ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ಅಧ್ಯಕ್ಷ ಬಾಲಶೇಖರ ಬಂದಿ ಅವರು ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರ ಪ್ರಶಂಸನಾ ಪ್ರಶಸ್ತಿ ಪಡೆದುಕೊಂಡಿದ್ದಾರೆ.
೨೦೨೧-೨೨ನೇ ಸಾಲಿನಲ್ಲಿ ಪರಿಸರ ಕಾಳಜಿ, ನೇತ್ರ, ದಂತ, ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡ (ಬಿಪಿ) ಹಲವಾರು ಉಚಿತ ಆರೋಗ್ಯ ತಪಾಸಣಾ ಶಿಬಿರಗಳ ಸಂಘಟನೆ, ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಪಾಕ್ಷಿಕ ಅನ್ನದಾಸೋಹ, ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ, ಪಶು ಆರೋಗ್ಯ ಉಚಿತ ತಪಾಸಣೆ ಶಿಬಿರಗಳ ಸಂಘಟನೆ, ಸ್ವಚ್ಛತಾ ಅಭಿಯಾನ, ಕಲಾವಿದರಿಗೆ ಸಹಾಯ, ಸಸಿಗಳ ವಿತರಣೆ ಸೇರಿದಂತೆ ೮೦ಕ್ಕೂ ಅಧಿಕ ಸಾಮಾಜಿಕ ಕಾರ್ಯಚಟುವಟಿಕೆಗಳನ್ನು ಮಾಡಿದ್ದನ್ನು ಪರಿಗಣಿಸಿ ಪ್ರಶಸ್ತಿ ನೀಡಿರುವರು.
ಇತ್ತಿಚೆಗೆ ಗೋವಾದಲ್ಲಿ ಜರುಗಿದ ಲಯನ್ಸ್ ಕ್ಲಬ್ ಜಿಲ್ಲಾ ವಾರ್ಷಿಕ ಸಮಾವೇಶದಲ್ಲಿ ಲಯನ್ಸ್ ಜಿಲ್ಲಾ ಗರ‍್ನರ್ ಶ್ರೀಕಾಂತ ಮೋರೆ ಅವರು ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ಎಲ್ಲ ಸದಸ್ಯರು ಬಾಲಶೇಖರ ಬಂದಿ ಅವರನ್ನು ಅಭಿನಂದಿಸದ್ದಾರೆ.
