ಗುರುವಾರ , ಡಿಸೆಂಬರ್ 12 2024
kn
Breaking News

ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ವಾರ್ಷಿಕೋತ್ಸವ ಸಮಾರಂಭ ಉದ್ಘಾಟನೆ

Spread the love

ಮೂಡಲಗಿ; ಭಾರತ ದೇಶದಲ್ಲಿ ೧೫ ರಿಂದ ೩೫ ವಯಸ್ಸಿನ ಯುವ ಪೀಳಿಗೆ ಸುಮಾರು ೪೦ಕೋಟಿ ಇದ್ದು, ಅವರ ಸೇವೆಯನ್ನು ಸರಿಯಾಗಿ ಸದುಪಯೋಗ ಪಡೆಸಿಕೊಂಡರೆ ಭಾರತ ದೇಶ ಒಳ್ಳೇಯ ಶಕ್ತಿ ಶಾಲಿ ಆಗುವುದು ಬಹಳ ಸುಲಭ ಎಂದು ನವದೆಹಲಿಯ ಭಾರತ ಸರ್ಕಾರ ಕೃಷಿ ಮತ್ತು ರೈತರ ಕಲ್ಯಾಣ ಮಂತ್ರಾಲಯದ ರಾಷ್ಟ್ರೀಯ ಮಳೆಯಾಶ್ರಿತ ಪ್ರದೇಶ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ. ಅಶೋಕ ದಳವಾಯಿ, ಹೇಳಿದರು.
ತಾಲೂಕಿನ ಅರಭಾವಿ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಮಹಾವಿದ್ಯಾಲಯ ಹಾಗೂ ವಿದ್ಯಾರ್ಥಿ ನಿಲಯಗಳ ೨೦೨೧-೨೨ರ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ತೋಟಗಾರಿಕೆಯಲ್ಲಿ ವಿಫುಲ ಅವಕಾಶಗಳಿದ್ದು, ಸಾಧಾರಣ ವಿದ್ಯಾರ್ಥಿಗಳು ಮೊದಲ ರ‍್ಯಾಂಕ್ ಬರುವ ವಿದ್ಯಾರ್ಥಿಗಳಿಗಿಂತ ಎರಡು-ಮೂರು ಬಾರಿ ಹೆಚ್ಚು ಓದಿದರೆ ತಾವು ಸಹ ಮೊದಲನೆಯ ರ‍್ಯಾಂಕ್ ಗಳಿಸಬಹುದು. ದುಡ್ಡೆ ದೊಡ್ಡಪ್ಪ ವಿದ್ಯೆ ಅದರಪ್ಪ ಎಂಬ ನಾಣ್ಣುಡಿಯಂತೆ, ವಿದ್ಯಾರ್ಥಿಗಳು ಬಾಹ್ಯ ವಸ್ತುಗಳಿಗೆ ಆಕರ್ಷಣೆಗೊಳಗಾಗದೆ ಓದಿನ ಕಡೆ ಹೆಚ್ಚು ಗಮನ ಹರಿಸಿ ಗುರಿ ತಲಪುವತ್ತ ಗಮನ ನಿಡಬೇಕೆಂದು ವಿದ್ಯಾರ್ಥಿಗಳಿಗೆ ಕರೆಕೊಟ್ಟರು.
ಬೆಳಗಾವಿಯ ವಿಮರ್ಶಕಿ ಡಾ. ಮೈತ್ರೇಯಿಣಿ ಗು. ಗದಿಗೆಪ್ಪಗೌಡರ ಮಾತನಾಡಿ, ವಿದ್ಯಾರ್ಥಿಗಳು ಟಿ.ವಿ., ಮೊಬೈಲ್‌ಗಳ ಆಕರ್ಷಣೆಗೊಳಗಾಗದೆ ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕೆಂದು ಹೇಳಿದರು.
ಬಾಗಲಕೋಟಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವರು, ಡಾ. ಟಿ. ಬಿ. ಅಳ್ಳೋಳ್ಳಿ ಮಾತನಾಡಿ, ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಿಗೆ ಮೊರೆಹೋಗದೆ, ನಿಮ್ಮ ಭವಿಷÀ್ಯ ರೂಪಿಸಿಕೊಳ್ಳುವಲ್ಲಿ ಸತತ ಪ್ರಯತ್ನ ಹಾಗೂ ಶಿಕ್ಷಕರ ಮಾರ್ಗದರ್ಶನದಲ್ಲಿ ಮುಂದುವರೆದದ್ದೆ ಆದಲ್ಲಿ ನಿಮ್ಮ ಜೀವನ ಸುಖಮಯವಾಗುವುದೆಂದು ಎಂದ ಅವರು ವಿಶ್ವವಿದ್ಯಾಲಯದಲ್ಲಿ ಲಭ್ಯವಿರುವ ಕೌಶಲ್ಯ ವೃದ್ಧಿಸುವ ಹಲವು ಯೋಜನೆಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡೆಸಿಕೊಳ್ಳಬೇಕೆಂದು ಹೇಳಿದರು.
ವಿದ್ಯಾರ್ಥಿ ಕಲ್ಯಾಣ ಡೀನ್ ಡಾ. ರಾಮಚಂದ್ರ ನಾಯಕ ಮಾತನಾಡಿ, ತೋಟಗಾರಿಕೆ ಕ್ಷೇತ್ರದ ವ್ಯಾಪ್ತಿ, ಉದ್ಯೋಗವಕಾಶಗಳ ಮಾಹಿತಿ ನೀಡುವುದರೊಂದಿಗೆ ವಿಶ್ವವಿದ್ಯಾಲಯಕ್ಕೆ ಹಲವು ಖಾಸಗಿ ಕಂಪನಿಗಳು ವಿದ್ಯಾರ್ಥಿಗಳಿಗಾಗಿ ಬೇಡಿಕೆ ಇಟ್ಟಿದ್ದು ಕ್ಯಾಂಪಸ್ ಸೆಲೆಕ್ಷನ್‌ಗಳ ಮೂಲಕ ವಿದ್ಯಾರ್ಥಿಗಳಿಗೆ ಕೆಲಸ ನೀಡಲಾಗುವುದು ಎಂಬ ಭರವಸೆಯನ್ನು ಕೊಟ್ಟರು.
ಸಮಾರಂಭದ ಅಧ್ಯಕ್ಷತೆಯನ್ನು ಮಹಾವಿದ್ಯಲಯದ ಡೀನ್ ಡಾ. ಎಮ್.ಜಿ. ಕೆರುಟಗಿ ಮಾತನಾಡಿ, ಅರಭಾವಿ ಮಹಾವಿದ್ಯಾಲಯವು ತೋ.ವಿ.ವಿಯ ಒಂಬತ್ತು ಮಹಾವಿದ್ಯಾಲಯಗಳಲ್ಲಿ ಹಳೆಯ ಹಾಗೂ ಪ್ರತಿಷ್ಠಿತ ಮಹಾವಿದ್ಯಾಲಯ ಆಗಿದ್ದು, ಇಲ್ಲಿ ಸ್ನಾತಕ, ಸ್ನಾತಕೋತ್ತರ ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದು, ಇವರ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದೆ ಅದಲ್ಲದೇ ವಿದ್ಯಾರ್ಥಿಗಳ ಬಹುಮುಖ ಪ್ರತಿಭೆಗೆ ತುಂಬಾ ಮೆಚ್ಚುಗೆ ವ್ಯಕ್ತಪಡಿಸಿ ಎಲ್ಲ ಸಿಬ್ಬಂದಿಗಳ ಸಹಕಾರಕ್ಕೆ ಧನ್ಯವಾದಗಳನ್ನು ಹೇಳಿದರು.
ಕಾರ್ಯಕ್ರಮದಲ್ಲಿ ಡಾ. ಅಶೋಕ ದಳವಾಯಿ ಅವರು ಕಾಲೇಜಿನ ಪ್ರಸಕ್ತ ಸಾಲಿನ ಸ್ಮರಣ ಸಂಚಿಕೆ “ಅಭ್ಯುದಯ”ವನ್ನು ಬಿಡುಗಡೆಗೊಳಿಸಿದರು. ಸಾಂಸ್ಕೃತಿಕ ಹಾಗೂ ಕ್ರೀಡಾ ವಿಭಾಗದಲ್ಲಿ ಏರ್ಪಡಿಸಿದ್ದ ಚಟುವಟಿಕೆಗಳಲ್ಲಿನ ವಿಜೇತರಿಗೆ ಗಣ್ಯರಿಂದ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ರೇವತಿ ಬನ್ನಟ್ಟಿ, ಗಗನಗೌಡ ಎಮ್.ಬಿ., ಗಣೇಶ, ಭವಾನಿ ಈ. ನಾಗ್ನೇಶ್ವರ. ವಸತಿನಿಲಯಗಳ ಪದಾಧಿಕಾರಿಗಳಾದ ಮಣಿಕಂಠ, ಸತೀಶ ಎನ್., ವರುಣ ಎಚ್.ಎಸ್. ಸಂಧೀಪ ಚಿಗಡೊಳ್ಳಿ, ತಾರಕರೇಶ್ವರಿ ಕೆ.ಆರ್., ದಿವ್ಯಭಾರತಿ ವಿ. ಹೆಗಡೆ ಮತ್ತು ಶಾಂತಾ ಮತ್ತಿತರು ಇದ್ದರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page