ಮೂಡಲಗಿ: ಅಲ್ಟಿಮೇಟ್ ಸ್ಟಾರ್ ತೇಜ್ ಅವರ ನಟನೆ ಮತ್ತು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸೈಂಟಿಪಿಕ್ ತ್ರಿಲ್ಲರ್ ಕಥೆ ಇರುವ ರಾಮಾಚಾರಿ 2.0 ಚಿತ್ರದಲ್ಲಿ ಮೂಡಲಗಿಯ ಕಲಾವಿದ ಮಂಜುನಾಥ ರೇಳೆಕರ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಈ ಚಿತ್ರದಲ್ಲಿ ದೊಡ್ಡ ತಾರಾಬಳಗ ಇದೆ ಎನ್ನುವುದು ಖುಷಿಯ ವಿಚಾರ ಏಕೆಂದರೆ ಚಿತ್ರದ ನಾಯಕಿ ಕಿರುತೆರೆ ನಟಿ ಕೌಸ್ತುಬಾ ಮಣಿ, ನಾಯಕನ ತಂದೆ ಪಾತ್ರದಲ್ಲಿ ದೊಡ್ಮನೆ ಮಗ ರಾಘವೇಂದ್ರ ರಾಜಕುಮಾರ, ಸ್ಪರ್ಶ ರೇಖಾ ಮತ್ತಿತರರು ನಟನೆ ಮಾಡುತ್ತಿದ್ದು ಚಿತ್ರವು ಶೀಘ್ರದಲ್ಲೇ ತೆರೆಗೆ ಬರಲು ಸಜ್ಜಾಗುತ್ತಿದೆ ಎಂದು ತಿಳಿದುಬಂದಿದೆ. ಈ ಚಿತ್ರದ ಭಾಗ 2 ಚಿತ್ರೀಕರಣ ಆರಂಭವಾಗಲಿದೆ. ಏನೇ ಆಗಲಿ ನಮ್ಮ ಊರಿನ ಕಲಾವಿದರಿಗೆ ಹೆಚ್ಚು ಅವಕಾಶ ಬರಲಿ ಎನ್ನುವುದೇ ಮೂಡಲಗಿಯ ಕಲಾಭಿಮಾನಿಗಳ ಆಶಯವಾಗಿದೆ.