀವಮಾನ ಸಾಧನೆ …

46 comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

error: Content is protected !!