ಸೋಮವಾರ , ಅಕ್ಟೋಬರ್ 3 2022
kn
Breaking News

ಸುಳ್ಳು ಹೇಳುತ್ತಿರುವ ಗಡಾದಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ : ಢವಳೇಶ್ವರ-ಕೊಪ್ಪದ ಹೇಳಿಕೆ

Spread the love

ಮೂಡಲಗಿ : ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕೆಲವರು ಅಭಿವೃದ್ಧಿ ಕಾರ್ಯಗಳಲ್ಲಿ ಉದ್ಧೇಶಪೂರ್ವಕವಾಗಿ ರಾಜಕಾರಣ ಮಾಡುತ್ತಿದ್ದಾರೆ. ರೈತರು ಮತ್ತು ಜನರ ದಾರಿ ತಪ್ಪಿಸುತ್ತಿರುವ ಇಂತಹ ಅಭಿವೃದ್ಧಿ ವಿರೋಧಿಗಳಿಗೆ ಶಾಸಕರು ಮಾಡಿರುವ ಪ್ರಗತಿಪರ ಕಾಮಗಾರಿಗಳು ಕಣ್ಣಿಗೆ ಕಾಣುವುದಿಲ್ಲವೇ ಎಂದು ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ ಮತ್ತು ಜಿಪಂ ಸದಸ್ಯ ಗೋವಿಂದ ಕೊಪ್ಪದ ಅವರು ಗಡಾದಗೆ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಜಂಟೀ ಹೇಳಿಕೆಯನ್ನು ನೀಡಿರುವ ಅವರು, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ೨೦೦೪ ರಿಂದ ಈ ಭಾಗದ ಶಾಸಕರಾಗಿ ನೂರಾರು ಕೋಟಿ ರೂ.ಗಳ ಅನುದಾನದಲ್ಲಿ ಅರಭಾವಿ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಾನಾ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ. ೨೦೦೪ರ ಕ್ಕಿಂತ ಮುಂಚೆ ಶಾಸಕರಾಗಿದ್ದವರು ಈ ಕ್ಷೇತ್ರಕ್ಕೆ ಯಾವ ಕೊಡುಗೆಯನ್ನೂ ನೀಡಿಲ್ಲ. ಕೇವಲ ಪ್ರತಿ ಗ್ರಾಮಗಳಲ್ಲಿ ಒಂದಿಬ್ಬರನ್ನು ಕಟ್ಟಿಕೊಂಡು ಅವರ ಅಣತಿಯಂತೆ ಕೆಲಸ ಮಾಡುತ್ತಿರುವುದನ್ನು ಕ್ಷೇತ್ರದ ಜನ ಕಂಡಿದ್ದಾರೆ.
ಬಾಲಚAದ್ರ ಜಾರಕಿಹೊಳಿ ಅವರ ವಿಶೇಷ ಪ್ರಯತ್ನದಿಂದ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ೧೦೦ ಕೋಟಿ ರೂ.ಗಳ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿಗಳಿಗೆ ಟೆಂಡರ್ ಸಹ ಕರೆಯಲಾಗಿದೆ. ಆದರೆ ಎಲ್ಲ ಗ್ರಾಮಗಳಿಗೆ ಗಡಾದ ತೆರಳಿ ರಸ್ತೆ ಕಾಮಗಾರಿಗೆ ಅನುದಾನವನ್ನು ನಾನೇ ತಂದಿದ್ದು ಎಂದು ನಾಟಕ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೇ ಕೇವಲ ಪತ್ರಿಕಾ ಹೇಳಿಕೆಗಳನ್ನು ಕೊಟ್ಟು ಜನರನ್ನು ಗೊಂದಲಕ್ಕೀಡು ಮಾಡುತ್ತಿದ್ದಾರೆ. ಇಂತಹವರಿಗೆ ಜನರೇ ಸರಿಯಾದ ಬುದ್ದಿ ಕಲಿಸುವಂತೆಯೂ ಢವಳೇಶ್ವರ ಹಾಗೂ ಕೊಪ್ಪದ ತಿಳಿಸಿದ್ದಾರೆ.
ಹದಗೆಟ್ಟ ರಸ್ತೆಗಳನ್ನು ಈಗಾಗಲೇ ದುರಸ್ತಿ ಮಾಡುವ ಕಾಮಗಾರಿಗಳು ಪ್ರಗತಿಯಲ್ಲಿವೆ. ಅಲ್ಲದೇ ಘಟಪ್ರಭಾ ಎಡದಂಡೆ ಮತ್ತು ಬಲದಂಡೆ ಕಾಲುವೆಗಳ ಆಧುನೀಕರಣಕ್ಕೆ ಸರ್ಕಾರದಿಂದ ಸುಮಾರು ನೂರಾರು ಕೋಟಿ ರೂ.ಗಳಷ್ಟು ಅನುದಾನವನ್ನು ತಂದಿದ್ದಾರೆ. ಸಣ್ಣಪುಟ್ಟ ದುರಸ್ತಿ ಕಾರ್ಯಗಳನ್ನು ಸಹ ಮಾಡುತ್ತ ರೈತರ ಜಮೀನುಗಳಿಗೆ ನೀರು ಹರಿಸಲು ಕಾರಣೀಕರ್ತರಾಗಿದ್ದಾರೆ. ಇಡೀ ಕ್ಷೇತ್ರವನ್ನು ಹಸಿರುಮಯವನ್ನಾಗಿ ಮಾಡುವ ಮೂಲಕ ಸಂಪೂರ್ಣ ನೀರಾವರಿ ಪ್ರದೇಶವನ್ನಾಗಿ ಮಾಡುವ ಸಂಕಲ್ಪ ತೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಕಾಲುವೆಗಳ ಕಾರ್ಯನಿರ್ವಹಣೆಗಾಗಿ ತಮ್ಮ ಗೃಹ ಕಛೇರಿ ಎನ್‌ಎಸ್‌ಎಫ್ ಅತಿಥಿ ಗೃಹದ ಸಿಬ್ಬಂದಿಗಳನ್ನು ನಿಯೋಜಿಸಿ ದಿನಂಪ್ರತಿ ರೈತರ ಅಹವಾಲುಗಳಿಗೆ ಸ್ಪಂದಿಸುತ್ತಿದ್ದಾರೆ. ಇದನ್ನೆಲ್ಲ ಗಮನಿಸದ ಜೆಡಿಎಸ್ ಮುಖಂಡ ಭೀಮಪ್ಪ ಗಡಾದ ಅವರು ಸುಖಾ ಸುಮ್ಮನೆ ಆರೋಪ ಮಾಡುತ್ತಿರುವುದು ಸರಿ ಅಲ್ಲಾ. ಅಭಿವೃದ್ಧಿ ಕಾರ್ಯಗಳಲ್ಲಿ ವಿನಾಕಾರಣ ರಾಜಕಾರಣ ಬೆರೆಸುವುದು ಯೋಗ್ಯವಲ್ಲ. ೩೦ ವರ್ಷಗಳ ಕಾಲ ಅರಭಾವಿ ಕ್ಷೇತ್ರವನ್ನು ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಂಡು ಆಳಿರುವ ದಿ. ವಿ.ಎಸ್. ಕೌಜಲಗಿ ಅವರ ಆಡಳಿತ ಹೇಗಿತ್ತು ಎಂಬುದು ಪ್ರತಿಯೊಬ್ಬರೂ ಬಲ್ಲರು ಎಂದು ಗಡಾದಗೆ ತಿರುಗೇಟು ನೀಡಿದ್ದಾರೆ.
ಇನ್ನು ಕ್ಷೇತ್ರದ ಬಡ ಕುಟುಂಬಗಳಿಗೆ ಸೂರು ಒದಗಿಸಲು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ೩ ವರ್ಷಗಳಲ್ಲಿ ಅತೀವೃಷ್ಠಿ ಹಾಗೂ ಪ್ರವಾಹದಿಂದ ಹಾನಿಗೊಳಗಾದ ಸುಮಾರು ೧೦ ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ವಸತಿ ಸೌಕರ್ಯ ಕಲ್ಪಿಸಿಕೊಟ್ಟಿದ್ದಾರೆ. ಶಾಸಕರು ಸರ್ಕಾರದಿಂದ ಮನೆಗಳನ್ನು ಮಂಜೂರು ಮಾಡಿಸಿ ತಂದಿದ್ದರೂ ಅದನ್ನು ಗಡಾದ ಅವರು ಸ್ವ ಹಿತಾಸಕ್ತಿಗೆ ನಾನೇ ಮಂಜೂರು ಮಾಡಿಸಿದ್ದೆಂದು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಮನೆಗಳ ವಿಷಯದಲ್ಲಿ ರಾಜಕೀಯ ಮಾಡುತ್ತಿರುವ ಗಡಾದ ಅವರು ತಮ್ಮ ಅಲ್ಪ ಬೆಂಬಲಿಗರನ್ನು ಕೂಡಿಸಿಕೊಂಡು ಪ್ರತಿಭಟನೆಯ ನಾಟಕ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಅವರುಗಳು ಪ್ರಶ್ನಿಸಿದ್ದಾರೆ.
ಬಾಲಚಂದ್ರ ಜಾರಕಿಹೊಳಿ ಅವರು ಶಾಸಕರಾದ ನಂತರ ಅರಭಾವಿ ಕ್ಷೇತ್ರದ ಹಣೆ ಬರಹ ಸಂಪೂರ್ಣ ಬದಲಾಗುತ್ತಿದೆ. ಇವರು ಸಾಧಿಸಿರುವಷ್ಟು ಪ್ರಗತಿಪರ ಕಾರ್ಯಗಳು ಯಾರ ಅವಧಿಯಲ್ಲಿಯೂ ಆಗಿಲ್ಲ. ಬೇಕಾದರೆ ಅಭಿವೃದ್ಧಿ ಕಾರ್ಯಗಳಲ್ಲಿ ಒಂದೇ ವೇದಿಕೆಯಲ್ಲಿ ಬಂದು ಚರ್ಚೆ ನಡೆಸಲಿ. ಅದಕ್ಕೆ ನಾವು ಸಿದ್ಧರಿದ್ದೇವೆ ಎಂದು ಢವಳೇಶ್ವರ ಮತ್ತು ಕೊಪ್ಪದ ಜಂಟೀ ಹೇಳಿಕೆಯಲ್ಲಿ ತಿಳಿಸಿದ್ದಾರೆ.


Spread the love

About Kenchappa Meesi

Check Also

ಡಾ.ಅಶೋಕ ದಳವಾಯಿಯವರ ಜೀವಮಾನ ಸಾಧನೆಗೆ ‘ಪೋಷಕ ಅನಾಜ’ ಪ್ರಶಸ್ತಿ

Spread the loveಮೂಡಲಗಿ: ಭಾರತ ಸರಕಾರದ ಹಿರಿಯ ಅಧಿಕಾರಿ, ಕೃಷಿತಜ್ಞ ಮತ್ತು ಅನುಭವಿ ಆಡಳಿತಗಾರರಾದ ಡಾ.ಅಶೋಕ ದಳವಾಯಿಯವರ ಜೀವಮಾನ ಸಾಧನೆ …

11 comments

  1. Its like you read my mind! You seem to understand so much about this, such as you wrote the ebook in it or something. I believe that you just can do with a few p.c. to drive the message house a little bit, but instead of that, that is great blog. A fantastic read. I will certainly be back.

  2. Good day very cool blog!! Guy .. Excellent .. Superb .. I’ll bookmark your blog and take the feeds also…I am happy to find a lot of helpful information here in the put up, we want develop more strategies on this regard, thanks for sharing.

  3. I have recently started a web site, the information you offer on this site has helped me greatly. Thanks for all of your time & work.

  4. You actually make it seem so easy with your presentation but I find this topic to be actually something which I think I would never understand. It seems too complicated and very broad for me. I am looking forward for your next post, I will try to get the hang of it!

  5. Have you ever thought about including a little bit more than just your articles? I mean, what you say is valuable and everything. Nevertheless think about if you added some great images or videos to give your posts more, “pop”! Your content is excellent but with pics and clips, this website could definitely be one of the best in its niche. Superb blog!

  6. I really glad to find this internet site on bing, just what I was searching for : D too saved to my bookmarks.

  7. obviously like your web site but you need to check the spelling on several of your posts. Many of them are rife with spelling problems and I in finding it very bothersome to inform the reality nevertheless I will definitely come back again.

  8. It is really a nice and useful piece of info. I’m glad that you shared this helpful information with us. Please keep us up to date like this. Thank you for sharing.

  9. Hey would you mind sharing which blog platform you’re working with? I’m going to start my own blog in the near future but I’m having a tough time deciding between BlogEngine/Wordpress/B2evolution and Drupal. The reason I ask is because your design and style seems different then most blogs and I’m looking for something unique. P.S Apologies for getting off-topic but I had to ask!

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

error: Content is protected !!