ಮೂಡಲಗಿ- ವಾಯುವ್ಯ ಪದವಿಧರ ಹಾಗೂ ವಾಯುವ್ಯ ಶಿಕ್ಷಕರ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳಾದ ಹನಮಂತ ನಿರಾಣಿ ಮತ್ತು ಅರುಣ ಶಹಾಪೂರ ಒಳ್ಳೆೆಯ ಚಾರಿತ್ಯ ಹಾಗೂ ಉತ್ತಮ ಹಿನ್ನಲೆಯಿಂದ ಬಂದ ಅಭ್ಯರ್ಥಿಗಳಾಗಿದ್ದು ಅವರನ್ನು ಮೊದಲ ಪ್ರಾಶಸ್ತದ ಮತಗಳನ್ನು ನಿಡುವ ಮೂಲಕ ಮತ್ತೋಮ್ಮೆ ತಮ್ಮ ಸೇವೆ ಮಾಡಲು ಅವಕಾಶ ನೀಡಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಶುಕ್ರವಾರ ಮೂಡಲಗಿ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿಗಳ ಪರವಾಗಿ ಶಿಕ್ಷಕ ಹಾಗೂ ಪದÀವಿದರರನ್ನು ಉದ್ದೇಶಿಸಿ ಮಾತನಾಡಿದರು,
ಶಿಕ್ಷಕರ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಇರುವ ಅರುಣ ಶಹಾಪೂರ ೩೩ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಾರೆ ಹೀಗಾಗಿ ಹಲವು ಶಿಕ್ಷಕರಿಗೆ ಅವರು ಬೇಟ್ಟಿಯಾಗಿಲ್ಲ ಎಂಬ ಕೊರಗುಬೇಡಾ, ಜಿಲ್ಲೆಯಲ್ಲಿ ಬಿಜೆಪಿಯ ೧೩ ಶಾಸಕರು ೩ ಲೋಕಸಭಾ ಸದಸ್ಯರು ಹಾಗೂ ನಾನು ರಾಜ್ಯಸಭಾ ಸದಸ್ಯ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಿದ್ದರಿದ್ದೆವೆ, ದಿನದ ೧೨ ಗಂಟೆಗಳ ಕಾಲ ನಾನು ನಿಮ್ಮ ಸೇವೆಗಾಗಿ ಸಿದ್ದನಿದ್ದೇನೆ ಎಂದರು,
ಹನಮಂತ ನಿರಾಣಿಯವರು ಸಾಕಷ್ಟು ಯುವಕರಿಗೆ ತಮ್ಮ ಕಾರ್ಖಾನೆಯಲ್ಲಿ ಉದೋಗ ನೀಡುವ ಮೂಲಕ ನಿರುದೋಗ ಸಮಸ್ಯೆ ಬಗೆಹರಿಸಿದ್ದಾರೆ ಭಾರತೀಯ ಜನತಾ ಪಕ್ಷವು ಇಬ್ಬರಿಗೂ ಮತ್ತೋಮ್ಮೆ ಅವಕಾಶ ನೀಡಿದ್ದು ಅವರನ್ನು ಅಧಿಕ ಮತಗಳ ಮೂಲಕ ವಿಧಾನ ಪರಿಷತಗೆ ಆರಿಸಿ ಕಳಿಸಬೇಕು ಎಂದರು,
ದೇಶ ಸುಬಿಕ್ಷೆಯಾಗಿ ಮುಂದುವರೆಯಲು ಪ್ರಧಾನಿ ನರೇಂದ್ರ ಮೋದಿ ಸಾಕಷ್ಟು ಯೋಜನೆಗಳನ್ನು ತಂದಿದ್ದಾರೆ, ಕಲಿತ ಯುವಕರು ನೌಕರಿಯನ್ನೆ ನೆಚ್ಚಿಕೊಳ್ಳುವ ಬದಲು ಸ್ವಯಂ ಉದ್ಯೋಗಕ್ಕಾಗಿ ಮುದ್ರಾಯೋಜನೆ, ಸ್ಕೀಲ್ ಇಂಡಿಯಾ ಯೋಜನೆಗಳನ್ನು ಜಾರಿಗೆ ತಂದಿದ್ದು, ರೈತರ ಮಗ,ಕ್ಷೌರಿಕನ ಮಗ ಯಾವ ರೀತಿ ಹೊಸ ಜಗತ್ತಿಗೆ ಹೊಸ ತಂತ್ರಜ್ಞಾನದೊoದಿಗೆ ಹೇಗೆ ಬದುಕಬೇಕು ಎಂದು ಯೋಜನೆ ನಿರೋಪಿಸಿದ್ದಾರೆ ಮತ್ತು ಎಸ್ ಎಸ್ ಎಲ್ ಸಿ ಪರಿಕ್ಷೆಯಿಂದಲೇ ಮಕ್ಕಳು ಪ್ರಜ್ಞಾವಂತರಾಗಲಿ ಉದ್ದೇಶದಿಂದ ದೇಶದ ಪ್ರಧಾನಿ ಆ ಮಕ್ಕಳ ಜೊತೆಗೆ ಸಂವಾದ ನಡೆಸಿ ಅವರಲ್ಲಿ ಜಾಗೃತಿ ಮೂಡಿಸಿದ್ದಾರೆ.
ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೋಮ್ಮಾಯಿ ಹಾಗೂ ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ಬಲ ಪಡಿಸಲು ಹನಮಂತ ನಿರಾಣಿ ಹಾಗೂ ಅರುಣ ಶಹಾಪೂರ ಅವರುಗಳನ್ನು ಮೊದಲ ಪ್ರಾಶಸ್ತದ ಮತಗಳ ಮೂಲಕ ಪುನರಾಯ್ಕೆಮಾಡಬೇಕು ಎಂದರು,
ಕಾಲೇಜಿನ ಪ್ರಚಾರ್ಯ ಡಾ ಆರ್ ಎ ಶಾಸ್ತಿçಮಠ ಸಂಸ್ಥೆಯ ಆಡಳಿತ ಮಂಡಳಿಯ ಪರವಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಮತ ನೀಡುವದಾಗಿ ವಾಗ್ದಾನ ಮಾಡಿದರು,
ಪ್ರಸ್ತಾವಿಕವಾಗಿ ಮಾತನಾಡಿದ ವೈಧ್ಯ ಬಸವರಾಜ ಪಾಲಭಾಂವಿ ಅರುಣ ಶಹಾಪೂರ ಮತ್ತು ಹನಮಂತ ನಿರಾಣಿಯವರನ್ನು ಅಧಿಕ ಮತಗಳಿಂದ ಆರಿಸಿಕಳಿಸಬೇಕು ಎಂದರು,
ವೇದಿಕೆಯ ಮೇಲೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲ್ಕರ, ಉಪಾಧ್ಯಕ್ಷ ಸುಭಾಸ ಸೋನವಾಲ್ಕರ,ಬಿಜೆಪಿ ಮುಖಂಡರಾದ ಮಲ್ಲಪ್ಪ ನೇಮಗೌಡರ,ಪ್ರಕಾಶ ಮಾದರ, ತಮ್ಮಣ್ಣ ದೇವರ ಇದ್ದರು,
ಸಾಹಿತಿ ಸಂಗಮೇಶ ಗುಜಗೊಂಡ ನಿರೋಪಿಸಿ ವಂದಿಸಿದರು.