ಮೂಡಲಗಿ : ಸಮೀಪದ ಹಳ್ಳೂರ ಗ್ರಾಮದ ಎಸ್.ಆರ್ ಸಂತಿ ಸರಕಾರಿ ಪಿ.ಯು ಕಾಲೇಜಿನ ೨೦೨೧-೨೦೨೨ ನೇ ಸಾಲಿನ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ವಿದ್ಯಾರ್ಥಿನಿ ಪೂರ್ಣಿಮಾ ಅಂಗಡಿ ವಾಣಿಜ್ಯ ವಿಭಾಗದಲ್ಲಿ ೫೮೬(೯೭.೬೬%) ಅಂಕಗಳನ್ನು ಪಡೆಯುವ ಮೂಲಕ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ಕಲಾ ವಿಭಾಗದಲ್ಲಿ ಸವಿತಾ ಕೌಜಲಗಿ ೫೭೯ (೯೬.೫೦%) ಅಂಕಗಳೊoದಿಗೆ ಶೈಕ್ಷಣಿಕ ಜಿಲ್ಲೆಗೆ ತೃತೀಯ ಸ್ಥಾನಗಳನ್ನು ಪಡೆಯುವ ಮೂಲಕ ಗ್ರಾಮೀಣ ಪ್ರದೇಶದಲ್ಲಿದ್ದರು ಸಹ ಶೈಕ್ಷಣಿಕವಾಗಿ ಸಾಧನೆ ಗೈದಿದ್ದಾರೆ ಎಂದು ಕಾಲೇಜು ಪ್ರಾಚಾರ್ಯೆ ಸಾವಿತ್ರಿ ಮಹದೇವಪ್ಪ ಕಮಲಾಪೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಧನೆಗೈದ ವಿದ್ಯಾರ್ಥಿಗಳನ್ನು ಕಾಲೇಜು ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಉಪಾಧ್ಯಕ್ಷ ಉಮೇಶ ಸಂತಿ, ಚಿಕ್ಕೋಡಿ ಪಿಯು ಉಪನಿರ್ಧೇಶಕರಾದ ಭಂಡಾರಿ ಹಾಗೂ ಆಡಳಿತ ಮಂಡಳಿ ಸದಸ್ಯರು, ಕಾಲೇಜು ಸಿಬ್ಬಂದಿ ವರ್ಗ, ಪಾಲಕ-ಪೋಷಕರು, ಶಿಕ್ಷಣ ಪ್ರೇಮಿಗಳು, ಸಾರ್ವಜನಿಕರು ಹರ್ಷವ್ಯಕ್ತಪಡಿಸಿದ್ದಾರೆ.
