ಮೂಡಲಗಿ: ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಮೂಡಲಗಿ ಘಟಕದ ೨೦೨೨-೨೭ ನೇ ಸಾಲಿನ ಪದಾಧಿಕಾರಿಗಳ ಚುನಾವಣೆಯಲ್ಲಿ ಅವಿರೋಧವಾಗಿ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ವಿ.ಟಿ ಯರಗಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪದಾಧಿಕಾರಿಗಳ ವಿವರ: ರವಿಚಂದ್ರ ಹೊಸಟ್ಟಿ ( ಅಧ್ಯಕ್ಷರು), ಪರಸಪ್ಪ ಕುಲಕರ್ಣಿ (ಕಾರ್ಯದರ್ಶಿ), ಶ್ರೀಕಾಂತ ನ್ಯಾಮಗೌಡ(ರಾಜ್ಯ ಪರಿಷತ್ ಸದಸ್ಯರು), ಗುರವ್ವ ನರಗುಂದ (ಖಜಾಂಚಿ), ನಿರ್ದೇಶಕರುಗಳಾಗಿ ಉಮೇಶ ನುಗ್ಗಾನಟ್ಟಿ, ಶಿವಲಿಂಗ ಪೂಜೇರಿ, ಲತೀಪಸಾಬ ಕೊಕಟನೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅವಿರೋಧವಾಗಿ ಆಯ್ಕೆಯಾಗಿರುವ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಪದಾಧಿಕಾರಿಗಳಿಗೆ ಹಾಗೂ ನಿರ್ದೇಶಕರಿಗೆ ಕಹಾಮ ಅಧ್ಯಕ್ಷರು ಮತ್ತು ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅಭಿನಂದಿಸಿ, ಶೈಕ್ಷಣಿಕವಾಗಿ ಮೂಡಲಗಿ ವಲಯವು ಗುಣಾತ್ಮಕ ಗುಣಮಟ್ಟದ ಕಲಿಕೆಯ ಜೊತೆಗೆ ಶೈಕ್ಷಣಿಕ ಕಾರ್ಯಚಟುವಟಿಕೆಗಳು ನಡೆಯಬೇಕು. ಶಿಕ್ಷಕರ ಸೌಲಭ್ಯಗಳನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಕಾರ್ಯನಿರ್ವಹಣೆ ಮಾಡಬೇಕು. ಶಿಕ್ಷಕರ ಶೈಕ್ಷಣಿಕ ವೃತ್ತಿ ಯೋಗ ಕ್ಷೇಮದ ಬಗ್ಗೆ ಕಾಳಜಿಹೊಂದಿ ವಲಯದ ಪ್ರಗತಿಗೆ ಶ್ರಮಿಸಬೇಕು ಎಂದು ತಿಳಿಸಿದ್ದಾರೆ.
