ಮೂಡಲಗಿ: ಕಳೆದ ಎಪ್ರೀಲ್ ನಲ್ಲಿ ಜರುಗಿದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ೬೨೩ ಅಂಕ ಪಡೆದ ಮೂಡಲಗಿ ಶೈಕ್ಷಣಿಕ ವಲಯದ ಕೌಜಲಗಿ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಮಹಾಲಕ್ಷ್ಮಿ ತಳವಾರ ಮರು ಮೌಲ್ಯ ಮಾಪನದಲ್ಲಿ ೬೨೫ ಕ್ಕೆ ೬೨೫ ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಗಳಿಸಿರುವದಾಗಿ ಮೂಡಲಗಿ ಬಿಇಒ ಅಜೀತ ಮನ್ನಿಕೇರಿ ತಿಳಿಸಿದ್ದಾರೆ.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಫಲಿತಾಂಶ ಸಂದರ್ಭದಲ್ಲಿ ಇಂಗ್ಲೀಷ ಮತ್ತು ವಿಜ್ಞಾನ ವಿಷಯಗಳಿಗೆ ತಲಾ ೯೯ ಅಂಕ ಪಡೆದಿದ್ದಳು, ಮರು ಮೌಲ್ಯಮಾಪನದಲ್ಲಿ ೧೦೦ ಅಂಕ ಪಡೆಯುವ ಮೂಲಕ ಯಶಸ್ವಿ ಸಾಧನೆ ಗೈದಿದ್ದಾಳೆ, ವಿದ್ಯಾರ್ಥಿನಿಯ ಈ ಸಾಧನೆಗೆ ಕಹಾಮಾ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ, ಬಿಇಒ ಅಜೀತ ಮನ್ನಿಕೇರಿ, ಮುಖ್ಯೋಪಾಧ್ಯಾಯ ಸುಭಾಸ ವಲ್ಯಾಪೂರ ಮತ್ತು ಎಸ್.ಡಿ.ಎಮ್.ಸಿ ಪದಾಧಿಕಾರಿಗಳು ಶಿಕ್ಷಕ ವೃಂದದವರು ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತ ಪಡಿಸಿ ಅಭಿನಂದಿಸಿದ್ದಾರೆ.
