ಮೂಡಲಗಿ: ಇತ್ತೀಚೆಗೆ ಕೇಂದ್ರ ಬಿಜೆಪಿ ಸರಕಾರ ಪ್ರಕಟಿಸಿರುವ ಮತ್ತು ದೇಶದ ಸುರಕ್ಷತೆ ಹಾಗೂ ಭದ್ರತೆಗೆ ಮಾರಕವೂ, ಅಲ್ಲದೆ ಯುವ ಜನತೆಯ ಭವಿಷ್ಯಕ್ಕೆ ಕರಾಳ ಶಾಸನವಾಗಿರುವ ಅಗ್ನಿಪಥ ಯೋಜನೆಯನ್ನು ವಿರೋಧಿಸಿ ಜೂ. ೨೭ ರಂದು ಮುಂಜಾನೆ ೧೦.೦೦ ಘಂಟೆಯಿoದ ಮಧ್ಯಾಹ್ನ ೧.೦೦ ಘಂಟೆವರೆಗೆ ಮೂಡಲಗಿ ಪಟ್ಟಣದ ಕಲ್ಮಶ್ವರ ವೃತ್ತದಲ್ಲಿ ಸತ್ಯಾಗ್ರಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಎಲ್ಲ ಕಾಂಗ್ರೆಸ ಕಾರ್ಯಕರ್ತರು ತಪ್ಪದೇ ಭಾಗವಹಿಸಬೇಕೆಂದು ಅರವಿಂದ ದಳವಾಯಿ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
