ಮೂಡಲಗಿ: ಸ್ಥಳೀಯ ಶ್ರೀ ವಿಠ್ಠಲ ಮಂದಿರದಲ್ಲಿ ನಾಮದೇವ ಶಿಂಪಿ ಸಮಾಜ ನಡೆಸಿದ ಸಭೆಯಲ್ಲಿ, ಬೆಳೆಯುತ್ತಿರುವ ಈ ಯುಗದಲ್ಲಿ ಎಲ್ಲಾ ಸಮಾಜದಲ್ಲಿ ಇರುವಂತೆ ನಾಮದೇವ ಶಿಂಪಿ ಸಮಾಜದಲ್ಲೂ ಕೂಡ ಯುವಕರ ಸಂಘಟನೆ ಅವಶ್ಯಕವಾಗಿದ್ದು ಸಮಾಜದ ಕಾರ್ಯಗಳ ಜೊತೆಯಲ್ಲಿ ಸಮಾಜಮುಖಿ ಕೆಲಸಗಳನ್ನು ನಿರ್ವಹಿಸಲು ಯುವಕರು ಮುಂದಾಗಬೇಕಾಗಿದೆ. ಅದಕ್ಕಾಗಿ ಸ್ಥಳೀಯ ನಾಮದೇವ ಶಿಂಪಿ ಯುವಕರನ್ನು ಸೇರಿಸಿ ಸಭೆಯಲ್ಲಿ ಚರ್ಚೆ ಮಾಡಿ ಸಮಾಜದ ಹಿರಿಯರೆಲ್ಲರೂ ಶೀಘ್ರದಲ್ಲೇ ಯುವಕ ಸಂಘವನ್ನು ಸ್ಥಾಪನೆ ಮಾಡಲು ನಿರ್ಧರಿಸಿದರು.
ಈ ಸಂಧರ್ಭದಲ್ಲಿ ಅಧ್ಯಕ್ಷರಾದ ಶ್ರೀರಂಗ ಮಂದ್ರೋಳಿ, ಉಪಾಧ್ಯಕ್ಷರಾದ ಗಂಗಾರಾಮ ರೇಳೆಕರ, ಕಾರ್ಯದರ್ಶಿ ಜಗದೀಶ್ ಮಂದ್ರೋಳಿ, ಸದಸ್ಯರಾದ ಪಾಂಡುರಂಗ ಮಹೇಂದ್ರಕರ, ಪಾಂಡುರಂಗ ಮಂದ್ರೋಳಿ, ಅಶೋಕ ಇತಾಪೆ, ಗಜಾನನ ರೇಳೆಕರ, ಶಂಕರ ಕೊಂಕಣಿ, ಪುಂಡಲೀಕ ರೇಳೆಕರ, ಶ್ರೀಪಂತ ಹಾವಳ, ಪ್ರಕಾಶ ಮಂದ್ರೋಳಿ ಮತ್ತು ಯುವಕರು ಹಾಜರಿದ್ದರು.
