ಮೂಡಲಗಿ: ಆದರ್ಶ ಪ್ರಜೆಗಳಾಗುವ ನಿಟ್ಟಿನಲ್ಲಿ ವಿದ್ಯಾರ್ಥಿ ಜೀವನವನ್ನು ಸದುಪಯೋಗ ಪಡೆದುಕೊಳ್ಳಬೇಕು. ಆಹಾರ, ಆರೋಗ್ಯ ಮತ್ತು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸದೃಢವಾದ ದೇಹ ಮತ್ತು ಮನಸ್ಸುಗಳನ್ನು ಗಟ್ಟಿಗೊಳಿಸಬೇಕು. ಯಾವುದೇ ವೃತ್ತಿಯಲ್ಲಿದ್ದರು ಅದರ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು, ದೇಶದ ಅಭಿವೃದ್ಧಿಗೆ ಪೂರಕರಾಗಬೇಕು ಎಂದು ಡಾ. ಪ್ರಶಾಂತ ಬಾಬಣ್ಣವರ ಹೇಳಿದರು.
ಅವರು ನಗರದ ಶ್ರೀನಿವಾಸ ಶಾಲೆಯಲ್ಲಿ ಜರುಗಿದ ರಾಷ್ಟ್ರೀಯ ವೈದ್ಯರ ದಿನಾಚರಣೆಯಂದು ಅತೀಥಿಗಳಾಗಿ ಆಗಮಿಸಿ ಮಾತನಾಡಿದರು. ವಿದ್ಯಾರ್ಥಿನಿ ಅನಘಾ ಸ್ವಾಮಿ ಮಾತನಾಡಿ, ಸಮಾಜಕ್ಕೆ ವೈದ್ಯರ ಕೊಡುಗೆಗಳನ್ನು ಸ್ಮರಿಸಿ, ವೈದ್ಯರ ದಿನದ ಆಚರಣೆಯ ಮಹತ್ವಗಳನ್ನು ವಿವರಿಸಿದರು. ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ವೈದ್ಯರನ್ನು ಪ್ರೀತಿಸಿ ಗೌರವಿಸುವುದು ನಮ್ಮ ಆದ್ಯ ಕರ್ತವ್ಯ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಹಿರಿಯ ವೈದ್ಯರಾದ ಡಾ. ಬಂಡು ಬಾಬಣ್ಣವರ ಅವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಮನೋಜ್ ಭಟ್, ಹನುಮಂತ ಸೋರಗಾವಿ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ಮತ್ತು ಶಾಲಾ ಮಕ್ಕಳು ಹಾಜರಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಅಂಕಿತಾ ನಿರೂಪಿಸಿದರು. ವಿನೋದ ಸ್ವಾಗತಿಸಿದರು. ತ್ರಿಶಾ ಅತಿಥಿಗಳನ್ನು ಪರಿಚಯಿಸಿದರು ಹಾಗೂ ಸಮರ್ಥ ವಂದಿಸಿದರು.
