ಮೂಡಲಗಿ: ಮೂಡಲಗಿ ಶಿಕ್ಷಣ ಸಂಸ್ಥೆಯ ಪ್ರೌಢ ಶಾಲೆಯಲ್ಲಿ ದಿನಾಂಕ 15-3-2022 ರಂದು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬೀಳ್ಕೋಡುವ ಸಮಾರಂಭ ಜರುಗಿತು. ಅಧ್ಯಕ್ಷರು ಎಸ್ ಆರ್ ಸೋನವಾಲ್ಕರ ಉಪಾಧ್ಯಕ್ಷರು ಎಂ ಈ ಎಸ್ ಮೂಡಲಗಿ.
ಅತಿಥಿಗಳು ಡಾ. ಸಂಜಯ್ ಅಪ್ಪಯ್ಯ ಶಿಂಧಿಹಟ್ಟಿ ಅಧ್ಯಕ್ಷರು ಕ ಸಾ ಪ ಮೂಡಲಗಿ ಘಟಕ ಮಾತನಾಡಿ ಪ್ರೌಢ ವಯಸ್ಸು ಎಲ್ಲ ಸಾಧನೆಗಳಿಗೆ ಅಡಿಪಾಯ ಇದ್ದಹಾಗೆ ಸಮೂಹ ಮಾಧ್ಯಮಗಳನ್ನು ವಿವೇಕದಿಂದ ಬಳಸಬೇಕು ಈ ವಯಸ್ಸಿನಲ್ಲಿ ಸದ್ಗುಣ ಮತ್ತು ಸತ್ ಬುದ್ಧಿ ಬಳಸಿಕೊಳ್ಳುತ್ತಾ ಉತ್ಸಾಹಿಗಳಾಗಿರಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ವಿದ್ಯಾರ್ಥಿಗಳಲ್ಲಿ ತೀವ್ರವಾದ ಬಯಕೆ ಸಾಧಿಸುವ ಛಲ ಪರಿಶ್ರಮ ಬದ್ಧತೆ ಮತ್ತು ಸಾಧನೆಯಲ್ಲಿ ನಿರಂತರತೆ ಇರಬೇಕು ಎಂದು ಹೇಳಿದರು.
2021 22ರ ಸಾಲಿನ ಆದರ್ಶ ವಿದ್ಯಾರ್ಥಿಯಾಗಿ ಸಲೀಮ್ ತಾಬೋಳಿ ಹಾಗೂ ಆದರ್ಶ ವಿದ್ಯರ್ಥಿನಿಯಾಗಿ ಐಶ್ವರ್ಯ ಅಡಿಹುಡಿ ಆಯ್ಕೆಯಾದರು. ಶಿಕ್ಷಕರ ಪರವಾಗಿ ಶ್ರೀ ಸಿ ಎಂ ಹಂಜಿ ಮಾತನಾಡಿದರು. ವೇದಿಕೆ ಮೇಲೆ ಸಂಸ್ಥೆಯ ನಿರ್ದೇಶಕರಾದ ಶ್ರೀ ವೆಂಕಟೇಶ್ ಸೋನವಾಲ್ಕರ ಶ್ರೀ ಅನಿಲ್ ಸತರಡ್ಡಿ, ರಾಘವೇಂದ್ರ ಸವಳೇಕರ್, ಉಪಪ್ರಾಚಾರ್ಯರಾದ ಶ್ರೀ ಕೆ ಎಸ್ ಹೊಸಟ್ಟಿ ಶಿಕ್ಷಕರಾದ ಶ್ರೀ ಸಿ ಎಸ್ ಕಾಂಬಳೆ ಶ್ರೀ ಆರ್ ಬಿ ಗಂಗರಡ್ಡಿ ಶ್ರೀ ಎಸ್ ಆರ್ ಗಲಗಲಿ ಶ್ರೀ ಆರ್ ಕೆ ಕಳಸನ್ನವರ್ ಶ್ರೀ ಆರ್ ಎ ಹೊಸಟ್ಟಿ ಹಾಜರಿದ್ದರು.
ರಾಘವೇಂದ್ರ ಸವಳೇಕರ ತಾನು ಕಲಿತ 2001 2002 ರ ಶಾಲಾ ಪ್ರಧಾನಮಂತ್ರಿಯಾಗಿ ಹೋದ ಎಸ್ ಎಸ್ ಆರ್ ಪ್ರೌಢಶಾಲೆಗೆ ಧ್ವನಿವರ್ಧಕವನ್ನು ದೇಣಿಗೆಯ ರೂಪದಲ್ಲಿ ನೀಡಿ ಮುಂಬರುವ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ.
ಬಿ ಕೆ ಕಾಡಪ್ಪಗೋಳ ಸ್ವಾಗತಿಸಿದರು. ಯು ಬಿ ದಳವಾಯಿ ವಂದಿಸಿದರು, ಆರ್ ಎಂ ಕಾಂಬಳೆ ನಿರೂಪಿಸಿದರು.