ಶುಕ್ರವಾರ , ಸೆಪ್ಟೆಂಬರ್ 30 2022
kn
Breaking News

ಶೈಕ್ಷಣಿಕವಾಗಿ ಶಿಕ್ಷಕರಿಗೆ ಹಾಗೂ ಕಲಿಕೆಯಲ್ಲಿ ಮಕ್ಕಳಿಗೆ ಆಗುತ್ತಿರುವ ಸಮಸ್ಯೆಗಳು ಮತ್ತು ತಂತ್ರಾoಶದಲ್ಲಿಯ ತೊಂದರೆಗಳ ಕುರಿತು ಶಿಕ್ಷಕರ ಸಂಘದಿಂದ ಬಿಇಒ ಅಜೀತ ಮನ್ನಿಕೇರಿಯವರಿಗೆ ಮನವಿ

Spread the love

ಮೂಡಲಗಿ: ಶೈಕ್ಷಣಿಕವಾಗಿ ಶಿಕ್ಷಕರಿಗೆ ಹಾಗೂ ಕಲಿಕೆಯಲ್ಲಿ ಮಕ್ಕಳಿಗೆ ಆಗುತ್ತಿರುವ ಸಮಸ್ಯೆಗಳು ಮತ್ತು ತಂತ್ರಾoಶದಲ್ಲಿಯ ತೊಂದರೆಗಳ ಕುರಿತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮೂಡಲಗಿ ಘಟಕದವತಿಯಿಂದ ಬಿಇಒ ಅಜೀತ ಮನ್ನಿಕೇರಿಯವರಿಗೆ ಸಂಘದ ಸಭೆಯಲ್ಲಿ ಮನವರಿಕೆ ಮಾಡಿಕೊಟ್ಟು ಮನವಿ ನೀಡಿದರು.

ಪಟ್ಟಣದ ಬಿಇಒ ಕಾರ್ಯಾಲಯದಲ್ಲಿ ಜರುಗಿದ ಮೂಡಲಗಿ ಘಟಕದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸಭೆಯಲ್ಲಿ, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳ ಜ್ಞಾನರ್ಜನೆ ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರ ಹಲವು ಯೋಜನೆಗಳನ್ನು ರೂಪಿಸಿರುತ್ತದೆ. ಪ್ರಮುಖವಾಗಿ ಶಿಕ್ಷಕರಿಗೆ ಕಲಿಕಾ ಚೇತರಿಕೆಯ ಸಾಮಗ್ರಿಗಳು ಲಭ್ಯವಿಲ್ಲದೇ ಕಲಿಕೆಗೆ ಶಿಕ್ಷಕರಿಗೆ ಮಕ್ಕಳಿಗೆ ತೊಂದರೆಯಾಗುತ್ತಿದೆ. ಎಸ್.ಟಿ.ಎಸ್ ತಂತ್ರಾoಶ ಸರಳೀಕರಣ, ಗ್ರಾ.ಪಂಗಳಿoದ ಶಾಲೆಗಳಿಗೆ ಕೆಲಸಗಳು, ತರಭೇತಿಗಳು, ೧೯೯೮ರಲ್ಲಿ ನೆಮಕಾತಿಯಾದ ಶಿಕ್ಷಕರ ವೇತನ ನಿಗಧಿ, ೨೦೦೭ ರಲ್ಲಿ ನೇಮಕವಾದರವರಿಗೆ ಒಪಿಎಸ್‌ಗೆ ಒಳಪಡಿಸುವದು. ಸ್ವಯಂ ಚಾಲಿತ ಕಾಲ ಮಿತಿ ಬಡ್ತಿ, ವೇತನ ವ್ಯತ್ಯಾಸಗಳು, ಕೋವಿಡ್ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದವರಿಗೆ ಈ.ಎಲ್ ನೀಡಬೇಕು. ಬಾಕಿ ವೇತನಗಳು ಹಾಗೂ ಶಿಕ್ಷಕರಿಗೆ ಆಗುವ ತೊಂದರೆಗಳನ್ನು ತೀವೃಗತಿ ಸರಿಪಡಿಸಿ ಶಾಲಾ ಕರ್ತವ್ಯಕ್ಕೆ ಸಹಾಯ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಮನವಿ ಸ್ವೀಕರಿಸಿದ ಬಿಇಒ ಅಜೀತ ಮನ್ನಿಕೇರಿ ಮಾತನಾಡಿ, ಶಿಕ್ಷಕರ ತೊಂದರೆಗಳಿಗೆ ಸಕಾಲದಲ್ಲಿಯೇ ಸ್ಪಂದನೆ ನೀಡುತ್ತೇವೆ. ಶೈಕ್ಷಣಿಕ ವಲಯಕ್ಕೆ ಬೇಕಾಗುವ ಎಲ್ಲ ಕೆಲಸ ಕಾರ್ಯಗಳನ್ನು ಮಾಡಲು ಸಂಪೂರ್ಣವಾಗಿ ಇಲಾಖೆಯವತಿಯಿಂದ ಹಾಗೂ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಿಸಲಾಗುವದು. ಸ್ಥಳೀಯ ಮಟ್ಟದಲ್ಲಿ ನಿರ್ವಹಣೆಯಾಗುವ ಕಾರ್ಯಗಳನ್ನು ಆದಷ್ಟು ಬೇಗನೆ ನಿರ್ವಹಿಸಿ ಶೈಕ್ಷಣಿಕವಾಗಿ ಬೇಕಾಗುವ ಸೌಲಭ್ಯಗಳನ್ನು ನೀಡುವದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮೂಡಲಗಿ ಶೈಕ್ಷಣಿಕ ವಲಯದ ಶಿಂದಿಕುರಬೆಟ್ಟ ಬಸವನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಧಾನಗುರು ಐ.ಎಸ್ ನದಾಫ್ ಅವರು ಬೆಂಗಳೂರಿನಲ್ಲಿ ರಾಜ್ಯ ಸರಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಸತತವಾಗಿ ಮೂರನೆ ಸಲ ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕದೊಂದಿಗೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಪ್ರಯುಕ್ತ ಸತ್ಕರಿಸಿ ಸನ್ಮಾನಿಸಲಾಯಿತು.
ಸಭೆಯಲ್ಲಿ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಜಿಲ್ಲಾಧ್ಯಕ್ಷ ಎಸ್.ಎಮ್ ಲೋಕನ್ನವರ, ಕಾರ್ಯದರ್ಶಿ ಎ.ಪಿ ಪರಸನ್ನವರ, ಮಾಜಿ ತಾಲೂಕಾಧ್ಯಕ್ಷರಾದ ಆರ್.ಎಮ್ ಮಹಾಲಿಂಗಪೂರ, ಎಮ್.ವಾಯ್ ಸಣ್ಣಕ್ಕಿ ಮಾತನಾಡಿ, ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಗಳನ್ನು ತಿಳಿಸಿದರು. ಇಂದಿನ ತಾಂತ್ರಿಕ ವ್ಯವಸ್ಥೆಯಡಿಯಲ್ಲಿ ಮಕ್ಕಳು, ಶಿಕ್ಷಕರು, ಮಾರ್ಗದರ್ಶಕರು, ಮೇಲಾಧಿಕಾರಿಗಳು ಅಗತ್ಯ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕೆಂದು ಹೇಳಿ ಶೈಕ್ಷಣಿಕವಾಗಿ ತೊಂದರೆಗಳನ್ನು ಈ ಸಮಯದಲ್ಲಿ ಗಮನಕ್ಕೆ ತಂದರು.
ಸಭೆಯಲ್ಲಿ ಬಿಇಒ ಕಛೇರಿಯ ಪತ್ರಾಂಕಿತ ವ್ಯವಸ್ಥಾಪಕ ಪಿ.ಎಚ್ ಒಂಟಿ, ತಾಲೂಕಾಧ್ಯಕ್ಷ ಎಲ್.ಎಮ್ ಬಡಕಲ್,ಉಪಾಧ್ಯಕ್ಷೆ ಎಮ್.ಎಮ್ ಕಳಸನ್ನವರ, ಖಜಾಂಜಿ ಬಿ.ಬಿ ಕೇವಟಿ, ಸಹಕಾರ್ಯದರ್ಶಿ ಬಿ.ಎಲ್ ನಾಯಿಕ, ಸಂಘಟನಾ ಕಾರ್ಯದರ್ಶಿ ವಾಯ್.ಡಿ.ಜಲ್ಲಿ, ನಿರ್ದೇಶಕರಾದ ಎಸ್.ಎ ಕುರಣಗಿ, ಕೆ.ಎಲ್ ಮೀಶಿ, ಎಸ್.ಜಿ ರಾಮದುರ್ಗ, ಶಿಕ್ಷಕರಾದ ಎಸ್.ಎಮ್ ದಬಾಡಿ, ಎಸ್.ಎಲ್ ಪಾಟೀಲ್ ಹಾಗೂ ಕಛೇರಿ ಸಿಬ್ಬಂದಿ ಹಾಜರಿದ್ದರು.


Spread the love

About Kenchappa Meesi

Check Also

ದುರ್ಗಾದೇವಿ ನವರಾತ್ರಿ ಉತ್ಸವ ಸಮಿತಿವತಿಯಿಂದ ನಾಳೆ ಪೂರ್ವಭಾವಿ ಸಭೆ

Spread the loveಮೂಡಲಗಿ: ದುರ್ಗಾದೇವಿ ನವರಾತ್ರಿ ಉತ್ಸವ ಸಮಿತಿವತಿಯಿಂದ ಪ್ರತಿ ವರ್ಷ ಜರುಗುವ ನವರಾತ್ರಿ ಉತ್ಸವ ಕುರಿತು ಪೂರ್ವಭಾವಿ ಸಭೆಯು …

311 comments

  1. https://www.vykup-avtospb.ru/ – Выкуп авто битых машин марки Koenigsegg модели Excelle, 1923 года выпуска, тип кузова пикап полуторная кабина с объемом двигателя 3614 коробка передач автоматическая в Питере.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

error: Content is protected !!