ಬುಧವಾರ , ಮೇ 31 2023
kn
Breaking News

ಅಗ್ನಿಪಥ ಯೋಜನೆಯು ದೇಶದ ಸಂವಿಧಾನ ಮತ್ತು ಸಮಾಜಕ್ಕೆ ಮಾರಕ :ಅರವಿಂದ ದಳವಾಯಿ

Spread the love

ಮೂಡಲಗಿ: ಕೇಂದ್ರ ಸರಕಾರವು ಇತ್ತೀಚೆಗೆ ಘೋಷಿಸಿರುವ ಅಗ್ನಿಪಥ ಯೋಜನೆಯನ್ನು ಹಿಂಪಡೆಯಲು ಆಗ್ರಹಿಸಿ ಅರಬಾವಿ ಮತ್ತು ಕೌಜಲಗಿ ಬ್ಲಾಕ್ ಕಾಂಗ್ರೇಸ್ ಕಾರ್ಯಕರ್ತರು ಸ್ಥಳೀಯ ಕಲ್ಮೇಶ್ವರ ವೃತ್ತದಲ್ಲಿ ಸೋಮವಾರ ಸತ್ಯಾಗ್ರಹ ನಡೆಸಿ ತಹಶೀಲ್ದಾರ ಡಿ.ಜೆ.ಮಹಾತ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿದರು.

ಕಾಂಗ್ರೇಸ್ ಮುಖಂಡ ಅರವಿಂದ ದಳವಾಯಿ ಮಾತನಾಡಿ ಕೇಂದ್ರಸಂವಿಧಾನ ಮತ್ತು ಸಮಾಜಕ್ಕೆಸಂವಿಧಾನ ಮತ್ತು ಸಮಾಜಕ್ಕೆ ಸರಕಾರಸಂವಿಧಾನ ಮತ್ತು ಸಮಾಜಕ್ಕೆವು ಇತ್ತೀಚೆಗೆ ಘೋಷಿಸಿರುವ ಅಗ್ನಿಪಥ ಯೋಜನೆಯು ದೇಶದ ಸಂವಿಧಾನ ಮತ್ತು ಸಮಾಜಕ್ಕೆ ಮಾರಕವಾಗಿರುವದು. ಸಂಸತ್ತು ಮತ್ತು ಸಾರ್ವಜನಿಕರೊಂದಿಗೆ ಚರ್ಚೆ ಮತ್ತು ಅವರ ಸಮ್ಮತಿಯಿಲ್ಲದೇ ಕೇವಲ ನಾಲ್ಕು ವರ್ಷಗಳ ಅವಧಿಗೆ ಗುತ್ತಿಗೆ ಸೈನಿಕರನ್ನು ಸೃಷ್ಟಿ ಮಾಡುವ ಯೋಜನೆಯೇ ನಿಗೂಢವಾಗಿದೆ. ಅಗ್ನಿಪಥ ಯೋಜನೆಯು ಯುವಜನತೆಯ ಭವಿಷ್ಯವನ್ನು ಅಪಾಯದ ಅಂಚಿಗೆ ತಂದು ನಿಲ್ಲಿಸಿದೆ. ಯುವಕರಿಗೆ ಮಾರಕವಾಗಿರುವ ಈ ಯೋಜನೆಯ ನಿರ್ಧಾರವನ್ನು ಹಿಂಪಡೆಯುವoತೆ ಕೇಂದ್ರ ಸರಕಾರಕ್ಕೆ ಆದೇಶಿಸಬೇಕೆಂದು ರಾಷ್ಟ್ರಪತಿಗಳನ್ನು ಆಗ್ರಹಿಸಿದರು.

ಹಿರಿಯ ಕಾಂಗ್ರೆಸ್ ಮುಖಂಡ ಎಸ್.ಆರ್.ಸೋನವಾಲ್ಕರ ಮಾತನಾಡಿ, ಕೇವಲ ೬ ತಿಂಗಳು ಮಾತ್ರ ತರಬೇತಿ ಪೂರೈಸಿದ ಪಡ್ಡೆ ಹೈಕಳುಗಳಿಂದ ದೇಶ ರಕ್ಷಣೆ ನಿರೀಕ್ಷಿಸುವದು ಹಾಸ್ಯಾಸ್ಪದವೇ ಸರಿ. ಕೇಂದ್ರ ಸರಕಾರದ ನಿಧಾರವು ದೇಶವನ್ನು ಅಪಾಯದ ಅಂಚಿಗೆ ತಂದು ನಿಲ್ಲಿಸಿದೆ. ಕೂಡಲೇ ಈ ಯೋಜನೆಯನ್ನು ಕೇಂದ್ರ ಸರಕಾರ ಹಿಂಪಡೆಯಬೇಕು ಎಂದರು.

ವಿ.ಪಿ.ನಾಯ್ಕ, ಮಲೀಕ ಕಳ್ಳಿಮನಿ, ಸುರೇಶ ಮಗದುಮ್, ಸಲೀಂ ಇನಾಮದಾರ ಮಾತನಾಡಿದರು. ಮಾಳಪ್ಪ ಬಿದರಿ, ಬಸಗೌಡ ಪಾಟೀಲ, ವಿರುಪಾಕ್ಷ ಮೂಗಳಖೋಡ, ಇರ್ಷಾದ ಪೈಲವಾನ, ರಪೀಕ ತಾಂಬೂಳಿ, ಮಹಾಲಿಂಗಯ್ಯ ನಂದಗಾoವಮಠ, ಶಿವಾನಂದ ಮಾದರ, ಮದಾರ ಜಕಾತಿ, ಪ್ರಕಾಶ ಅರಳಿ, ದುರ್ಗಪ್ಪ ಮೇತ್ರಿ, ಹನುಮಂತಗೌಡ ಚಿಕ್ಕಗೌಡ್ರ ಮತ್ತಿತರರು ಉಪಸ್ಥಿತರಿದ್ದರು.


Spread the love

About gcsteam

Check Also

ಹಳೆಯ ಪಿಂಚಣಿ ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ:ಬೀರಪ್ಪ ಅಂಡಗಿ

Spread the loveಕೊಪ್ಪಳ: ೧ನೇ ಏಪ್ರೀಲ್ ೨೦೦೬ ರ ನಂತರ ನೇಮಕಗೊಂಡ ರಾಜ್ಯ ಸರಕಾರಿ ನೌಕರರಿಗೆ ಜಾರಿಗೆ ಮಾಡಲಾಗಿರುವ ನೂತನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page